ತಮ್ಮದೇ ಕಾರಿನಲ್ಲಿ ಮೋದಿಯನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು, ಕೈಮುಗಿದ ಇಥಿಯೋಪಿಯನ್ ಪ್ರಧಾನಿ

Updated on: Dec 17, 2025 | 5:05 PM

ಇಥಿಯೋಪಿಯನ್ ಪ್ರಧಾನಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ವಿದಾಯ ಹೇಳಲು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ವಿಮಾನ ನಿಲ್ದಾಣಕ್ಕೆ ಕರೆದೊಯ್ದಿದ್ದಾರೆ. ಪ್ರಧಾನಿ ಮೋದಿ ಎರಡು ದಿನಗಳ ಭೇಟಿಗಾಗಿ ಇಥಿಯೋಪಿಯಾಕ್ಕೆ ಆಗಮಿಸಿದಾಗ ಆಫ್ರಿಕನ್ ರಾಷ್ಟ್ರಕ್ಕೆ ಅವರ ಮೊದಲ ದ್ವಿಪಕ್ಷೀಯ ಪ್ರವಾಸವಾಗಿತ್ತು. ಇಥಿಯೋಪಿಯನ್ ಪ್ರಧಾನಿ ಅಬಿ ಅಹ್ಮದ್ ಅಲಿ ಅವರನ್ನು ಅಡಿಸ್ ಅಬಾಬಾ ವಿಮಾನ ನಿಲ್ದಾಣದಲ್ಲಿ ವೈಯಕ್ತಿಕವಾಗಿ ಬರಮಾಡಿಕೊಂಡು ಹೋಟೆಲ್‌ಗೆ ಕರೆದೊಯ್ಯುವ ಮೂಲಕ ಗಮನಸೆಳೆದಿದ್ದರು. ಇಥಿಯೋಪಿಯನ್ ಪ್ರಧಾನಿ ಇಂದು ಮತ್ತೊಮ್ಮೆ ಪ್ರಧಾನಿ ಮೋದಿ ಅವರನ್ನು ತಮ್ಮ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ವೈಯಕ್ತಿಕವಾಗಿ ವಿದಾಯ ಹೇಳಿದ್ದಾರೆ.

ನವದೆಹಲಿ, ಡಿಸೆಂಬರ್ ಸಾಮಾನ್ಯವಾಗಿ ಪ್ರತಿ ದೇಶದಲ್ಲೂ ಆಯಾ ದೇಶದ ಪ್ರಧಾನಿ, ಅಧ್ಯಕ್ಷರಿಗೆ ಪ್ರೋಟೋಕಾಲ್ ಇರುತ್ತದೆ. ಆದರೆ, ಆ ಪ್ರೋಟೋಕಾಲ್ ಅನ್ನು ಬದಿಗಿಟ್ಟು ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರು ತಮ್ಮ ದೇಶಕ್ಕೆ ಆಗಮಿಸಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ತಮ್ಮದೇ ಕಾರಿನಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿಕೊಂಡು ಹೋಟೆಲ್​ಗೆ ಕರೆದೊಯ್ಯುವ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದರು. ಇಂದು ಅವರು ಮತ್ತೆ ತಾವೇ ತಮ್ಮ ಕಾರಿನಲ್ಲಿ ಮೋದಿಯವರನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ, ತಾವೇ ಖುದ್ದಾಗಿ ವಿಮಾನ ಹತ್ತಿಸಿ, ಕೈಮುಗಿದು ಬೀಳ್ಕೊಟ್ಟಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ. ಇಥಿಯೋಪಿಯನ್ ಪ್ರಧಾನಿಯ ಈ ಬಾಂಧವ್ಯಕ್ಕೆ ಮತ್ತು ಆತಿಥ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ