ಟಿ20 ವಿಶ್ವಕಪ್ 2021 ಟೂರ್ನಿಯಿಂದ ಭಾರತ ಬೇಗ ನಿರ್ಗಮಿಸಿದ್ದು ಟಿವಿ ಚ್ಯಾನೆಲ್​ಗಳ ಆದಾಯಕ್ಕೆ ಭಾರಿ ಹೊಡೆತ ನೀಡಿತು

ಭಾರತ ಒಂದು ವೇಳೆ ನಾಕ್ ಔಟ್ ತಲುಪಿದ್ದರೆ, ಜಾಹೀರಾತು ದರ ಪ್ರತಿ 10 ಸೆಕೆಂಡಿಗೆ ರೂ. 35 ಲಕ್ಷ ಆಗಿರುತ್ತಿತ್ತು. ಈ ಹಿನ್ನೆಲೆಯಿಂದ ಆದಾಯದ ಪ್ರಮಾಣವನ್ನು ನೋಡಿದ್ದೇಯಾದರೆ, ಚ್ಯಾನೆಲ್ ಗಳ ಆದಾಯ ರೂ. 1,200 ಕೋಟಿ ಕಮ್ಮಿಯಾಗಿದೆ.

ಐಸಿಸಿ ಟಿ20 ವಿಶ್ವಕಪ್ 2021 ಇತಿಹಾಸ ಪುಟ ಸೇರಿದೆ. ಆಸ್ಟ್ರೇಲಿಯ ತನ್ನ ಟ್ರಾನ್ಸ್ ಟಾಸ್ಮನ್ ಎದುರಾಳಿ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್ ಗಳಿಂದ ಸದೆ ಬಡಿದು ಮೊದಲ ಬಾರಿಗೆ ಟಿ20 ಆವೃತ್ತಿಯ ವಿಶ್ಚಕಪ್ ಗೆದ್ದಿದೆ. ಪ್ರಶಸ್ತಿ ಗೆಲ್ಲಬಹುದಾದ ಫೇವರಿಟ್ ತಂಡಗಳಲ್ಲಿ ಒಂದೆನಿಸಿಕೊಂಡಿದ್ದ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಆಡಿದ ಪಂದ್ಯಗಳನ್ನು ಸೋತು, ಲೀಗ್ ಹಂತದಲ್ಲೇ ಟೂರ್ನಿಯಿಂದ ನಿರ್ಗಮಿಸಿ ಈ ಟೂರ್ನಿಯ ಪ್ರಸರಣದ ಹಕ್ಕು ಸಂಪಾದಿಸಿದ್ದ ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಚ್ಯಾನೆಲ್ಗಳಿಗೆ ಅಪಾರ ಪ್ರಮಾಣದ ನಷ್ಟವನ್ನುಂಟು ಮಾಡಿದೆ. ಲೀಗ್ ನಲ್ಲಾಡಿದ ಇತರ ಪಂದ್ಯಗಳನ್ನು ಭಾರತ ಸುಲಭವಾಗಿ ಗೆದ್ದಿತಾದರೂ ಅದು ನಾಕ್ ಔಟ್ ಹಂತ ತಲುಪಲು ಸಹಾಯ ಮಾಡುವಂತಿರಲಿಲ್ಲ.

ಒಂದು ಅಂದಾಜಿನ ಪ್ರಕಾರ ಟಿವಿ ಚ್ಯಾನೆಲ್ ಗಳಿಗೆ ಕನಿಷ್ಠ 250 ಕೋಟಿ ರೂ. ನಷ್ಟವಾಗಿದೆ. ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಅತ್ಯಂತ ಜನಪ್ರಿಯ ತಂಡ ಮತ್ತು ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಾಗಿ ಮಾರ್ಪಟ್ಟು ದಶಕಗಳು ಕಳೆದಿವೆ. ಹಾಗಾಗಿ, ಕಾರ್ಪೊರೇಟ್ ಜಗತ್ತು ಟೀಮ್ ಇಂಡಿಯಾ ಆಡುವ ಪಂದ್ಯಗಳಿಗೆ ಜಾಹೀರಾತುಗಳ ಮೂಲಕ ಅಕ್ಷರಶಃ ಹಣ ಚೆಲ್ಲುತ್ತದೆ.

ಈ ವಿಷಯವನ್ನು ಗಮನದಲ್ಲಿಟ್ಟುಕೊಂಡೇ ಕ್ರೀಡಾ ಟಿವಿ ವಾಹಿನಿಗಳು ಪ್ರಸರಣದ ಹಕ್ಕು ಪಡೆಯಲು ಸಾವಿರಾರು ಕೋಟಿ ರೂ. ಗಳಿಗೆ ಬಿಡ್ಡಿಂಗ್ ಮಾಡುತ್ತವೆ ಮತ್ತು ಅದರ ದುಪ್ಪಟ್ಟು ಹಣವನ್ನು ಜಾಹೀರಾತುಗಳ ಮೂಲಕ ಸಂಪಾದಿಸುತ್ತವೆ. ನಿಮಗೆ ಗೊತ್ತಿರಲಿ, ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಪಂದ್ಯದಲ್ಲಿ ತಮ್ಮ ತಮ್ಮ ಜಾಹೀರಾತುಗಳ ಪ್ರತಿ 10 ಸೆಕೆಂಡಿಗೆ ಕಂಪನಿಗಳು ಚ್ಯಾನೆಲ್ಗಳಿಗೆ ನೀಡಿದ್ದು ರೂ, 25 ಲಕ್ಷ. ಅಂದರೆ ಅರ್ಧ ನಿಮಿಷದ ಌಡ್ ವೊಂದಕ್ಕೆ ಚ್ಯಾನೆಲ್ ಗಳು ಸಂಪಾದಿಸಿದ್ದು 75 ಲಕ್ಷ ರೂ.

ಭಾರತ ಒಂದು ವೇಳೆ ನಾಕ್ ಔಟ್ ತಲುಪಿದ್ದರೆ, ಜಾಹೀರಾತು ದರ ಪ್ರತಿ 10 ಸೆಕೆಂಡಿಗೆ ರೂ. 35 ಲಕ್ಷ ಆಗಿರುತ್ತಿತ್ತು. ಈ ಹಿನ್ನೆಲೆಯಿಂದ ಆದಾಯದ ಪ್ರಮಾಣವನ್ನು ನೋಡಿದ್ದೇಯಾದರೆ, ಚ್ಯಾನೆಲ್ ಗಳ ಆದಾಯ ರೂ. 1,200 ಕೋಟಿ ಕಮ್ಮಿಯಾಗಿದೆ. ಭಾರತ ಟೂರ್ನಿಯಿಂದ ನಿರ್ಗಮಿಸುತ್ತಿದ್ದಂತೆ, ಟಿವಿ ವೀಕ್ಷಕರ ಸಂಖ್ಯೆ ಶೇಕಡಾ 40-45 ಕಡಿಮೆಯಾಗಿದ್ದೇ ಇದಕ್ಕೆ ಕಾರಣ.

ಇದನ್ನೂ ಓದಿ:  Viral Video: ಶಾಲೆ ಪುನರಾರಂಭ; ಬ್ಯಾಂಡ್ ಬೀಟ್​ಗೆ ಹೆಜ್ಜೆ ಹಾಕುತ್ತಾ ಶಾಲೆಯ ಒಳಗೆ ಸಾಗಿದ ಮಕ್ಕಳು; ವಿಡಿಯೋ ನೋಡಿ

Click on your DTH Provider to Add TV9 Kannada