ಜಾತ್ರೆಯಂತೆ ಕಾಣುತ್ತಿದ್ದ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಜನರೇ ಇಲ್ಲ, ಎಲ್ಲ ವೀಕೆಂಡ್ ಕರ್ಫ್ಯೂ ಪ್ರಭಾವ!

ತಮಿಳುನಾಡು ಮತ್ತು ಕೇರಳ ರಾಜ್ಯದ ಬಸ್​ಗಳು ಇದೇ ನಿಲ್ದಾಣಕ್ಕೆ ಬರುತ್ತವೆ. ಈ ಬಸ್ ನಿಲ್ದಾಣ 1920 ರಲ್ಲಿ ಕಟ್ಟಲಾಯಿತು ಎಂದು ಇತಿಹಾಸ ನಮಗೆ ಹೇಳುತ್ತದೆ. ನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವೆಲ್ಲ ಗಲೀಜಿನಿಂದ ಗಬ್ಬು ನಾರುತಿದ್ದರಿಂದ ಅದನ್ನು ರಿನೋವೇಟ್ ಮಾಡುವ ಕಾರ್ಯ 2016ರಲ್ಲಿ ಕೈಗೆತ್ತಿಕೊಳ್ಳಲಾಯಿತು.

ಈ ವಿಡಿಯೋನಲ್ಲಿ ಕಾಣಿಸುತ್ತಿರುವ ಸ್ಥಳ ಬೆಂಗಳೂರಿನ ಕಲಾಸಿಪಾಳ್ಯ (Kalasipalya,) ಅಂದರೆ ನೀವು ನಂಬ್ತೀರಾ? ಇದು ಕರ್ನಾಟಕ ಸರ್ಕಾರ ಹೇರಿರುವ ವೀಕೆಂಡ್ ಕರ್ಫ್ಯೂ ಪ್ರಭಾವ ಮಾರಾಯ್ರೇ. ಇಂದು (ಶನಿವಾರ) ವಾರಾಂತ್ಯ ಕರ್ಫ್ಯೂನ (weekend curfew) ಎರಡನೇ ದಿನ ಆರಂಭವಾಗಿದೆ. ಬೇರೆ ದಿನಗಳಲ್ಲಾದರೆ ಕಲಾಸಿಪಾಳ್ಯ ಜನರಿಂದ ಕಿಕ್ಕಿರಿದಿರುತ್ತದೆ. ಶನಿವಾರ ಮತ್ತು ರವಿವಾರಗಳಂತೂ ಕಲಾಸಿಪಾಳ್ಯದಲ್ಲಿ ಕಾಲಿಡಲೂ ಕಷ್ಟವಾಗುವ ಸ್ಥಿತಿ ಇರುತ್ತದೆ. ಕಲಾಸಿಪಾಳ್ಯ ಮಾರುಕಟ್ಟೆ ಪ್ರದೇಶ ಶನಿವಾರ ಬೆಳಗ್ಗೆ ಹೇಗೆ ಕಾಣಿಸುತಿತ್ತು ಅನ್ನುವುದನ್ನು ಟಿವಿ9 ಬೆಂಗಳೂರು ವರದಿಗಾರ ವಿನಯ್ ಕಾಶಪ್ಪನವರ್ ಈ ವಿಡಿಯೋನಲ್ಲಿ ವಿವರಿಸಿದ್ದಾರೆ. ಇಲ್ಲಿ ನಿಮಗೆ ಬಸ್ ನಿಲ್ದಾಣ ಕಾಣಿಸುತ್ತದೆ. ಇದು ಕೆ ಎಸ್ ಆರ್ ಟಿ ಸಿ, ಬಿ ಎಮ್ ಟಿ ಸಿ (KSRTC-BMTC) ಮತ್ತು ಖಾಸಗಿ ಬಸ್ಗಳು ನಿಲ್ಲುವ ಸ್ಥಳ. ಆದರೆ ಶನಿವಾರ ಎಲ್ಲ ವಾಹನಗಳು ನಿಶ್ಚಲ ಸ್ಥಿತಿಯಲ್ಲಿದ್ದವು. ಚಲಿಸಿದರೆ ದಂಡ ಬೀಳುತ್ತದೆ.

ಸಾಮಾನ್ಯ ದಿನಗಳಲ್ಲಿ ಈ ಬಸ್ ನಿಲ್ದಾಣ ಸಮಾರು 8-10 ಲಕ್ಷ ಪ್ರಯಾಣಿಕರನ್ನು ಕಾಣುತ್ತದೆ ಎಂದು ಹೇಳುತ್ತಾರೆ. ತಮಿಳುನಾಡು ಮತ್ತು ಕೇರಳ ರಾಜ್ಯದ ಬಸ್​ಗಳು ಇದೇ ನಿಲ್ದಾಣಕ್ಕೆ ಬರುತ್ತವೆ. ಈ ಬಸ್ ನಿಲ್ದಾಣ 1920 ರಲ್ಲಿ ಕಟ್ಟಲಾಯಿತು ಎಂದು ಇತಿಹಾಸ ನಮಗೆ ಹೇಳುತ್ತದೆ.

ನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವೆಲ್ಲ ಗಲೀಜಿನಿಂದ ಗಬ್ಬು ನಾರುತಿದ್ದರಿಂದ ಅದನ್ನು ರಿನೋವೇಟ್ ಮಾಡುವ ಕಾರ್ಯ 2016ರಲ್ಲಿ ಕೈಗೆತ್ತಿಕೊಳ್ಳಲಾಯಿತು. ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಈಗಲೂ ಪೂರ್ತಿಗೊಂಡಿಲ್ಲ.

ಕಲಾಸಿಪಾಳ್ಯ ಹೇಗಿದ್ದರೂ ಒಂದು ಜನಪ್ರಿಯ ಪ್ರದೇಶ ಮಾರಾಯ್ರೇ. ನಿಮಗೆ ಈ ಹೆಸರಲ್ಲಿ ಒಂದು ಕನ್ನಡ ಸಿನಿಮಾ ಕೂಡ ತಯಾರಾಗಿದ್ದು ನೆನಪಿರಬಹುದು. ವೀಕೆಂಡ್ ಕರ್ಫ್ಯೂ ನೆಪದಲ್ಲಿ ಈ ಪ್ರದೇಶದ ಬಗ್ಗೆ ಸ್ವಲ್ಪ ಮಾತಾಡುವ ಅವಕಾಶ ಸಿಕ್ಕಿತು.

ಇದನ್ನೂ ಓದಿ:    ನೀರಿಲ್ಲದಿದ್ದರೆ ಉಗುಳು ಸಾಕು ಎಂದು ಮಹಿಳೆಯ ತಲೆಕೂದಲು ಮೇಲೆ ಉಗುಳಿದ ಖ್ಯಾತ ಹೇರ್ ಸ್ಟೈಲಿಸ್ಟ್​​; ವಿಡಿಯೊ ವೈರಲ್

Click on your DTH Provider to Add TV9 Kannada