ದಾವಣಗೆರೆ ಸಂಸದೆ ಪ್ರಭಾರನ್ನು ಗೃಹ ಸಚಿವ ಅಮಿತ್ ಶಾ ಹೊಗಳಿದ್ಯಾಕೆ? ಪತಿ ಮಲ್ಲಿಕಾರ್ಜುನ ವಿವರಣೆ
ಶೀಘ್ರದಲ್ಲೇ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಮತ್ತು ಸಂಪುಟ ವಿಸ್ತರಣೆಯೂ ಅಗಲಿದೆ ಎಂಬ ವದಂತಿಯ ಬಗ್ಗೆ ಕೇಳಿದಾಗ ಸಚಿವ ಮಲ್ಲಿಕಾರ್ಜುನ, ಎಲ್ಲ ಹೈಕಮಂಡ್ ವಿಚೇಚನೆಗೆ ಬಿಟ್ಟಿದ್ದು ಎಂದರು. ನಾಲ್ಕು ಡಿಸಿಎಂಗಳ ನೇಮಕವಾಗಲಿದ್ದು ಅದರಲ್ಲಿ ಒಂದು ಸ್ಥಾನ ವೀರಶೈವ ಲಿಂಗಾಯತರಿಗೆ ಮೀಸಲಿಡುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ಎಲ್ಲ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.
ದಾವಣಗೆರೆ, ಜೂನ್ 24: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah, Union Home Minister) ಅವರು ದಾವಣಗೆರೆಯ ಸಂಸದೆ ಪ್ರಭಾ ಮಲ್ಲಿಕಾರ್ಜುನ (Prabha Mallikarjun) ಅವರನ್ನು ಹೊಗಳಿ ಮಾತಾಡಿದ್ದು ಚರ್ಚೆಗೆ ಕಾರಣವಾಗಿದೆ. ಸಂಸದೆಯ ಪತಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ವಿಷಯದ ಬಗ್ಗೆ ಕೇಳಿದಾಗ, ಒಳ್ಳೇ ಕೆಲಸ ಮಾಡಿದ್ದಕ್ಕೆ ಹೊಗಳಿದ್ದಾರೆ, ಅದರಲ್ಲಿ ತಪ್ಪೇನಿದೆ ಎಂದರು. ಚುನಾವಣೆಯಲ್ಲಿ ಹೊಂದಾಣಿಕೆ ನಡೆದಿದ್ದಕ್ಕೆ ಏನಾದರೂ ಹಾಗೆ ಹೇಳಿದ್ರಾ ಅಂತ ಕೇಳಿದಾಗ, ಅವರು ಹಾಗೆ ಹೇಳಿಲ್ಲ, ನೀವು ಶಾಮನೂರು ಮನೆತನದ ಸೊಸೆಯಾಗಿ ಹೆಸರನ್ನು ಉಳಿಸಿದ್ದೀರಿ, ವೀರಶೈವ ಸಮಾಜ ನಿಮ್ಮ ಬೆನ್ನಿಗೆ ನಿಂತಿದೆ ಅಂತ ಹೇಳಿದ್ದಾರೆ ಎಂದು ಮಲ್ಲಿಕಾರ್ಜುನ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಒಂದು ಸಮುದ್ರದಂತೆ ಬರುವವರಿಗೆಲ್ಲ ಸ್ವಾಗತ: ಎಸ್ ಎಸ್ ಮಲ್ಲಿಕಾರ್ಜುನ, ಸಚಿವ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ