ಕರ್ನಾಟಕಕ್ಕೆ 16ನೇ ಹಣಕಾಸು ಆಯೋಗದಿಂದ ಸುಮಾರು ₹80,000 ಕೋಟಿ ಅನುದಾನ ಸಿಗಬೇಕಿದೆ: ಸಿದ್ದರಾಮಯ್ಯ
ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಕರ್ನಾಟಕದ 7 ಪೆಂಡಿಂಗ್ ಬಿಲ್ಗಳ ಬಗ್ಗೆ ನೆನಪಿಸಲಾಯಿತು. ಮಸೂದೆಗಳು ಸಂಬಂಧಪಟ್ಟ ಇಲಾಖೆಗಳಲ್ಲಿ ಉಳಿದುಕೊಂಡಿವೆ ಎಂದು ರಾಷ್ಟ್ರಪತಿ ಹೇಳಿದಾಗ, ಅವುಗಳನ್ನು ಬೇಗ ತರಿಸಿಕೊಂಡು ಅನುಮೋದನೆ ನೀಡಬೇಕೆಂದು ವಿನಂತಿಸಿಕೊಂಡೆವು. ಬಿಲ್ ಗಳು ಯಾವ್ಯಾವು ಅನ್ನೋದನ್ನು ಸಹ ರಾಷ್ಟ್ರಪತಿಯವರಿಗೆ ವಿವರಿಸಿದೆವು ಎಂದು ಸಿದ್ದರಾಮಯ್ಯ ಹೇಳಿದರು.
ದೆಹಲಿ, ಜೂನ್ 24: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರನ್ನು ಭೇಟಿ ಮಾಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಹಿಂದಿನ ಬಾರಿ ದೆಹಲಿಗೆ ಬಂದಾಗ 16ನೇ ಹಣಕಾಸು ಆಯೋಗದ ಚೇರ್ಮನ್ ಮತ್ತು ಸದಸ್ಯರನ್ನು ಭೇಟಿಯಾಗಿ ರಾಜ್ಯಕ್ಕೆ ಸಿಗಬೇಕಿರುವ ಅನುದಾನ, ತೆರಿಗೆ ಹಣ ಮೊದಲಾದವುಗಳ ಬಗ್ಗೆ ಜ್ಞಾಪನಾ ಪತ್ರ ಸಲ್ಲಿಸಿದ್ದನ್ನು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿವರಿಸಲಾಯಿತು. 14 ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15 ನೇ ಹಣಕಾಸು ಆಯೋಗದ ವಿತರಣೆಯಲ್ಲಿ ರಾಜ್ಯಕ್ಕೆ ಶೇಕಡ 4.7 ರಷ್ಟು ಕಡಿಮೆಯಾಗಿದೆ. ಬೇರೆ ಬೇರೆ ಬಾಬತ್ತುಗಳಿಂದ ರಾಜ್ಯಕ್ಕೆ ₹80,000 ಕೋಟಿಗೂ ಹೆಚ್ಚು ಅನುದಾನ ಬರಬೇಕಿದೆ, ಅದನ್ನು ಬಿಡುಗಡೆ ಮಾಡಿಸಲು ನಿರ್ಮಲಾ ಸೀತಾರಾಮನ್ ಅವರನ್ನು ವಿನಂತಿ ಮಾಡಿಕೊಳ್ಳಲಾಯಿತು ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ರಾಷ್ಟ್ರಪತಿಗಳ ಭೇಟಿಗೆ ದೆಹಲಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೋರಿದ್ದೇನೆ: ಸಿದ್ದರಾಮಯ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ