ಕುಮಾರಾಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಗಣಿಗಾರಿಕೆ ವರದಿಗಳನ್ನು ಇಟ್ಟುಕೊಂಡು ಅಭಿಷೇಕ ಮಾಡ್ತಿದ್ರಾ? ಹೆಚ್ಕೆ ಪಾಟೀಲ್
ನಾನು ಯಾರಿಗೆ ಪತ್ರ ಬರೆದಿರುವೆನೋ ಅವರು ಅದನ್ನು ಕಸದ ಬುಟ್ಟಿಗೆ ಹಾಕಬೇಕೋ ಇಲ್ಲ ಕ್ರಮದ ತೊಟ್ಟಿಗೆ ಹಾಕಬೇಕೋ ಅನ್ನೋದನ್ನು ನಿರ್ಣಯಿಸುತ್ತಾರೆ, ಅದರ ಬಗ್ಗೆ ಕುಮಾರಸ್ವಾಮಿ ಸಲಹೆ ನೀಡಬೇಕಿಲ್ಲ. ನಾನು ಸಿಎಂಗೆ ಪತ್ರ ಬರೆದಿರುವ ಉದ್ದೇಶ ಕರ್ನಾಟಕಕ್ಕೆ ಆಗಿರುವ ₹ 1.50 ಲಕ್ಷ ಕೋಟಿ ನಷ್ಟ ವಾಪಸ್ಸು ಬರಬೇಕು, ಎಂದು ಹೆಚ್ ಕೆ ಪಾಟೀಲ್ ಹೇಳಿದರು.
ಗದಗ, ಜೂನ್ 24: ಅಕ್ರಮ ಗಣಿಗಾರಿಕೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವುದನ್ನು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಗೇಲಿ ಮಾಡಿದ್ದು ರಾಜ್ಯ ಕಾನೂನು ಸಚಿವ ಹೆಚ್ ಕೆ ಪಾಟೀಲ್ಗೆ ತೀವ್ರ ಅಸಮಾಧಾನ ಉಂಟುಮಾಡಿದೆ. ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು; ತನ್ನ ಪತ್ರದ ಬಗ್ಗೆ ಉಲ್ಲೇಖಿಸುವಾಗ ಕುಮಾರಸ್ವಾಮಿ, ಪೌರಾಣಿಕ ಹೆಸರುಗಳು-ಕುಂಭಕರ್ಣ, ರಾವಣ ಬಳಸುತ್ತಾರೆ. ಕುಮಾರಸ್ವಾಮಿ ದೊಡ್ಡ ಸ್ಥಾನದಲ್ಲಿರುವವರು, ರಾಜ್ಯಕ್ಕೆ ₹ 1.50 ಲಕ್ಷ ಕೋಟಿ ನಷ್ಟವಾಗಿರುವ ಬಗ್ಗೆ ಯೋಚಿಸಬೇಕು ಎಂದು ಹೇಳುತ್ತಾರೆ. ಅಕ್ರಮ ಗಣಿಗಾರಿಕೆ ವರದಿ ತಮ್ಮಲ್ಲೇ ಇದ್ದರೂ ಸಿಎಂ ಸಿದ್ದರಾಮಯ್ಯ ಪೂಜೆ ಮಾಡ್ತಿದ್ರಾ ಅಂತ ಕುಮಾರಸ್ವಾಮಿ ಕೇಳುತ್ತಾರೆ, ಅವರೂ ಸಿಎಂ ಆಗಿದ್ದರು ಮತ್ತು ಅವರ ಬಳಿಯೂ ಅಕ್ರಮ ಗಣಿಗಾರಿಕೆಯ ವರದಿಗಳಿದ್ದವು, ಆಗೇನೂ ಕುಮಾರಾಸ್ವಾಮಿ ಅಭಿಷೇಕ ಮಾಡ್ತಿದ್ರಾ ಅಂತ ಪಾಟೀಲ್ ಕೇಳುತ್ತಾರೆ.
ಇದನ್ನೂ ಓದಿ: ಉದ್ಧಟತನ ಪ್ರದರ್ಶಿಸಿದಾಗ ಜಮೀರ್ ರಾಜೀನಾಮೆ ಅಂಗೀಕರಿಸಬೇಕೆಂದು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದೆ: ಕುಮಾರಸ್ವಾಮಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ