ಎಲ್ಲ ಕ್ಷೇತ್ರಗಳಿಗೂ ವಿನಾಯಿತಿ ಆದರೆ, ಚಿತ್ರಮಂದಿರಗಳಿಗೆ ಯಾಕಿಲ್ಲ; ನಟ ಶಿವರಾಜ್ ಕುಮಾರ್ ಹೇಳಿದ್ದೇನು..?
ಚಿತ್ರಮಂದಿರಗಳಿಗೆ 50:50 ನಿಯಮ ಹಿನ್ನೆಲೆಯಿಂದಾಗಿ ಮೈಸೂರಿನನಲ್ಲಿ ಖಾಸಗಿ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ನಟ ಡಾ ಶಿವರಾಜ್ ಕುಮಾರ್.
ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಿಗೆ 50:50 ನಿಯಮ ಹಿನ್ನೆಲೆಯಿಂದಾಗಿ ನಾವು ಕೊರೊನಾ ಜೊತೆ ಜೊತೆಯೇ ಬದುಕಬೇಕಾಗಿದೆ ಎಂದು ಮೈಸೂರಿನಲ್ಲಿ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ. ಮೈಸೂರಿನನಲ್ಲಿ ಖಾಸಗಿ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ ನಟ ಡಾ ಶಿವರಾಜ್ ಕುಮಾರ್, ನಂತರ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಎಲ್ಲ ಕ್ಷೇತ್ರಗಳಿಗೂ 50:50 ನಿಯಮದಿಂದ ವಿನಾಯಿತಿ ಸಿಕ್ಕಿದೆ. ಆದರೆ, ಚಿತ್ರಮಂದಿರಗಳಿಗೆ ಮಾತ್ರ ಏಕೆ ರಿಲ್ಯಾಕ್ಸ್ ಕೊಟ್ಟಿಲ್ಲ ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ. ಅವರು ಯಾವಾಗಲೂ ಇಂಡಸ್ಟ್ರಿ ಪರವಾಗಿದ್ದಾರೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ಇನ್ನೂ ರಾಜ್ಯ ಸರ್ಕಾರ ನಿನ್ನೆಯಷ್ಟೇ ಕೊವಿಡ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ನೈಟ್ ಕರ್ಫ್ಯೂ ಜನವರಿ 31 ರಿಂದ ಇರಲ್ಲ. ಪಬ್ ಆ್ಯಂಡ್ ರೆಸ್ಟೋರೆಂಟ್, ಹೋಟೆಲ್ಗಳಿಗೆ ಶೆ. 100 ರಷ್ಟು ಅವಕಾಶ ನೀಡಲಾಗಿದೆ. ಆದರೆ ಸಿನಿಮಾ ಥಿಯೇಟರ್ಗಳಿಗೆ ಶೇ. 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಅಂತ ತಿಳಿಸಿದರು. ಮದುವೆಗಳಿಗೆ ಒಳಾಂಗಣದಲ್ಲಿ 200 ಜನರಿಗೆ, ಹೊರಾಂಗಣದಲ್ಲಿ 300 ಜನರಿಗೆ ಅವಕಾಶ ನೀಡಲಾಗಿದೆ. ಮಂದಿರ, ಮಸೀದಿ, ಚರ್ಚ್ಗಳಲ್ಲಿ ಸೇವೆ ಪುನಾರಂಭ ಮಾಡಬಹುದು. ಆದರೆ ಧಾರ್ಮಿಕ ಸ್ಥಳಗಳಲ್ಲಿ 50 ಜನ ಮಾತ್ರ ಒಂದೇ ಬಾರಿ ದರ್ಶನ ಪಡೆಯಬಹುದು. ಜಾತ್ರೆ, ಮೆರವಣಿಗೆ, ಧರಣಿ, ಪ್ರತಿಭಟನೆ ಧಾರ್ಮಿಕ ಉತ್ಸವಗಳಿಗೆ ನಿರ್ಬಂಧ ಹೇರಲಾಗಿದೆ. ಜಿಮ್, ಈಜುಕೊಳದಲ್ಲಿ ಶೇ. 50 ರಷ್ಟು ಅವಕಾಶ ನೀಡಲಾಗಿದೆ ಅಂತ ಆರ್ ಅಶೋಕ್ ಹೇಳಿದ್ದಾರೆ.
ಇದನ್ನೂ ಓದಿ;
‘ಗೀತಾ ಅವರು ತಾಯಿ ಸ್ಥಾನದಲ್ಲಿ ಇದ್ದಾರೆ’; ಮೈಸೂರಿನ ಶಕ್ತಿಧಾಮದ ಬಗ್ಗೆ ಶಿವರಾಜ್ಕುಮಾರ್ ಮಾತು
‘ಅಶ್ವಿನಿ ಅಕ್ಕ ಇನ್ನೂ ಮೌನವಾಗಿಯೇ ಇದ್ದಾರೆ’; ಪುನೀತ್ ಗನ್ಮ್ಯಾನ್ ತೆರೆದಿಟ್ಟ ವಿವರಗಳು