ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ, ವಿಡಿಯೋ ನೋಡಿ
ಇತ್ತೀಚಿಗೆ ಮನುಷ್ಯನ ಆಯುಷ್ಯ ಕುಸಿಯುತ್ತ ಸಾಗಿದೆ. ಅಕಾಲಿಕ ಸಾವಿನಿಂದ ಅಲ್ಪಾಯುಷಿಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಆದ್ರೆ, ಇದೇ ವೇಳೆ ಕೋಟೆನಾಡಿನಲ್ಲಿ ಶತಾಯುಷಿ ಅಜ್ಜಿಯ ಬರ್ತಡೇ ಸಂಭ್ರಮಾಚರಣೆ ಎಲ್ಲರ ಗಮನಸೆಳೆದಿದೆ. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಶತಾಯುಷಿ ಬಂದಮ್ಮ ಅವರ ನೂರನೇ ಜನ್ಮ ದಿನವನ್ನು ಅದ್ಧೂರೊಯಾಗಿ ಆಚರಿಸಲಾಗಿದೆ. ಹಿಂದಿನ ಕಾಲದವರ ಟೆನ್ಷನ್ ಲೆಸ್ ಬದುಕು, ಉತ್ತಮ ಆಹಾರ ಪದ್ಧತಿ ಮತ್ತು ಶ್ರಮಜೀವನವೇ ಬಂದಮ್ಮ ಅವರ ದೀರ್ಘಾಯುಷ್ಯದ ಗುಟ್ಟು ಎಂಬ ಮಾತು ಈ ಸಂದರ್ಭದಲ್ಲಿ ಕೇಳಿ ಬಂದಿದ್ದು ಬಂದಮ್ಮ ಅವರ ಜನ್ಮದಿನಾಚರಣೆಯ ಸಾರ್ಥಕತೆ ಆಗಿದೆ.
ಚಿತ್ರದುರ್ಗ, (ಜೂನ್ 24): ನೂರಾರು ಕುಟುಂಬಸ್ಥರ ಮದ್ಯೆ ಶತಾಯುಷಿ ಅಜ್ಜಿಯ ಬರ್ತಡೇ ಸಂಭ್ರಮ. ಕೇಕ್ ಕತ್ತರಿಸಿ ಸಿಹಿ ಹಂಚಿದ ದೀರ್ಘಾಯುಷಿ ಬಂದಮ್ಮ. ದೊಡ್ಡಪೇಟೆಯ ಗೌಡ್ರ ವಂಶಸ್ಥರಿಂದ ಹಿರಿಯಜ್ಜಿಯ ಜನ್ಮ ಶತಮಾನೋತ್ಸವ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ. ಹೌದು, ಸ್ವತಂತ್ರ ಪೂರ್ವದಲ್ಲಿ ಅಂದರೆ 1925ರಲ್ಲಿ ಜನಿಸಿದ ಬಂದಮ್ಮ(100) ಗೌಡ್ರ ವಂಶದವರು. ಏಳು ಜನ ಮಕ್ಕಳಿದ್ದು ಮೂವರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು. ಮಕ್ಕಳು , ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳನ್ನು ಬಂದಮ್ಮ ಅಜ್ಜಿ ಕಂಡಿದ್ದಾರೆ. ಈಗಲೂ ಉತ್ತಮ ನೆನಪಿನ ಶಕ್ತಿ ಹೊಂದಿದ್ದ ಸಂಸ್ಕೃತಿ, ಪರಂಪರೆ, ಸಂಸ್ಕಾರ ಹೇಳಿ ಕೊಡುತ್ತಾರೆ. ಮದುವೆ ಸಂದರ್ಭದಲ್ಲೇ ನಮಗೆ ಗೊತ್ತಿಲ್ಲದ ಎಷ್ಟೋ ಆಚರಣೆಗಳು ಹೇಳಿಕೊಟ್ಟರೆಂದು ನೆನೆಯುತ್ತಾರೆಂದು ಮರಿಮೊಮ್ಮಗಳು ಡಾ.ಸುಶ್ಮಿತಾ ಸ್ಮರಿಸಿದರೆ, ಹೆತ್ತಮ್ಮಳ ಬಗ್ಗೆ ಮಗಳು ರತ್ನ ಹೆಮ್ಮೆ ಪಡುತ್ತಾರೆ.
ಇನ್ನು ಬಂದಮ್ಮ ಅವರ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳೇ 70ಕ್ಕೂ ಹೆಚ್ಚು ಜನ ಆಗುತ್ತಾರೆ. ಸಂಬಂಧಿಕರು ಸೇರಿ ನೂರಾರು ಜನ ಒಂದೆಡೆ ಸೇರ ಶತಾಯುಷಿಯ ಬರ್ತಡೇ ಸೆಲೆಬ್ರಿಟ್ ಮಾಡಿದ್ದಾರೆ. ಕೇಕ್ ಕತ್ತರಿಸಿ ಸಿಹಿ ಹಂಚಿಕೊಂಡಿದ್ದಾರೆ. ಅಲ್ಲದೆ ಕುಟುಂವಸ್ಥರೆಲ್ಲ ಸೇರಿ ಶುಭ ಕಾರ್ಯಕ್ರಮದಂತೆ ಭೋಜನ ಸವಿದು ಸಂಭ್ರಮಿಸಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಶತಾಯುಷಿ ಬಂದಮ್ಮ ಅವರ ನೂರನೇ ಜನ್ಮ ದಿನವನ್ನು ಅದ್ಧೂರೊಯಾಗಿ ಆಚರಿಸಲಾಗಿದೆ. ಹಿಂದಿನ ಕಾಲದವರ ಟೆನ್ಷನ್ ಲೆಸ್ ಬದುಕು, ಉತ್ತಮ ಆಹಾರ ಪದ್ಧತಿ ಮತ್ತು ಶ್ರಮಜೀವನವೇ ಬಂದಮ್ಮ ಅವರ ದೀರ್ಘಾಯುಷ್ಯದ ಗುಟ್ಟು ಎಂಬ ಮಾತು ಈ ಸಂದರ್ಭದಲ್ಲಿ ಕೇಳಿ ಬಂದಿದ್ದು ಬಂದಮ್ಮ ಅವರ ಜನ್ಮದಿನಾಚರಣೆಯ ಸಾರ್ಥಕತೆ ಆಗಿದೆ.