ವಿಧಾನಸೌಧದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಜತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು

ವಿಧಾನಸೌಧದಲ್ಲಿ ಅಭಿಮಾನಿಗಳು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಜತೆ ಸೆಲ್ಫಿಗೆ ಮುಗಿಬಿದ್ದಾರೆ. ಹಿಂದೂ ಹುಲಿ ಜೊತೆ ಒಂದು ಫೋಟೋ ಎಂದು ಅಭಿಮಾನಿಗಳು ಹೇಳುತ್ತಲೇ ಯತ್ನಾಳ್​ ಸಹ ಪೋಸ್ ನೀಡಿದರು.

Follow us
ರಮೇಶ್ ಬಿ. ಜವಳಗೇರಾ
|

Updated on: May 23, 2023 | 9:39 AM

ಬೆಂಗಳೂರು: ವಿಧಾನಸೌಧದಲ್ಲಿ ಕೇಸರಿ, ಹಸಿರು, ತುಳು, ತ್ರಿವರ್ಣದ ಶಾಲುಗಳ ಸಮಾಗಮ. ಎತ್ತಿನ ಗಾಡಿಯಲ್ಲೇ ಶಕ್ತಿಸೌಧಕ್ಕೆ ಬಂದ ಶಾಸಕರು. ಯೆಸ್​.. ರಾಜ್ಯದಲ್ಲಿ ಚುನಾವಣಾ ಸುಗ್ಗಿ ಮುಗಿದು ಈಗ ಹೊಸ ಫಸಲು ಬಂದಿದೆ. 16ನೇ ವಿಧಾನಸಭೆಯ ಮೊದಲ ಅಧಿವೇಶನ ಫುಲ್ ಕಲರ್​ಫುಲ್ ಆಗಿದ್ದು, ನೂತನ ಶಾಸಕರು ಹೊಸ ಹುರುಪಿನಿಂದಲೇ ಸದನದಲ್ಲಿ ಭಾಗಿಯಾಗಿದ್ರು. ಶಾಸಕರ ಫೋಟೋ ಶೂಟ್​ಗೆ ಸಖತ್ ಪೋಸ್ ಕೊಟ್ಟು ಎಂಜಾಯ್ ಮಾಡಿದ್ರು. ಅದರಲ್ಲೂ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಅವರದ್ದೇ ಫುಲ್ ಹವಾ. ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.