ವೀಕೆಂಡ್ ಕರ್ಫ್ಯೂನಲ್ಲೂ ‘ಕೊಪ್ಪಳದ ಮಲ್ಯ’ನಿಗೆ ದುಬಾರಿ ಹಣ ತೆತ್ತು ಮದ್ಯ ಖರೀದಿಸಿ ಕುಡಿದರು ಕೊಪ್ಪಳದ ಕುಡುಕರು!
ಅಂಗಡಿಗಳು ಮುಚ್ಚಿದ್ದರೂ ಕೊಪ್ಪಳದ ರೇಲ್ವೆ ನಿಲ್ದಾಣದ ಬಳಿ ಲಿಕ್ಕರ್ ಸಿಗುತ್ತಿದೆ ಮತ್ತು ಕುಡುಕರು ರಾಜಾರೋಷವಾಗಿ ರಸ್ತೆ ಮೇಲೆ ನಿಂತುಕೊಂಡು, ಆಟೋಗಳಲ್ಲಿ ಮತ್ತು ಮುಚ್ಚಿದ ಅಂಗಡಿಗಳ ಮುಂದೆ ಕೂತು ಕುಡಿಯುತ್ತಿದ್ದಾರೆ. ಅವರಿಗೆ ಮದ್ಯ ಎಲ್ಲಿಂದ ಸಿಕ್ಕಿತು ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಈ ವಿಡಿಯೋ ಅಂತ್ಯದಲ್ಲಿ ನಿಮಗೆ ಆ ‘ಕೊಪ್ಪಳ ಮಲ್ಯ’ ಕಾಣಿಸುತ್ತಾನೆ.
ಕೊಟ್ಟರೆ ಕೊಡ ಶಿವನೆ ಕುಡುಕನಲ್ಲದ ಗಂಡನ… ಅಂತೊಂದು ಜಾನಪದ ಗೀತೆ (folk song) ಇದೆ. ನೀವು ಅದನ್ನು ಕೇಳಿಸಿಕೊಂಡಿರಬಹುದು. ಬಹಳ ಅರ್ಥಗರ್ಭಿತವಾದ ಕವನ ಅದು. ಕುಡುಕ ಗಂಡ ಸಿಕ್ಕರೆ ಬದುಕಿನಲ್ಲಿ ತಾನು ಅನುಭವಿಸಬಹುದಾದ ಬವಣೆಯನ್ನು ಮಹಿಳೆ ಹಾಡಿನಲ್ಲಿ ವಿವರಿಸುತ್ತಾಳೆ. ಕುಡಿತ ಒಳ್ಳೆಯದಲ್ಲ ಅಂತ ಕುಡುಕರನ್ನು ಬಿಟ್ಟು ಎಲ್ಲರೂ ಹೇಳುತ್ತಾರೆ. ಕುಡಿತ, ಬೀಡಿ-ಸಿಗರೇಟು, ಜೂಜು ಮತ್ತು ಡ್ರಗ್ಸ್-ಇವು ಮನೆ ಮತ್ತು ಕುಟುಂಬ ಹಾಗೂ ಕುಟುಂಬದ ಸದಸ್ಯರ ನೆಮ್ಮದಿ ಹಾಳು ಮಾಡುವ ಚಟಗಳು ಮಾರಾಯ್ರೇ. ಇವುಗಳ ದಾಸ್ಯಕ್ಕೆ ಬಿದ್ದರೆ ವಿಮುಕ್ತರಾಗುವುದು ಬಹಳ ಕಷ್ಟ. ಇದನ್ನೆಲ್ಲ ಯಾಕೆ ಹೇಳಬೇಕಾಗಿದೆಯೆಂದರೆ, ಕೊಪ್ಪಳದಿಂದ ನಮಗೊಂದು ವಿಡಿಯೋ ಕ್ಲಿಪ್ಪಿಂಗ್ ಸಿಕ್ಕಿದೆ. ಇದು ಶನಿವಾರ ಬೆಳಗ್ಗೆ ಶೂಟ್ ಆಗಿದೆ. ರಾಜ್ಯದೆಲ್ಲೆಡೆ ವಾರಾಂತ್ಯದ ಕರ್ಫ್ಯೂನಿಂದಾಗಿ ಮದ್ಯದ ಅಂಗಡಿಗಳು ಸೇರಿದಂತೆ ಬೇರೆಲ್ಲ ಅಂಗಡಿಗಳು ಮುಚ್ಚಿದ್ದರೂ ಕೊಪ್ಪಳದ ರೇಲ್ವೆ ನಿಲ್ದಾಣದ ಬಳಿ ಲಿಕ್ಕರ್ ಸಿಗುತ್ತಿದೆ ಮತ್ತು ಕುಡುಕರು ರಾಜಾರೋಷವಾಗಿ ರಸ್ತೆ ಮೇಲೆ ನಿಂತುಕೊಂಡು, ಆಟೋಗಳಲ್ಲಿ ಮತ್ತು ಮುಚ್ಚಿದ ಅಂಗಡಿಗಳ ಮುಂದೆ ಕೂತು ಕುಡಿಯುತ್ತಿದ್ದಾರೆ. ಅವರಿಗೆ ಮದ್ಯ ಎಲ್ಲಿಂದ ಸಿಕ್ಕಿತು ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಈ ವಿಡಿಯೋ ಅಂತ್ಯದಲ್ಲಿ ನಿಮಗೆ ಆ ‘ಕೊಪ್ಪಳ ಮಲ್ಯ’ ಕಾಣಿಸುತ್ತಾನೆ.
ಈ ವಿಡಿಯೋದ ಅತ್ಯಂತ ಸ್ವಾರಸ್ಯಕರ ಅಂಶವೆಂದರೆ, ಆಟೋವೊಂದರಲ್ಲಿ ಮತ್ತು ಅದರ ಹೊರಗಡೆ ಕೂತು ಮದ್ಯ ಸೇವಿಸುತ್ತಿರುವ ಇಬ್ಬರು ಸ್ನೇಹಿತರ ನಡುವಿನ ಸಂಭಾಷಣೆ. ಅವರ ಜೊತೆಗೆ ವಿಡಿಯೋ ಮಾಡಿದ ವ್ಯಕ್ತಿಯೂ ಇದ್ದಾನೆ. ತಾವು ಕುಡಿಯುತ್ತಿರುವ ಮದ್ಯದ ಬ್ರ್ಯಾಂಡ್ ಯಾವುದು ಅಂತ ಹೇಳುತ್ತಾ ಆಟೋದೊಳಗೆ ಕೂತಿರುವವನು ಎಲ್ಲಕ್ಕಿಂತ ಉತ್ತಮ ಬ್ರ್ಯಾಂಡ್ ಯಾವುದು ಮತ್ತು ತನ್ನ ರೇಟಿಂಗ್ ಗೆ ಕಾರಣವೇನು ಅಂತ ವಿವರಿಸುತ್ತಾನೆ.
ಇದೇ ಕುಡುಕನ ಒಂದು ದಿನದ ಖರ್ಚು ರೂ. 400 ಅಂತೆ. ಅವನಿಗೆ ಮಧ್ಯಾಹ್ನ 2 ಪೆಗ್ ಮತ್ತು ರಾತ್ರಿ ಒಂದು ಪೆಗ್ಗ ಕಡ್ಡಾಯವಾಗಿ ಬೇಕೇಬೇಕಂತೆ. ಅದಕ್ಕೆ ಪ್ರತಿಕ್ರಿಯಿಸುವ ಮತ್ತೊಬ್ಬ ಕುಡುಕ ತಾನು ಬೆಳಗ್ಗೆಯಿಂದ ರಾತ್ರಿವರೆಗೆ ದುಡಿದರೆ ರೂ. 253 ಕೂಲಿ ಸಿಗುತ್ತದೆ ಹಾಗೂ ಕಮೀಶನ್ ರೂಪದಲ್ಲಿ ರೂ. 50 ಸಿಗುತ್ತದೆ. ಆದರೆ ತನ್ನ ಸ್ನೇಹಿತ ಬರೀ ಮದ್ಯ ಸೇವನೆಗೆ ಅಷ್ಟೊಂದು ಹಣ ಕೇವಲ ಕುಡಿತಕ್ಕೆ ಖರ್ಚು ಮಾಡುತ್ತಾನೆ ಎಂದು ಉದ್ಗರಿಸುತ್ತಾನೆ.
ಇದನ್ನೂ ಓದಿ: ಸರಕು ಸಾಗಣೆ ರೈಲಿನಿಂದಲೇ ವಸ್ತುಗಳನ್ನು ಲೂಟಿ ಮಾಡುವ ಕಳ್ಳರು; ಕಸದ ತೊಟ್ಟಿಯಾದ ರೈಲ್ವೆ ನಿಲ್ದಾಣ! ವಿಡಿಯೋ ಇಲ್ಲಿದೆ