ಕೊರೊನಾ ಗಾಯದ ಮೇಲೆ ಕೊಳೆ ರೋಗದ ಬರೆ: ಟ್ರಾಕ್ಟರ್​ನಿಂದ ಈರುಳ್ಳಿ ಬೆಳೆ ನಾಶ

[lazy-load-videos-and-sticky-control id=”Dp7gOcDBmL4″] ದಾವಣಗೆರೆ: ಕೊರೊನಾ ಕಾಟದಿಂದ ಕಂಗಾಲಾಗಿರುವ ರೈತಾಪಿ ವರ್ಗಕ್ಕೆ ಈಗ ಬೆಳೆ ರೋಗದ ಬರೆ ಸಹ ಎದುರಾಗಿದೆ. ಕಷ್ಟಪಟ್ಟು ಬೆಳೆಸಿದ್ದ ಈರುಳ್ಳಿ ಬೆಳೆಗೆ ಕೊಳೆ ರೋಗ ಅಂಟಿತೆಂದು ಬೇಸತ್ತ ರೈತರು ಟ್ರಾಕ್ಟರ್​ನಿಂದ ಈರುಳ್ಳಿ ಬೆಳೆ ನಾಶಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮೈದೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಬೆಳೆ ಮಾತ್ರವಲ್ಲ, ಭೂಮಿಯೂ ಹಾಳಾಗುವ ಆತಂಕ ಗ್ರಾಮದ ರೈತರ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿಗೆ ಕೊಳೆ ರೋಗ ತಾಗಿದೆ. ಹಾಗಾಗಿ, ರೈತರಿಗೆ ಕೊಳೆ ರೋಗಕ್ಕೆ […]

ಕೊರೊನಾ ಗಾಯದ ಮೇಲೆ ಕೊಳೆ ರೋಗದ ಬರೆ: ಟ್ರಾಕ್ಟರ್​ನಿಂದ ಈರುಳ್ಳಿ ಬೆಳೆ ನಾಶ
Updated By: ಸಾಧು ಶ್ರೀನಾಥ್​

Updated on: Aug 24, 2020 | 2:10 PM

[lazy-load-videos-and-sticky-control id=”Dp7gOcDBmL4″]

ದಾವಣಗೆರೆ: ಕೊರೊನಾ ಕಾಟದಿಂದ ಕಂಗಾಲಾಗಿರುವ ರೈತಾಪಿ ವರ್ಗಕ್ಕೆ ಈಗ ಬೆಳೆ ರೋಗದ ಬರೆ ಸಹ ಎದುರಾಗಿದೆ. ಕಷ್ಟಪಟ್ಟು ಬೆಳೆಸಿದ್ದ ಈರುಳ್ಳಿ ಬೆಳೆಗೆ ಕೊಳೆ ರೋಗ ಅಂಟಿತೆಂದು ಬೇಸತ್ತ ರೈತರು ಟ್ರಾಕ್ಟರ್​ನಿಂದ ಈರುಳ್ಳಿ ಬೆಳೆ ನಾಶಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮೈದೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಬೆಳೆ ಮಾತ್ರವಲ್ಲ, ಭೂಮಿಯೂ ಹಾಳಾಗುವ ಆತಂಕ
ಗ್ರಾಮದ ರೈತರ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿಗೆ ಕೊಳೆ ರೋಗ ತಾಗಿದೆ. ಹಾಗಾಗಿ, ರೈತರಿಗೆ ಕೊಳೆ ರೋಗಕ್ಕೆ ಬೆಳೆ ಮಾತ್ರವಲ್ಲ, ಭೂಮಿಯೂ ಹಾಳಾಗುವ ಆತಂಕ ಶುರುವಾಗಿದೆ. ಹೀಗಾಗಿ, ಟ್ರಾಕ್ಟರ್ ಬಳಸಿ ಇಡೀ ಈರುಳ್ಳಿ ಬೆಳೆಯನ್ನು ರೈತರು ನಾಶಮಾಡಿದ್ದಾರೆ.

Published On - 10:39 am, Mon, 24 August 20