ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗಿನಿಂದ ಯಡಿಯೂರಪ್ಪ ಬಗ್ಗೆ ಸೋಮಣ್ಣ ಹಗುರವಾಗಿ ಮಾತಾಡುತ್ತಿದ್ದಾರೆ: ಎಂಪಿ ರೇಣುಕಾಚಾರ್ಯ

|

Updated on: Nov 26, 2023 | 7:03 PM

2008 ರ ವಿಧಾನ ಸಭಾ ಚುನಾವಣೆಯಲ್ಲಿ ಸೋತರೂ ಯಡಿಯೂರಪ್ಪ ಅವರು ಸೋಮಣ್ಣರನ್ನು ಕರೆತಂದು ಎಂಎಲ್ ಸಿ ಮಾಡಿದ್ದೂ ಅಲ್ಲದೆ ಮಂತ್ರಿ ಸ್ಥಾನ ಸಹ ನೀಡಿದರು, ಅಗ ಆಸಲಿಗೆ ತಾವು ಪ್ರತಿಭಟನೆ ಮಾಡಬೇಕಿತ್ತು ಅಂತ ರೇಣುಕಾಚಾರ್ಯ ಹೇಳಿದರು. ಕುಟುಂಬ ರಾಜಕಾರಣ ಅಂತ ಸೋಮಣ್ಣ ಹೇಳುತ್ತಾರೆ, ಎಲ್ಲಿದೆ ಕುಟುಂಬ ರಾಜಕಾರಣ? ಯಾವುದು ಕುಟುಂಬ ರಾಜಕಾರಣ ರೇಣುಕಾಚಾರ್ಯ ಪ್ರಶ್ನಿಸಿದರು.

ದಾವಣಗೆರೆ: ಹಿರಿಯ ಬಿಜೆಪಿ ನಾಯಕ ವಿ ಸೋಮಣ್ಣ (V Somanna) ಮಠಗಳಿಗೆ ಭೇಟಿ ನೀಡಿ ಪಕ್ಷದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ಅವರನ್ನು ಉಗ್ರಪ್ರತಾಪಿಯನ್ನಾಗಿಸಿದೆ. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಸೋಮಣ್ಣರಿಂದ ಪಕ್ಷಕ್ಕಾಗಿರುವ ಲಾಭವಾದರೂ ಏನು ಎಂಬರ್ಥದಲ್ಲಿ ಮಾತಾಡಿದರು. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ್ದು ಬಿಎಸ್ ಯಡಿಯೂರಪ್ಪ (BS Yediyurappa), ಬಿಬಿ ಶಿವಪ್ಪ, ಅನಂತಕುಮಾರ್, ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ ಮೊದಲಾದವರು. ಸೋಮಣ್ಣ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬಂದವರು ಎಂದು ರೇಣುಕಾಚಾರ್ಯ ಹೇಳಿದರು. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗಿನಿಂದ ಅವರ ಬಗ್ಗೆ ಸೋಮಣ್ಣ ಬಹಳ ಹಗುರವಾಗಿ ಮಾತಾಡುತ್ತಿದ್ದಾರೆ ಎಂದ ಅವರು, 2008 ರ ವಿಧಾನ ಸಭಾ ಚುನಾವಣೆಯಲ್ಲಿ ಸೋತರೂ ಯಡಿಯೂರಪ್ಪ ಅವರು ಸೋಮಣ್ಣರನ್ನು ಕರೆತಂದು ಎಂಎಲ್ ಸಿ ಮಾಡಿದ್ದೂ ಅಲ್ಲದೆ ಮಂತ್ರಿ ಸ್ಥಾನ ಸಹ ನೀಡಿದರು, ಅಗ ಆಸಲಿಗೆ ತಾವು ಪ್ರತಿಭಟನೆ ಮಾಡಬೇಕಿತ್ತು ಅಂತ ರೇಣುಕಾಚಾರ್ಯ ಹೇಳಿದರು. ಕುಟುಂಬ ರಾಜಕಾರಣ ಅಂತ ಸೋಮಣ್ಣ ಹೇಳುತ್ತಾರೆ, ಎಲ್ಲಿದೆ ಕುಟುಂಬ ರಾಜಕಾರಣ? ಯಾವುದು ಕುಟುಂಬ ರಾಜಕಾರಣ ರೇಣುಕಾಚಾರ್ಯ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:03 pm, Sun, 26 November 23

Follow us on