ಟೊಮೆಟೊ ತೋಟಕ್ಕೆ ಪೊಲೀಸ್ ಕಾವಲು: ರೈತ ಫುಲ್ ಖುಷ್, ವಿಡಿಯೋ ನೋಡಿ
ಚಾಮರಾಜನಗರ, ಆಗಸ್ಟ್ 07: ಸೂಕ್ತ ಬೆಲೆ ಇಲ್ಲದೇ ರಸ್ತೆ ಬದಿಗೆ ಎಸೆಯಲ್ಪಡುತ್ತಿದ್ದ ಕೆಂಪು ಸುಂದರಿ ಟೊಮೆಟೊಗೆ ಕಳೆದ ಒಂದು ತಿಂಗಳಿನಿಂದ ಭಾರೀ ಡಿಮ್ಯಾಂಡ್ ಬಂದಿದೆ. ಟೆಮೆಟೊ ದರ ಗಗನಕ್ಕೇರಿದ್ದು, ರೈತರ ಫುಲ್ ಖುಷ್ ಆಗಿದ್ದಾರೆ. ಟೆಮೆಟೊ ಬೆಲೆ ಏರಿಕೆಯಾಗುತ್ತಿದ್ದಂತೆಯೇ ಕೆಂಪು ಸುಂದರಿಗೆ ಕಳ್ಳರ ಕಾಟ ಶುರುವಾಗಿದೆ. ರಸ್ತೆ ಬದಿಯಲ್ಲಿರುವ ಟೆಮೆಟೊವನ್ನು ದುಷ್ಕರ್ಮಿಗಳು ಕದ್ದುಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಟೆಮೆಟೊ ಬೆಳೆಗೆ ಸೂಕ್ತ ಬಂದೋಬಸ್ತ್ ಒದಗಿಸಲಾಗುತ್ತಿದೆ. ಅದರಂತೆ ಚಾಮರಾಜನಗರದಲ್ಲಿ ಓರ್ವ ರೈತ ಬರೋಬ್ಬರಿ 12 ಎಕರೆ ಟೆಮೆಟೊ ಬೆಳೆದಿದ್ದು, ಇದೀಗ […]
ಚಾಮರಾಜನಗರ, ಆಗಸ್ಟ್ 07: ಸೂಕ್ತ ಬೆಲೆ ಇಲ್ಲದೇ ರಸ್ತೆ ಬದಿಗೆ ಎಸೆಯಲ್ಪಡುತ್ತಿದ್ದ ಕೆಂಪು ಸುಂದರಿ ಟೊಮೆಟೊಗೆ ಕಳೆದ ಒಂದು ತಿಂಗಳಿನಿಂದ ಭಾರೀ ಡಿಮ್ಯಾಂಡ್ ಬಂದಿದೆ. ಟೆಮೆಟೊ ದರ ಗಗನಕ್ಕೇರಿದ್ದು, ರೈತರ ಫುಲ್ ಖುಷ್ ಆಗಿದ್ದಾರೆ. ಟೆಮೆಟೊ ಬೆಲೆ ಏರಿಕೆಯಾಗುತ್ತಿದ್ದಂತೆಯೇ ಕೆಂಪು ಸುಂದರಿಗೆ ಕಳ್ಳರ ಕಾಟ ಶುರುವಾಗಿದೆ. ರಸ್ತೆ ಬದಿಯಲ್ಲಿರುವ ಟೆಮೆಟೊವನ್ನು ದುಷ್ಕರ್ಮಿಗಳು ಕದ್ದುಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಟೆಮೆಟೊ ಬೆಳೆಗೆ ಸೂಕ್ತ ಬಂದೋಬಸ್ತ್ ಒದಗಿಸಲಾಗುತ್ತಿದೆ. ಅದರಂತೆ ಚಾಮರಾಜನಗರದಲ್ಲಿ ಓರ್ವ ರೈತ ಬರೋಬ್ಬರಿ 12 ಎಕರೆ ಟೆಮೆಟೊ ಬೆಳೆದಿದ್ದು, ಇದೀಗ ಆತನಿಗೆ ಕಳ್ಳರ ಭೀತಿ ಶುರುವಾಗಿದೆ. ಈ ಹಿನ್ನಲೆಯಲ್ಲಿ ಜಮೀನಿನ ಸುತ್ತ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಕೃಷ್ಣಶೆಟ್ಟಿ ಅವರ ಟೆಮೆಟೊ ತೋಟಕ್ಕೆ ಚಾಮರಾಜನಗರ ಪೊಲೀಸರು ಗಸ್ತು ಹೆಚ್ಚಿಸಿದ್ದಾರೆ. ಇದರಿಂದ ಕೃಷ್ಣಶೆಟ್ಟಿ ಅವರ ಪುತ್ರ, ಯುವ ರೈತ ಫುಲ್ ಖುಷ್ ಆಗಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published on: Aug 07, 2023 10:09 AM
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ್ಯಾಪಿಡೋ ಆ್ಯಪ್ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
