ಯಾವುದೇ ಹಣಕಾಸು ಮತ್ತು ವಿಮಾ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೂ ಅದನ್ನು ಕುಟುಂಬದವರ ಗಮನಕ್ಕೆ ತಂದಿರಬೇಕು: ಡಾ ಬಾಲಾಜಿ ರಾವ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 15, 2021 | 8:06 PM

ಪುರುಷರ ಇಂಥ ಬೇಜವಾಬ್ದಾರಿತನ ಮತ್ತು ಉಡಾಫೆಯ ಮನೋಭಾವದಿಂದಾಗಿಯೇ ಭಾರತದ ಹಣಕಾಸು ಮತ್ತು ವಿಮಾ ಸಂಸ್ಥೆಗಳಲ್ಲಿ 89,000 ಕೋಟಿ ರೂ. ಗಳಷ್ಟು ಮೊತ್ತದ ಹಣ ಅನಾಥವಾಗಿ ಬಿದ್ದಿದೆ ಎಂದು ಡಾ ರಾವ್ ಹೇಳುತ್ತಾರೆ.

ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಅವರು ಈ ಸಂಚಿಕೆಯಲ್ಲಿ ಅತ್ಯಂತ ಪ್ರಮುಖವಾದ ವಿಷಯವನ್ನು ವಿವರಿಸಿದ್ದಾರೆ. ವಿಶೇಷವಾಗಿ ಇದನ್ನು ಮಹಿಳೆಯರು ಬಹಳ ವ್ಯವಧಾನದಿಂದ ಮತ್ತು ಆಸ್ಥೆಯಿಂದ ಓದಬೇಕು ಮತ್ತು ಕೇಳಿಸಿಕೊಳ್ಳಬೇಕೆಂದು ಅವರು ಹೇಳುತ್ತಾರೆ. ಯಾಕೆಂದರೆ, ಮನೆಗಳಲ್ಲಿ ಗಂಡಸರು ತಾವು ಮಾಡುವ ಹಣಕಾಸಿನ ವ್ಯವಹಾರಗಳನ್ನು ತಮ್ಮ ಹೆಂಡಂದಿರ ಗಮನಕ್ಕೆ ತಂದಿರುವುದಿಲ್ಲ. ನಿಸ್ಸಂದೇಹವಾಗಿ ಇದು ಉಡಾಫೆಯ ಸ್ವಭಾವ ಮತ್ತು ನಂತರದ ದಿನಗಳಲ್ಲಿ ಬಹಳ ದುಬಾರಿಯಾಗುವ ಸಾಧ್ಯತೆಯಿರುತ್ತದೆ. ಸಾವು ಯಾವಾಗಲೂ ಅನಿಶ್ಚಿತವೇ, ಆದರೆ ಇವತ್ತಿನ ಕಾಲಘಟ್ಟದಲ್ಲಿ ಕಿರಿವಯಸ್ಸಿನವರು ಸಹ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪುತ್ತಿದ್ದಾರೆ. ಹಾಗೆ ಸತ್ತವರು ಶ್ರೀಮಂತರಾಗಿದ್ದರೆ, ಕುಟುಂಬಕ್ಕೆ ಹಣಕಾಸಿನ ಸಮಸ್ಯೆ ಎದುರಾಗಲಾರದು. ಆದರೆ ಮಧ್ಯಮ ಮತ್ತು ಕೆಳ ಮಧ್ಯಮ ವರ್ದ ಕುಟುಂಬದರು ಬಹಳ ತೊಂದರೆ ಅನುಭವಿಸ ಬೇಕಾಗುತ್ತದೆ ಎಂದು ಡಾ ಬಾಲಾಜಿ ರಾವ್ ಹೇಳುತ್ತಾರೆ.

ಪುರುಷರ ಇಂಥ ಬೇಜವಾಬ್ದಾರಿತನ ಮತ್ತು ಉಡಾಫೆಯ ಮನೋಭಾವದಿಂದಾಗಿಯೇ ಭಾರತದ ಹಣಕಾಸು ಮತ್ತು ವಿಮಾ ಸಂಸ್ಥೆಗಳಲ್ಲಿ 89,000 ಕೋಟಿ ರೂ. ಗಳಷ್ಟು ಮೊತ್ತದ ಹಣ ಅನಾಥವಾಗಿ ಬಿದ್ದಿದೆ ಎಂದು ಡಾ ರಾವ್ ಹೇಳುತ್ತಾರೆ. ಪೋಸ್ಟ್ ಆಫೀಸು, ಬ್ಯಾಂಕ್, ವಿಮಾ ಸಂಸ್ಥೆ, ಮ್ಯುಚುವಲ್ ಫಂಡ್, ಶೇರುಗಳು ಹೀಗೆ ನಾನಾ ಸಂಸ್ಥೆಗಳಲ್ಲಿ ಹೂಡಿದ ಹಣ ವಾರಸುದಾದರರಿಲ್ಲದೆ, ದಿಕ್ಕಿಲ್ಲದೆ ಕೊಳೆಯುತ್ತಿದೆ.

ಡಾ ರಾವ್ ಅವರು ತಮ್ಮ ಸ್ವಂತ ಮಾವನ ಉದಾಹರಣೆಯನ್ನು ಹೇಳುತ್ತಾರೆ. ಅವರು ನಾನಾ ಕಡೆ ಸುಮಾರು 20 ಲಕ್ಷದಷ್ಟು ಹಣವನ್ನು ಹೂಡಿದ್ದರಂತೆ. ಅದರೆ ಅದನ್ನು ಅವರು ತಮ್ಮ ಪತ್ನಿ ಇಲ್ಲವೇ ಮಕ್ಕಳ ಗಮನಕ್ಕೆ ತಂದಿರಲಿಲ್ಲ. ಅವರು ಖರೀದಿಸಿದ ಬಾಂಡ್ಗಳು, ವಿಮಾ ಪಾಲಿಸಿಗಳು ಯಾವತ್ತೋ ಮೆಚ್ಯೂರ್ ಅಗಿಬಿಟ್ಟಿದ್ದವಂತೆ. ಅವರ ಹೂಡಿಕೆ ಎಲ್ಲ ವ್ಯರ್ಥ ಅಂತ ರಾವ್ ಹೇಳುತ್ತಾರೆ.

ಹಾಗೆಯೇ, ವಿಮಾ ಪಾಲಿಸಿಗಳನ್ನು ಮಾಡಿಸುವಾಗ ನಾಮಿನೀಗಳ ಹೆಸರು ಬರೆಯುವಾಗ ಪ್ರಮಾದವಾದರೆ ಅಗುವ ಅವಾಂತರಗಳನ್ನು ಅವರು ಉದಾಹರಣೆ ಸಮೇತ ವಿವರಿಸಿದ್ದಾರೆ. ಅವರ ಸ್ನೇಹಿತರೊಬ್ಬರು ಇದೇ ಏಪ್ರಿಲ್ ನಲ್ಲಿ ಕೋವಿಡ್ ಗೆ ಬಲಿಯಾದರಂತೆ. ಆದರೆ, ಆರೋಗ್ಯ ವಿಮಾ ಪಾಲಿಸಿಯಲ್ಲಿ ತಮ್ಮ ಪತ್ನಿಯ ಹೆಸರನ್ನು ತಪ್ಪಾಗಿ ನಮೂದಿಸಿದ್ದರಿಂದ ಅವರು ಹಣ ಕ್ಲೇಮ್ ಮಾಡಲು 4-5 ತಿಂಗಳು ಪರದಾಡಬೇಕಾಯಿತಂತೆ.

ಹಾಗಾಗೇ, ಪುರುಷರು ಏನೇ ಮಾಡಿದರೂ ಅದು ತಮ್ಮ ಸಂಸ್ಕಾರಕ್ಕಾಗಿ ಮಾಡಿರುತ್ತಾರೆ. ಆದರೆ ಅದನ್ನು ಅವರ ಗಮನಕ್ಕೆ ತರದಿರುವುದು ಮೂರ್ಖತನ. ಯಾವುದಾದರೂ ಪಾಲಿಸಿ ತೆಗೆದುಕೊಂಡಾಗಲೂ ಅದರಲ್ಲಿ ತನ್ನ ಮತ್ತು ನಾಮಿನೀಯ ಹೆಸರು ಸ್ಪೆಲ್ಲಿಂಗ್ ತಪ್ಪಿಲ್ಲದಂತೆ ನಮೂದಿಸಬೇಕು ಎಂದು ಡಾ ರಾವ್, ಹೇಳುತ್ತಾರೆ.

ವಿಮೆ ಮಾಡಿಸುವಾಗ ಸಾವು ಅನ್ನುವ ಪದ ಬಳಕೆ ಆಗೇ ಆಗುತ್ತದೆ. ಅದರ ಬಗ್ಗೆ ಹಳೆ ಜಮಾನಾದವರಂತೆ ಓವರ್ ರಿಯಾಕ್ಟ್ ಮಾಡುವ ಅಗತ್ಯವಿಲ್ಲ, ನಾವೆಲ್ಲ ವಾಸ್ತವದಲ್ಲಿ ಜೀವಿಸಬೇಕು ಎಂದು ಅವರು ಹೇಳುತ್ತಾರೆ.

ಅಲ್ಲದೆ, ನಮ್ಮಲ್ಲಿ ಕೋಟ್ಯಾಂತರ ಜನ ಇನ್ಶೂರನ್ಸ್ ಮಾಡಿಸಿಲ್ಲ, ಅದು ದೊಡ್ಡ ತಪ್ಪು. ಪ್ರತಿಯೊಬ್ಬರು ತಮ್ಮ ಯೋಗ್ಯತೆ ಮತ್ತು ಸಾಮರ್ಥ್ಯಕ್ಕನಿಗುಣವಾಗಿ ವಿಮೆ ಮಾಡಿಸಬೇಕು ಅಂತ ಡಾ ಬಾಲಾಜಿ ರಾವ್ ಹೇಳುತ್ತಾರೆ.

ಇದನ್ನೂ ಓದಿ:  ಖ್ಯಾತ ನಟನಿಗೆ ಇದೆಂಥಾ ಗತಿ? ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ನೋಡಿ ಕಣ್ಣೀರಿಟ್ಟ ಫ್ಯಾನ್ಸ್​​​