ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ ಸ್ನೇಹಿತ್

Edited By:

Updated on: Dec 17, 2025 | 9:34 PM

ಮಾಜಿ ಬಿಗ್ ಬಾಸ್ ಸ್ಪರ್ಧಿ ಸ್ನೇಹಿತ್ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಟ್ರೋಫಿ ಯಾರು ಗೆಲ್ಲಬೇಕು ಎಂಬ ಪ್ರಶ್ನೆಗೆ ಸ್ನೇಹಿತ್ ಉತ್ತರ ನೀಡಿದ್ದಾರೆ. ಟಿವಿ9 ಜೊತೆ ಮಾತನಾಡಿ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಅಶ್ವಿನಿ ಗೌಡ ಅವರೇ ಗೆಲ್ಲಬೇಕು’ ಎಂದು ಸ್ನೇಹಿತ್ ಹೇಳಿದ್ದಾರೆ.

ಮಾಜಿ ಬಿಗ್ ಬಾಸ್ ಸ್ಪರ್ಧಿ ಸ್ನೇಹಿತ್ (Snehith) ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಟ್ರೋಫಿ ಯಾರು ಗೆಲ್ಲಬೇಕು ಎಂಬ ಪ್ರಶ್ನೆಗೆ ಸ್ನೇಹಿತ್ ಉತ್ತರ ನೀಡಿದ್ದಾರೆ. ಟಿವಿ9 ಜೊತೆ ಮಾತನಾಡಿ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಈ ಬಾರಿ ನನಗೆ ಗೊತ್ತಿರುವವರು ತುಂಬ ಜನ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಮೊದಲ ದಿನದಿಂದಲೂ ನಾನು ಶೋ ನೋಡುತ್ತಿದ್ದೇನೆ. ಅಶ್ವಿನಿ ಗೌಡ (Ashwini Gowda) ಅವರು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಅವರು ನನಗೆ ಇಷ್ಟ ಆಗುತ್ತಿದ್ದಾರೆ. ಅವರು ಸ್ಟ್ರಾಂಗ್ ಸ್ಪರ್ಧಿ ಆಗಿದ್ದಾರೆ. ಮಾತಿನಲ್ಲೂ ಅವರನ್ನು ಯಾರೂ ಮೀರಿಸೋಕೆ ಆಗಲ್ಲ. ತಮ್ಮ ತಪ್ಪನ್ನು ಅವರು ತಿದ್ದಿಕೊಳ್ಳುತ್ತಿದ್ದಾರೆ. ಅವರೇ ಗೆಲ್ಲಬೇಕು. ಗಿಲ್ಲಿ ಕೂಡ ಚೆನ್ನಾಗಿ ಆಡುತ್ತಿದ್ದಾರೆ. ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರ ಮೇಲೆ ಇಡೀ ಸೀಸನ್ ನಡೆಯುತ್ತಿದೆ’ ಎಂದು ಸ್ನೇಹಿತ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.