ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಓಕೆ ಅಂತಾಳೆ; ವೇದಿಕೆ ಮೇಲೆ ಪತ್ನಿ ಬಗ್ಗೆ ಮಾತಾಡಿದ ಹಂಸಲೇಖ
ಸಂಗೀತ ನಿರ್ದೇಶಕ ಹಂಸಲೇಖ ಅವರು ‘ಒಕೆ’ ಚಿತ್ರದ ಮೂಲಕ ನಿರ್ದೇಶಕ ಆಗುತ್ತಿದ್ದಾರೆ. ಇತ್ತೀಚೆಗೆ ನಡೆದ ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಪತ್ನಿ ಲತಾ ಕುರಿತು ಮಾತಾಡಿದರು. ಹಂಸಲೇಖ ಅವರ ವೃತ್ತಿಜೀವನಕ್ಕೆ ಲತಾ ಅವರು ಬೆಂಬಲವಾಗಿ ನಿಂತಿದ್ದರು. ಅವರಿಗೆ ‘ಓಕೆ’ ವೇದಿಕೆಯಲ್ಲಿ ಸನ್ಮಾನ ಮಾಡಲಾಯಿತು.
ಮ್ಯೂಸಿಕ್ ಡೈರೆಕ್ಟರ್ ಹಂಸಲೇಖ ಅವರು ‘ಒಕೆ’ ಸಿನಿಮಾ (OK Kannada Movie) ಮೂಲಕ ನಿರ್ದೇಶಕನಾಗುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಪತ್ನಿ ಲತಾ (Latha Hamsalekha) ಬಗ್ಗೆ ಮಾತನಾಡಿದರು. ಹಂಸಲೇಖ ಅವರ ವೃತ್ತಿಜೀವನಕ್ಕೆ ಲತಾ ಅವರು ಬೆಂಬಲವಾಗಿ ನಿಂತಿದ್ದರು. ‘ಪಾಪ ನನ್ನ ಹೆಂಡತಿ, ಜೀವನದಲ್ಲಿ ಒಂದು ದಿನವೂ ನಾನು ಹೇಳಿದ್ದಕ್ಕೆ ಇಲ್ಲ ಅಂತ ಹೇಳಿಲ್ಲ. ನಾನು ಒಳ್ಳೆಯದು ಹೇಳಿದರೂ ಓಕೆ, ಕೆಟ್ಟದ್ದು ಹೇಳಿದರೂ ಓಕೆ ಅಂದಳು. ಜೀವನ ಪೂರ್ತಿ ಪಾಸಿಟಿವ್ ಆಗಿ ನಮ್ಮನ್ನು ಬೆಂಬಲಿಸಿದ ಸುಂದರ ಮನಸ್ಸಿನ ಹೆಣ್ಣು ಈಕೆ. ಎಲ್ಲ ಕ್ರೆಡಿಟ್ಸ್ ಈಕೆಗೆ ಸಲ್ಲುತ್ತದೆ’ ಎಂದು ಹಂಸಲೇಖ (Hamsalekha) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos