ಹಿಜಾಬ್ ಧರಿಸುವ ಅವಕಾಶವಿಲ್ಲವೆಂದರೆ ನಾವು ಓದು ನಿಲ್ಲಿಸಿ ಬಿಡುತ್ತೇವೆ ಎಂದರು ಹಾಸನದ ವಿದ್ಯಾರ್ಥಿನಿಯರು
ನಾವು ಪ್ರತಿಭಟನೆ ನಡೆಸಿದ್ದೇ ಹಿಜಾಬ್ ಗೋಸ್ಕರ, ಅದನ್ನೇ ಬೇಡ ಅಂತ ಕೋರ್ಟ್ ಹೇಳಿಬಿಟ್ಟರೆ ಹೇಗೆ? ನಮಗೆ ಓದಿನ ಜೊತೆ ಹಿಜಾಬ್ ಕೂಡ ಮುಖ್ಯ. ಕಳೆದ ನಾಲ್ಕು ವರ್ಷಗಳಿಂದ ಅದನ್ನು ಧರಿಸಿಯೇ ಕಾಲೇಜಿಗೆ ಬರುತ್ತಿದ್ದೇವೆ, ಈಗ ಇದ್ದಕ್ಕಿದ್ದಂತೆ ಬೇಡ ಅಂದರೆ ಹೇಗೆ ಅಂತ ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹಾಸನ: ಹಿಜಾಬ್ ವಿವಾದದ (hijab row) ಪ್ರಕರಣದ ಬಗ್ಗೆ ರಾಜ್ಯ ಹೈಕೋರ್ಟ್ ಮಂಗಳವಾರ ಅಂತಿಮ ತೀರ್ಪು ಪ್ರಕಟಿಸಿದೆ. ಶಾಲಾ ಕಾಲೇಜುಗಳಿಗೆ (school, colleges) ಹಿಜಾಬ್ ಧರಿಸಿ ಧರಿಸಿ ಬರಬಾರದು, ಹಿಜಾಬ್ ಧರಿಸುವುದು ಧಾರ್ಮಿಕ ಆಚರಣೆಯ (religious practice) ಭಾಗವಲ್ಲ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹೈಕೋರ್ಟ್ ಆದೇಶವನ್ನು ಪಾಲಿಸುತ್ತಾರೆ ಎಂದೇ ರಾಜ್ಯದ ಜನತೆ ಭಾವಿಸಿತ್ತು. ಆದರೆ, ಹಾಗಾಗುತ್ತಿಲ್ಲ. ರಾಜ್ಯದ ಕೆಲಭಾಗಗಳಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಹೈಕೋರ್ಟಿನ ಅಂತಿಮ ಆದೇಶದ ಹೊರತಾಗಿಯೂ ಹಿಜಾಬ್ ಧರಿಸಿ ಕಾಲೇಜಿಗೆ ಹೋಗುವುದಾಗಿ ಹೇಳುತ್ತಿದ್ದು, ಅದಕ್ಕೆ ಅನುಮತಿ ನೀಡದಿದ್ದರೆ ಶಿಕ್ಷಣ ಮೊಟಕುಗೊಳಿಸಿ ಮನೆಯಲ್ಲಿರುವುದಾಗಿ ಹೇಳುತ್ತಿದ್ದಾರೆ.
ಹಾಸನದ ಟಿವಿ9 ವರದಿಗಾರ ಮಂಜುನಾಥ ಕೆ ಬಿ ಅವರು ನಗರ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಮಾತಾಡಿದ್ದಾರೆ. ಈ ಗುಂಪಿನಲ್ಲಿರುವ ಎಲ್ಲ ವಿದ್ಯಾರ್ಥಿನಿಯರು ಒಂದೇ ಮಾತನ್ನು ಹೇಳುತ್ತಿದ್ದಾರೆ-ನಾವು ಹಿಜಾಬ್ ಧರಿಸಿಯೇ ಕಾಲೇಜಿಗೆ ಬರೋದು, ಅದಕ್ಕೆ ಅವಕಾಶವಿಲ್ಲ ಅಂತಾದರೆ, ಓದು ನಿಲ್ಲಿಸಿ ಮನೆಯಲ್ಲಿ ಇದ್ದು ಬಿಡುತ್ತೇವೆ.