ಕುಮಾರಸ್ವಾಮಿಯವರ ತೋಟದ ಮನೆಯ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ ದೃಶ್ಯಗಳು ಇಲ್ಲಿವೆ
ಕರ್ನಾಟದ ಕಾಂಗ್ರೆಸ್ ಕೂಡಲೇ ಮೈಕ್ರೋಬ್ಲಾಗಿಂಗ್ ಎಕ್ಸ್ ನ ತನ್ನ ಹ್ಯಾಂಡಲ್ ನಿಂದ, ಕುಮಾರಸ್ವಮಿಯವರು ಸೋಲಿನ ಭೀತಿಯಿಂದ ಮತದಾರರಿಗೆ ಬಾಡೂಟದ ವ್ಯವಸ್ಥೆ ಮಾಡಿದ್ದಾರೆ, ಮಾಂಸ ಮತ್ತು ಮದ್ಯದ ಅಮಲು ಚುನಾವಣಾ ಆಯೋಗದ ಮೂಗಿಗೆ ಅಡರುತ್ತಿಲ್ಲವೇ ಅನ್ನೋ ಅರ್ಥದ ಟ್ವೀಟ್ ಮಾಡಿತ್ತು.
ರಾಮನಗರ: ಬಾಡೂಟ ಔತಣ ವಿವಾದಕ್ಕೆ ಕಾರಣವಾಗಿರುವ ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ತೋಟ ಮತ್ತು ತೋಟದ ಮನೆ ಇದೇ. ವಿಷಯ ನಿಮಗೆ ಗೊತ್ತಿದೆ. ಯುಗಾದಿ ಹಬ್ಬದ (Ugadi) ಹೊಸತೊಡಕು ಪ್ರಯುಕ್ತ ತೋಟದ ಮನೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಕುಮಾರಸ್ವಾಮಿಯವರು ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ (farmhouse) ಬಾಡೂಟದ ಔತಣ ಕೂಟ ಏರ್ಪಡಿಸಿದ್ದರು. ಅದು ಕಾಂಗ್ರೆಸ್ ನಾಯಕರ ಕಿವಿಗೆ ಬೀಳೋದು ತಡವಾಗಲಿಲ್ಲ. ಕರ್ನಾಟದ ಕಾಂಗ್ರೆಸ್ ಕೂಡಲೇ ಮೈಕ್ರೋಬ್ಲಾಗಿಂಗ್ ಎಕ್ಸ್ ನ ತನ್ನ ಹ್ಯಾಂಡಲ್ ನಿಂದ, ಕುಮಾರಸ್ವಮಿಯವರು ಸೋಲಿನ ಭೀತಿಯಿಂದ ಮತದಾರರಿಗೆ ಬಾಡೂಟದ ವ್ಯವಸ್ಥೆ ಮಾಡಿದ್ದಾರೆ, ಮಾಂಸ ಮತ್ತು ಮದ್ಯದ ಅಮಲು ಚುನಾವಣಾ ಆಯೋಗದ ಮೂಗಿಗೆ ಅಡರುತ್ತಿಲ್ಲವೇ ಅನ್ನೋ ಅರ್ಥದ ಟ್ವೀಟ್ ಮಾಡಿತ್ತು. ಆಗಲೇ ಚುನಾವಣಾ ಆಧಿಕಾರಿಗಳು ಮತ್ತು ಪೊಲೀಸರು ತೋಟದ ಮನೆ ಮೇಲೆ ದಾಳಿ ನಡೆಸಿದರು, ಆ ಧೃಶ್ಯಗಳನ್ನೇ ವಿಡಿಯೋದಲ್ಲಿ ನೋಡಬಹುದು. ಮಾಧ್ಯಮಗಳಿಗೆ ಒಳಗಿನ ಭಾಗದಲ್ಲಿ ಶೂಟ್ ಮಾಡಲು ಅವಕಾಶ ನೀಡದ ಕಾರಣ ಪೂರ್ತಿ ಪುಟೇಜ್ ಸಿಕ್ಕಿಲ್ಲ. ಊಟಕ್ಕೆ ತಯಾರಾಗಿದ್ದ ಮಟನ್ ಬಿರಿಯಾನಿ, ಚಿಕನ್ ಕಬಾಬ್ ಮತ್ತು ಇತರ ಮಾಂಸಾಹಾರಿ ಪದಾರ್ಥಗಳನ್ನು ಚುನಾವಣಾಧಿಕಾರಿಗಳು ಜಪ್ತು ಮಾಡಿದ್ದಾರೆ.
ಜೆಡಿಎಸ್ ಪಕ್ಷದ ಹೆಡ್ಡಾಫೀಸ್ನಂತಿರುವ ಬಿಡದಿ ತೋಟದ ಮನೆಯಿಂದ ಮದ್ಯ ಹಾಗೂ ಬಾಡೂಟದ ಘಮಲು ಹೊರಬರುತ್ತಿದೆಯಂತೆ? ಸೋಲಿನ ಭೀತಿಯಿಂದ ಹೊಸ್ತೊಡಕಿನ ಹೆಸರಲ್ಲಿ ಮತದಾರರಿಗೆ, ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಡಿರುವ ಕುರಿತು ಮಾಹಿತಿಗಳಿದ್ದರೂ @ceo_karnataka ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೂತಿರುವುದೇಕೆ?
ಸೋಲಿನ ಭಯದಲ್ಲಿರುವ… pic.twitter.com/YKOk8zVFxn
— Karnataka Congress (@INCKarnataka) April 10, 2024
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುಮಾರಸ್ವಾಮಿ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ, ಕಾರ್ಯಕರ್ತರಿಗೆ ಸಿಗದ ಬಾಡೂಟ