ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸಲು ಪ್ರಯತ್ನಿಸಿದ ದುಷ್ಟಶಕ್ತಿಗಳಿಗೆ ಹೈಕೋರ್ಟ್ ಚಾಟಿ ಬೀಸಿದೆ: ಬಿವೈ ವಿಜಯೇಂದ್ರ
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುವ ಹುನ್ನಾರ ಮಾಡಿದ್ದ ದುಷ್ಟಶಕ್ತಿಗಳಿಗೆ ಹೈಕೋರ್ಟ್ ಚಾಟಿಯೇಟು ನೀಡಿದೆ ಎಂದು ವಿಜಯೇಂದ್ರ ಹೇಳಿದರು. ದುಷ್ಟಶಕ್ತಿಗಳು ಇನ್ನಾದರೂ ಇಂಥ ದುಸ್ಸಾಹಸಗಳಿಗೆ ಕೈ ಹಾಕುವುದನ್ನು ಬಿಡಬೇಕು ಎಂದು ವಿಜಯೇಂದ್ರ ಹೇಳಿದರು.
ಹಾಸನ: ರಾಜ್ಯ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ (B Y Vijayendra) ಅವರು ಸ್ವಾಗತಿಸಿದ್ದಾರೆ. ಮಂಗಳವಾರ ಹಾಸನ (Hassan) ಪ್ರವಾಸದಲ್ಲಿದ್ದ ಅವರು ಸುದ್ದಿಗಾರರೊಂದಿಗೆ ಮಾತಾಡಿ ಅನಾವಶ್ಯಕ ವಿಷಯಗಳನ್ನು ಕಾಲೇಜಿನ ಆವರಣಗಳಿಗೆ ತಂದು ಶಿಕ್ಷಣ ಕ್ಷೇತ್ರವನ್ನೂ ಕಲುಷಿತಗೊಳಿಸಲು ಪ್ರಯತ್ನಿಸಿ ಆ ಮೂಲಕ ರಾಜ್ಯದಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು (law and order) ಹಾಳು ಮಾಡುವ ಹುನ್ನಾರ ಮಾಡಿದ್ದ ದುಷ್ಟಶಕ್ತಿಗಳಿಗೆ ಹೈಕೋರ್ಟ್ ಚಾಟಿಯೇಟು ನೀಡಿದೆ ಎಂದು ಹೇಳಿದರು. ದುಷ್ಟಶಕ್ತಿಗಳು ಇನ್ನಾದರೂ ಇಂಥ ದುಸ್ಸಾಹಸಗಳಿಗೆ ಕೈ ಹಾಕುವುದನ್ನು ಬಿಡಬೇಕು ಎಂದು ವಿಜಯೇಂದ್ರ ಹೇಳಿದರು.
ಹೈಕೋರ್ಟ್ ನೀಡಿರುವ ಆದೇಶವನ್ನು ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸುವ ತಯಾರಿ ನಡೆಸುತ್ತಿರುವುದನ್ನು ವಿಜಯೇಂದ್ರ ಅವರ ಗಮನಕ್ಕೆ ತಂದಾಗ, ಉಚ್ಛ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವ ಹಕ್ಕು ಮತ್ತು ಸ್ವಾತಂತ್ರ್ಯ ಅವರಿಗಿದೆ. ಅದರೆ ಸರ್ವೋಚ್ಛ ನ್ಯಾಯಾಲಯವು ಉಚ್ಚ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿಯುವ ಸಾಧ್ಯತೆಗಳೇ ಹೆಚ್ಚು, ಯಾಕೆಂದರೆ, ಉಚ್ಚ ನ್ಯಾಯಾಲಯದ ತ್ರಿ-ಸದಸ್ಯ ಪೀಠವು ಎರಡೂ ಪಕ್ಷಗಳು ಮಂಡಿಸಿದ ವಾದವನ್ನು ಸುದೀರ್ಘವಾಗಿ ಆಲಿಸಿದ ನಂತರ ಮೂರು ವಾರಗಳ ಕಾಲ ವಿಷಯಕ್ಕೆ ಸಂಬಂಧಿಸಿದ ಎಲ್ಲ ಆಯಾಮಗಳನ್ನು ಕೂಲಂಕಷವಾಗಿ ಚರ್ಚಿಸಿ ತೀರ್ಪನ್ನು ನೀಡಿದೆ ಎಂದು ಹೇಳಿದರು.
ರಾಜ್ಯದ ಹಲವಾರು ಕಡೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಭಾಗಗಳಲ್ಲಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುವುದು ಬಿಟ್ಟು ಮನೆಗಳಿಗೆ ಹೋಗಿದ್ದಾರೆ.
ಇದನ್ನೂ ಓದಿ: ಹಿಜಾಬ್: ಹೈಕೋರ್ಟ್ ತೀರ್ಪು ಹೊರಬಿದ್ದ ನಂತರ ಯಾದಗಿರಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುವುದು ಬಿಟ್ಟು ಮನೆಗೆ ಹೋದರು!