ನೀರಿಲ್ಲದಿದ್ದರೆ ಉಗುಳು ಸಾಕು ಎಂದು ಮಹಿಳೆಯ ತಲೆಕೂದಲು ಮೇಲೆ ಉಗುಳಿದ ಖ್ಯಾತ ಹೇರ್ ಸ್ಟೈಲಿಸ್ಟ್​​; ವಿಡಿಯೊ ವೈರಲ್

ನೀರಿಲ್ಲದಿದ್ದರೆ ಉಗುಳು ಸಾಕು ಎಂದು  ಮಹಿಳೆಯ ತಲೆಕೂದಲು ಮೇಲೆ ಉಗುಳಿದ ಖ್ಯಾತ ಹೇರ್ ಸ್ಟೈಲಿಸ್ಟ್​​; ವಿಡಿಯೊ ವೈರಲ್
ಜಾವೇದ್ ಹಬೀಬ್ ಅವರ ವೈರಲ್ ವಿಡಿಯೊದ ದೃಶ್ಯ

Jawed Habib ವಿಡಿಯೊದಲ್ಲಿ ಜಾವೇದ್ ಹಬೀಬ್ ಮಹಿಳೆಯ ತಲೆಕೂದಲನ್ನು ಎರಡಾಗಿ ಬೇರ್ಪಡಿಸುವಾಗ ತನ್ನ ಉಗುಳನ್ನು ಬಳಸಿರುವುದು ಕಾಣುತ್ತದೆ. "ನಿಮಗೆ ನೀರಿಲ್ಲದಿದ್ದರೆ, ಈ ಉಗುಳು ಸಾಕು " ಎಂದು ಹೇಳಿದಾಗ ಪ್ರೇಕ್ಷಕರು ನಗುತ್ತಾ ಚಪ್ಪಾಳೆ ತಟ್ಟುತ್ತಿರುವುದು ವಿಡಿಯೊದಲ್ಲಿದೆ.

TV9kannada Web Team

| Edited By: Rashmi Kallakatta

Jan 06, 2022 | 7:02 PM

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್ (Jawed Habib)ಅವರು ವರ್ಕ್‌ಶಾಪ್‌ನಲ್ಲಿ ಮಹಿಳೆಯೊಬ್ಬರ ಕೂದಲನ್ನು ಸ್ಟೈಲ್ ಮಾಡಲು ತನ್ನ ಉಗುಳನ್ನು ಬಳಸಿದ ವಿಡಿಯೊ ಟ್ವಿಟರ್​​ನಲ್ಲಿ ವೈರಲ್ ಆಗಿದ್ದು ತೀವ್ರ ಟೀಕೆಗೊಳಗಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗವು ಘಟನೆಯ ಬಗ್ಗೆ(National Commission for Women) ಗಮನಹರಿಸಿದ್ದು ಅಧ್ಯಕ್ಷೆ ರೇಖಾ ಶರ್ಮಾ ಅವರು ವೈರಲ್ ವಿಡಿಯೊದ ಸತ್ಯಾಸತ್ಯತೆಯನ್ನು ತಕ್ಷಣ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಉತ್ತರಪ್ರದೇಶದ ಡಿಜಿಪಿಗೆ ಪತ್ರ ಬರೆದಿದ್ದಾರೆ.NCWIndia ಘಟನೆಯ ಬಗ್ಗೆ ಗಮನ ಹರಿಸಿದೆ . ಈ ವೈರಲ್ ವಿಡಿಯೊದ ಸತ್ಯಾಸತ್ಯತೆಯನ್ನು ತಕ್ಷಣವೇ ತನಿಖೆ ಮಾಡಲು ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಉತ್ತರಪ್ರದೇಶದ ಡಿಜಿಪಿಗೆ ಅಧ್ಯಕ್ಷೆ ರೇಖಾಶರ್ಮ ಪತ್ರ ಬರೆದಿದ್ದಾರೆ. ತೆಗೆದುಕೊಂಡ ಕ್ರಮವನ್ನು ಆಯೋಗಕ್ಕೆ ಶೀಘ್ರವಾಗಿ ತಿಳಿಸಬೇಕು ಎಂದು ಮಹಿಳಾ ಆಯೋಗ ಟ್ವೀಟ್ ಮಾಡಿದೆ.

ವಿಡಿಯೊದಲ್ಲಿ ಜಾವೇದ್ ಹಬೀಬ್ ಮಹಿಳೆಯ ತಲೆಕೂದಲನ್ನು ಎರಡಾಗಿ ಬೇರ್ಪಡಿಸುವಾಗ ತನ್ನ ಉಗುಳನ್ನು ಬಳಸಿರುವುದು ಕಾಣುತ್ತದೆ. “ನಿಮಗೆ ನೀರಿಲ್ಲದಿದ್ದರೆ, ಈ ಉಗುಳು ಸಾಕು ” ಎಂದು ಹೇಳಿದಾಗ ಪ್ರೇಕ್ಷಕರು ನಗುತ್ತಾ ಚಪ್ಪಾಳೆ ತಟ್ಟುತ್ತಿರುವುದು ವಿಡಿಯೊದಲ್ಲಿದೆ.

ಇದರ ಬೆನ್ನಲ್ಲೇ ಮಹಿಳೆಯೊಬ್ಬರು ತನ್ನ ಅನುಭವವನ್ನು ಹೇಳುತ್ತಿರುವ ಮತ್ತೊಂದು ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ವಿಡಿಯೊದಲ್ಲಿ ಆಕೆ ತನ್ನನ್ನು ಬ್ಯೂಟಿ ಪಾರ್ಲರ್‌ನ ಒಡತಿ ಪೂಜಾ ಗುಪ್ತಾ ಎಂದು ಪರಿಚಯಿಸಿಕೊಂಡಿದ್ದಾರೆ. “ನಿನ್ನೆ ನಾನು ಜಾವೇದ್ ಹಬೀಬ್ ಸರ್ ಅವರ ವರ್ಕ್‌ಶಾಪ್‌ನಲ್ಲಿ ಭಾಗವಹಿಸಿದ್ದೆ. ಅಲ್ಲಿ ಅವರು ನನ್ನ ಹೇರ್ ಕಟ್ ಮಾಡಲು ವೇದಿಕೆಗೆ ಆಹ್ವಾನಿಸಿದರು ಮತ್ತು ಅವರು ಅನುಚಿತವಾಗಿ ವರ್ತಿಸಿದರು. ನೀರಿಲ್ಲದಿದ್ದರೆ, ನೀವು ಉಗುಳಬಹುದು ಎಂದು ಹೇಳಿದರು, ನಾನು ನನ್ನ ಹೇರ್ ಕಟ್ ಮಾಡಿಸಲಿಲ್ಲ. ನನ್ನ ಬೀದಿ ಬದಿಯ ಕ್ಷೌರಿಕನ ಬಳಿಗೆ ಹೋಗಿ ಕೂದಲನ್ನು ಕತ್ತರಿಸುವುದು ಇದಕ್ಕಿಂತ ಒಳ್ಳೆಯದು. ಆದರೆ ಹಬೀಬ್‌ ಬಳಿ ಹೋಗುವುದಿಲ್ಲ, ”ಎಂದು ಪೂಜಾ ಗುಪ್ತಾ ಹೇಳಿದ್ದಾರೆ.

ಜಾವೇದ್ ಹಬೀಬ್  ವಿರುದ್ಧ ನೆಟ್ಟಿಗರು ಸಿಡಿದೆದ್ದಿದ್ದು, “ಜಾವೇದ್ ಹಬೀಬ್ ತಲೆಯ ಮೇಲೆ ಉಗುಳಿ ಮಹಿಳೆಯನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಸಾರ್ವಜನಿಕವಾಗಿ ಅವರು ಈ ರೀತಿ ತಲೆಯ ಮೇಲೆ ಉಗುಳುತ್ತಿದ್ದರೆ, ಅವರು ತಮ್ಮ ಸಲೂನ್ ಉತ್ಪನ್ನಗಳಲ್ಲಿ ಇನ್ನೇನು ಬಳಸುತ್ತಾರೆ ಎಂದು ಯಾರಿಗೆ ಗೊತ್ತು. ಪೆದ್ದರು ಮಾತ್ರ ಅವರ ಸಲೂನ್ ಗೆ ಹೇರ್ ಕಟ್ ಮಾಡಲು ಹೋಗುತ್ತಾರೆ ಎಂದು ರಾಧಾರಮಣ್ ದಾಸ್ ಎಂಬವರು ವಿಡಿಯೊ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

ಜಾವೇದ್ ಹಬೀಬ್ 2019ರಲ್ಲಿ ಬಿಜೆಪಿ ಸೇರಿದ್ದರು .

ಇದನ್ನೂ ಓದಿ: ಭಾರತದ ದೊಡ್ಡ ನಗರಗಳಲ್ಲಿ ಹರಡುತ್ತಿದೆ ಒಮಿಕ್ರಾನ್, ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಕರಣ ಕಡಿಮೆ

Follow us on

Related Stories

Most Read Stories

Click on your DTH Provider to Add TV9 Kannada