ವೀಕೆಂಡ್ ಕರ್ಫ್ಯೂನಲ್ಲಿ ಹೊರಬಂದವರು ಕೋವಿಡ್ ಟೆಸ್ಟ್​ಗೊಳಗಾದಾಗ ಮಾಡಿದ ಹಾವಭಾವಗಳು ಮನರಂಜನೆ ನೀಡುತ್ತವೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 15, 2022 | 7:59 PM

ಆದರೆ ಮೂಗಿನ ಸ್ವ್ಯಾಬ್ ತೆಗೆದುಕೊಳ್ಳಲು ಆಕೆ ಬಿಡುವುದೇ ಇಲ್ಲ. ಆರೋಗ್ಯ  ಕಾರ್ಯಕರ್ತ 3-4 ಬಾರಿ ಪ್ರಯತ್ನಿಸಿದರೂ ಸ್ವ್ಯಾಬ್ ನಮೂನೆ ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಕೊನೆವರೆಗೆ ಅದನ್ನು ತೆಗೆದುಕೊಳ್ಳಲು ಹುಡುಗಿ ಬಿಡುವುದೇ ಇಲ್ಲ. ಲಸಿಕೆ ತೆಗೆದುಕೊಳ್ಳುತ್ತಿರುವ ಹಾಗೆ ಆಡುತ್ತಾಳೆ.

ಕೋವಿಡ್ ಪಿಡುಗು ನಿಯಂತ್ರಿಸಲು ಸರ್ಕಾರ ಎಷ್ಟೇ ಕಠಿಣ ನಿಯಮ ಜಾರಿಗೆ ತಂದರೂ, ದಂಡ ವಿಧಿಸಿದರೂ ನಮ್ಮ ಜನ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿ ತಿರುಗಾಡುವುದನ್ನು ಮಾತ್ರ ನಿಲ್ಲಿಸಲಾರರು ಮಾರಾಯ್ರೇ. ವೀಕೆಂಡ್ ಕರ್ಫ್ಯೂ, ಲಾಕ್ಡೌನ್ (lockdown) ಘೋಷಿಸುವುದು ಕೇವಲ ನಮ್ಮ ಪ್ರಯೋಜನಕ್ಕೆ ಅಂತ ಜನಕ್ಕೆ ಅರ್ಥವಾಗದಿರುವುದು ನಿಜಕ್ಕೂ ದುರುಂತ. ಕರ್ಫ್ಯೂನಲ್ಲೂ ಮನೆಬಿಟ್ಟು ಆಚೆ ಬರೋದು ಅಪ್ಪಟ ಬೇಜವಾಬ್ದಾರಿತನ (irresponsible) ಮತ್ತು ಡೆವಿಲ್ ಮೇ ಕೇರ್ (devil may care) ಮನೋಭಾವನೆ. ಬೆಂಗಳೂರಿನ ಕೆ ಆರ್ ಮಾರ್ಕೆಟ್ ಬಳಿ ಕಳೆದ ವಾರ ಪೊಲೀಸರು, ಬಿ ಬಿ ಎಮ್ ಪಿ ಮಾರ್ಷಲ್ಗಳು ಮತ್ತು ಆರೋಗ್ಯ ಇಲಾಖೆಯ ಕಾರ್ಯಕರ್ತರು ಸುಖಾಸುಮ್ಮನೆ ಮನೆಬಿಟ್ಟು ಬಂದವರ ವಾಹನಗಳನ್ನು ಸೀಜ್ ಮಾಡಿದ್ದಲ್ಲದೆ ಅವರ ಆರ್ ಟಿ-ಪಿಸಿಆರ್ ಟೆಸ್ಟ್ ಮಾಡಿದ್ದನ್ನು ನಾವು ತೋರಿಸಿದ್ದೇವೆ. ಜನ ಎಲ್ಲವನ್ನೂ ನೋಡಿಯೂ ಯಾಮಾರುತ್ತಾರೆ. ನಮ್ಮನ್ನು ಹಿಡಿಯಲಿಕ್ಕಿಲ್ಲ ಎಂಬ ಉದ್ಧಟ ಮತ್ತು ಉಡಾಫೆ ಧೋರಣೆಯೊಂದಿಗೆ ಹೊರಬರುತ್ತಾರೆ, ಕೋವಿಡ್ ವಾರಿಯರ್​ಗಳ ಕೈಗೆ ಸಿಕ್ಕು ಈ ಗೋಳು ಅನುಭವಿಸುತ್ತಾರೆ.

ಈ ಚಿಕ್ಕ ಹುಡುಗಿಯ ಪಾಡು ನೋಡಿ. ವಿದ್ಯಾವಂತಳಾದರೂ ತನ್ನಮ್ಮನ ಜೊತೆ ಹೊರಬಂದಿದ್ದಾಳೆ. ಆರೋಗ್ಯ ಕಾರ್ಯಕರ್ತರು ಆಕೆಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದ್ದಾರೆ. ಬಾಯಿಯೊಳಗಿನ ಸಲೈವಾ ಸ್ಯಾಂಪಲ್ ಸಂಗ್ರಹಿಸಲು ಆಕೆ ತೊಂದರೆ ಮಾಡುವುದಿಲ್ಲ.

ಆದರೆ ಮೂಗಿನ ಸ್ವ್ಯಾಬ್ ತೆಗೆದುಕೊಳ್ಳಲು ಆಕೆ ಬಿಡುವುದೇ ಇಲ್ಲ. ಆರೋಗ್ಯ  ಕಾರ್ಯಕರ್ತ 3-4 ಬಾರಿ ಪ್ರಯತ್ನಿಸಿದರೂ ಸ್ವ್ಯಾಬ್ ನಮೂನೆ ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಕೊನೆವರೆಗೆ ಅದನ್ನು ತೆಗೆದುಕೊಳ್ಳಲು ಹುಡುಗಿ ಬಿಡುವುದೇ ಇಲ್ಲ. ಲಸಿಕೆ ತೆಗೆದುಕೊಳ್ಳುತ್ತಿರುವ ಹಾಗೆ ಆಡುತ್ತಾಳೆ.

ಆಮೇಲೆ ಇನ್ನೊಬ್ಬ ಬರುತ್ತಾನೆ, ಇವನು ಉತ್ತರ ಭಾರತೀಯ ಮಾರಾಯ್ರೇ. ಟೆಸ್ಟ್ ಗೆ ಕೂರುವ ಮೊದಲೇ ಆವನು ಸ್ಯಾಂಪಲ್ ಸಂಗ್ರಹಿಸಿವರಿಗೆ ತಾಕೀತು ಮಾಡಲು ಆರಂಭಿಸುತ್ತಾನೆ. ಮೆತ್ತಗೆ ಮಾಡಿ, ಮೂಗಿಗೆ ಗಾಯವಾಗುತ್ತದೆ ಅಂತ ಏನೇನೋ ಹೇಳುವ ಪ್ರಯತ್ನ ಮಾಡುತ್ತಾನೆ. ಇಂಥ ಪ್ರಹಸನಗಳು ದಿನವೆಲ್ಲ ನಡೆದವು ಮಾರಾಯ್ರೇ.

ಇದನ್ನೂ ಓದಿ:   ಕರ್ಮ ರಿಟರ್ನ್ಸ್​: ಬಾಲವನ್ನು ಎಳೆಯಲು ಹೋದವನನ್ನು ಒದ್ದು ಬೀಳಿಸಿದ ಒಂಟೆ; ವಿಡಿಯೋ ವೈರಲ್​​