AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ: ಕೆರೆಗೋಡು ಬೆನ್ನಲ್ಲೇ ಕೆಆರ್​ ಪೇಟೆಯಲ್ಲಿನ ಭಗವಾಧ್ವಜ ತೆರವು

ಮಂಡ್ಯ: ಕೆರೆಗೋಡು ಬೆನ್ನಲ್ಲೇ ಕೆಆರ್​ ಪೇಟೆಯಲ್ಲಿನ ಭಗವಾಧ್ವಜ ತೆರವು

ಪ್ರಶಾಂತ್​ ಬಿ.
| Updated By: ವಿವೇಕ ಬಿರಾದಾರ

Updated on: Jul 14, 2024 | 9:52 AM

ಈ ವರ್ಷದ ಆರಂಭದಲ್ಲಿ ಕೆರಗೋಡು ಹನುಮ ಧ್ವಜ ತೆರವು ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ಸರ್ಕಾರ ತೆರವುಗೊಳಿಸಿತ್ತು. ಇದರ ಬೆನ್ನಲ್ಲೇ ಕೆಆರ್​ ಪೇಟೆಯ ಟಿಬಿ ವೃತ್ತದಲ್ಲಿರುವ ಭಗವಾಧ್ವಜವನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಮಂಡ್ಯ, ಜುಲೈ 14: ಕೆರೆಗೋಡು (Keregodu) ಹನುಮ ಧ್ವಜ (Hanuman Flag) ತೆರವು ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಧ್ವಜ ತೆರವು ವಿರೋಧಿಸಿ ಆಡಳಿತಾರೂಢ ಕಾಂಗ್ರೆಸ್​ ಸರ್ಕಾರದ ಮೇಲೆ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಮುಗಿಬಿದ್ದಿದ್ದವು. ಇದರ ಬೆನ್ನಲ್ಲೇ ಇದೀಗ ಕೆ.ಆರ್. ಪೇಟೆ ಪಟ್ಟಣದ ಟಿಬಿ ವೃತ್ತದಲ್ಲಿ ಹಾರಿಸಿದ್ದ ಭಗವಾಧ್ವಜ (Bhagavadwaj) ಹಾಗೂ ಅಳವಡಿಸಲಾಗಿದ್ದ ಮಹನೀಯರ ಪ್ಲೆಕ್ಸ್​ ಅನ್ನು ಪುರಸಭೆ ಅಧಿಕಾರಿಗಳು ಧ್ವಜ ತೆರವುಗೊಳಿಸಿದ್ದಾರೆ. ಇದನ್ನು ವಿರೋಧಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಟಿಬಿ ವೃತ್ತದಲ್ಲಿ ಹತ್ತಾರು‌ ವರ್ಷಗಳಿಂದ ಭಗವಾಧ್ವಜ ಹಾರುತ್ತಿತ್ತು. ಕೆಲ ದಿನಗಳ ಹಿಂದೆ ಪುರಸಭೆ ಧ್ವಜ‌ ತೆರವು ಗೊಳಿಸಿತ್ತು. ಹಿಂದೂ ಕಾರ್ಯಕರ್ತರು ಶನಿವಾರ ಮತ್ತೆ ಭಗವಾಧ್ವಜ‌ ಹಾರಿಸಿದ್ದರು. ಜೊತೆಗೆ ಕೆಂಪೇಗೌಡ, ಡಾ.ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿರಾಯಣ್ಣ, ಬಸವಣ್ಣ, ವಿಶ್ವಕರ್ಮ ಸೇರಿ ಹಲವು ಮಹನೀಯರ ಭಾವಚಿತ್ರ ಕಳಸದ ಆಕಾರದ ಪ್ಲೆಕ್ಸ್ ಅಳವಡಿಸಿದ್ದರು. ಆದರೆ ತಡರಾತ್ರಿ ಪುರಸಭೆ ಅಧಿಕಾರಿಗಳು ಭಗವಾಧ್ವಜ ಜೊತೆಗೆ ಧ್ವಜಕಂಬನ್ನೂ ತೆರವು ಮಾಡಿದ್ದಾರೆ. ಜೊತೆಗೆ ಮಹನೀಯರ ಕಳಸ ಪ್ಲೆಕ್ಸ್ ಕೂಡ ತೆರವು ಮಾಡಿದ್ದಾರೆ. ಈ ಸಂಬಂಧ ಪುರಸಭೆಯ ನಡೆ ವಿರೋಧಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಬೆಳ್ಳಂಬೆಳಗ್ಗೆ ಸ್ಥಳದಲ್ಲಿ ಧರಣಿ ನಡೆಸಿದರು. ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮತ್ತೆ ಹನುಮ ಧ್ವಜ ಹಾರಿಸಲು ಮುಂದಾಗಲಿದ್ದಾರೆ ಕೆರೆಗೋಡು ಗ್ರಾಮಸ್ಥರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ