ಸಚಿವ ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ

Updated on: Mar 31, 2025 | 11:24 AM

ಸಚಿವ ಕೆಎನ್​ ರಾಜಣ್ಣ ಅವರ ಪುತ್ರ, ಪರಿಷತ್ ಸದಸ್ಯ ರಾಜೇಂದ್ರ ಕೊಲೆ ಸಂಚಿಗೆ ಸಂಬಂಧಿಸಿದ ಸ್ಫೋಟಕ ಆಡಿಯೋ ಈಗ ಬಹಿರಂಗವಾಗಿದೆ. ಆಡಿಯೋದಲ್ಲಿ ಅನೇಕ ಆಘಾತಕಾರಿ ಸಂಗತಿಗಳು ಬಯಲಾಗಿವೆ. ರಾಜೇಂದ್ರ ಕೊಲೆಗೆ ಹೇಗೆ ಸಂಚು ನಡೆದಿತ್ತು? ಎಷ್ಟು ಹಣ ನೀಡಲಾಗಿತ್ತು? ಇನ್ನೆಷ್ಟು ನೀಡುವ ಭರವಸೆ ನೀಡಲಾಗಿತ್ತು ಎಂಬ ಎಲ್ಲ ಮಾಹಿತಿ ಆಡಿಯೋದಲ್ಲಿವೆ.

ಬೆಂಗಳೂರು, ಮಾರ್ಚ್ 31: ಸಹಕಾರ ಸಚಿವ ಕೆಎನ್​ ರಾಜಣ್ಣ ಅವರ ಪುತ್ರ, ಎಂಎಲ್​ಸಿ ರಾಜೇಂದ್ರ ಕೊಲೆ ಯತ್ನ ಸಂಚಿನ ಸಂಬಂಧ ಈಗಾಗಲೇ ದೂರು ದಾಖಲಾಗಿದ್ದು, ಎಫ್​ಐಆರ್​ ಕೂಡ ದಾಖಲಾಗಿದೆ. ಈ ಮಧ್ಯೆ, ಕೊಲೆ ಸಂಚಿಗೆ ಸಂಬಂಧಿಸಿದ ಆಡಿಯೋವನ್ನೂ ಸಹ ಪೊಲೀಸರಿಗೆ ನೀಡಿದ್ದಾಗಿ ರಾಜೇಂದ್ರ ಹೇಳಿದ್ದರು. ಇದೀಗ ಆ ಆಡಿಯೋ ಬಹಿರಂಗವಾಗಿದ್ದು, ಅನೇಕ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಸೋಮ ಎಂಬಾತನ ಆಪ್ತೆ ಪುಷ್ಪಾ ಎಂಬಾಕೆ ರಾಜೇಂದ್ರ ಆಪ್ತ ರಾಕಿ ಜತೆ ನಡೆಸಿದ ಸಂಭಾಷಣೆ ‘ಟಿವಿ9’ಗೆ ಲಭ್ಯವಾಗಿದೆ. ‘‘ಜೀವ ಹೋದ್ರೂ ಬಾಯ್ಬಿಡಲ್ಲ, ಬಾಸ್​ಗಾಗಿ ಜೀವನ ಪೂರ್ತಿ ಜೈಲಲ್ಲಿರ್ತಾನೆ’’ ಇತ್ಯಾದಿಯಾಗಿ ಮಹಿಳೆ ಆಡಿರುವ ಮಾತುಗಳು ಆಡಿಯೋದಲ್ಲಿವೆ. ಇನ್ನೂ ಏನೇನು ಮಾತನಾಡಿದ್ದಾರೆ ಆ ಮಹಿಳೆ? ಇಲ್ಲಿದೆ ವಿವರ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More