ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು, ನಾನೂ ತಿಹಾರ್ ಜೈಲಿಗೆ ಹೋಗಿದ್ದೆ: ಡಿಕೆ ಶಿವಕುಮಾರ್
ನಾಳೆ ಸಾಮಾಜಿಕ ನ್ಯಾಯ ಮತ್ತು ಸಂವಿಧಾನ: ಸಮಾನತೆ ಮತ್ತು ಭ್ರಾತೃತ್ವದ ಪರಿಕಲ್ಪನೆಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲು ದೇಶದ ನಾನಾ ಮೂಲೆಗಳಿಂದ ಆಗಮಿಸುವ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತೇನೆ, ಸಂವಿಧಾನದ ಬಗ್ಗೆ ಚರ್ಚೆ ನಡೆಯಲಿದೆ, ಎಲ್ಲ ನಾಯಕರಿಗೆ ಹತ್ತು ಹದಿನೈದು ನಿಮಿಷ ಮಾತಾಡುವ ಆವಕಾಶ ನೀಡಿದ್ದಾರೆ, ನಾನು ಕೊನೆಯಲ್ಲಿ ಮಾತಾಡಲಿದ್ದೇನೆ ಎಂದು ಶಿವಕುಮಾರ್ ಹೇಳಿದರು.
ದೆಹಲಿ, ಆಗಸ್ಟ್ 1: ದೆಹಲಿಯಲ್ಲಿ ಆಯೋಜಿಸಲಾಗಿರುವ ಬ್ರಿಡ್ಜ್ ಟು ಬೆಂಗಳೂರು (Bridge to Bengaluru) ಮತ್ತು ಸಾಮಾಜಿಕ ನ್ಯಾಯ ಮತ್ತು ಸಂವಿಧಾನ: ಸಮಾನತೆ ಹಾಗೂ ಭ್ರಾತೃತ್ವದ ಪರಿಕಲ್ಪನೆಗಳು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಆಗಮಿಸಿರುವ ಡಿಸಿಎಂ ಡಿಕೆ ಶಿವಕುಮಾರ್; ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಅಂತ ನೀಡಿರುವ ತೀರ್ಪಿಗೆ ಪ್ರತಿಕ್ರಿಯೆ ನೀಡಿದರು. ಕಾನೂನಿಗೆ, ನ್ಯಾಯಾಲಯಕ್ಕೆ ಎಲ್ಲರೂ ತಲೆಬಾಗಲೇಬೇಕು, ನಾನೂ ತಿಹಾರ್ ಜೈಲಿಗೆ ಹೋಗಿದ್ದೆ, ಜಾಮೀನು ಪಡೆದು ಹೊರಬಂದ ಬಳಿಕ ಪ್ರಕರಣದಿಂದ ಖುಲಾಸೆ ಕೂಡ ಆದೆ, ನ್ಯಾಯಾಧೀಶರು ಎಲ್ಲವನ್ನೂ ಗಮನಿಸಿರುತ್ತಾರೆ, ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ತೀರ್ಪು ನೀಡಿರುತ್ತಾರೆ ಎಂದು ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ಅನಪೇಕ್ಷಿತ ಅವಮಾನಗಳನ್ನು ಅವಡುಗಚ್ಚಿ ಅದುಮಿಕೊಳ್ಳುವುದು ಶಿವಕುಮಾರ್ಗೆ ಅನಿವಾರ್ಯವೇ?
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
