AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಬಳಿ ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ, ಬಾಳೆ ಬೆಳೆ ಹಾನಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಆಗ್ರಹ

ಮೈಸೂರು ಬಳಿ ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ, ಬಾಳೆ ಬೆಳೆ ಹಾನಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಆಗ್ರಹ

ಅರುಣ್​ ಕುಮಾರ್​ ಬೆಳ್ಳಿ
|

Updated on: May 16, 2024 | 10:14 AM

ಧರಣಿ ನಡೆಸುತ್ತಿರುವ ರೈತರ ಮತ್ತೊಂದು ಅಸಮಾಧಾನವೆಂದರೆ, ರಾಜ್ಯ ಸರ್ಕಾರ ಇದುವರೆಗೆ ಬರ ಪರಿಹಾರ ಧನ ನೀಡಿಲ್ಲ. ಹಾಗಾಗೇ ಅವರು ಬರಪರಿಹಾರ ನೀಡದ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆಯೇ ಸಿದ್ದರಾಮಯ್ಯ ಸರ್ಕಾರ ಬರ ಪರಿಹಾರ ವಿತರಿಸಲಾಗಿದೆ ಎಂದು ಹೇಳಿತ್ತು.

ಮೈಸೂರು: ಮಳೆ ಬಾರದಿದ್ದರೂ ರೈತನಿಗೆ ಕಷ್ಟ ಬಂದರೂ ತಾಪತ್ರಯ ತಪ್ಪಿದ್ದಲ್ಲ. ಕಳೆದ 8-10 ದಿನಗಳಿಂದ ಮೈಸೂರು (Mysuru) ಮತ್ತು ಚಾಮರಾಜನಗರ (Chamarajanagar) ಜಿಲ್ಲೆಗಳಲ್ಲಿ ಬಿರುಗಾಳಿ ಮಳೆಯಿಂದಾಗಿ ಬಾಳೆ ಬೆಳೆ ನಾಶವಾಗಿದೆ. ಇದೇ ಹಿನ್ನೆಲೆಯಲ್ಲಿ ನಷ್ಟಕ್ಕೊಳಗಾಗಿರುವ ರೈತರಿಗೆ ವಿಶೇಷ ಪ್ಯಾಕೇಜ್ (special package) ನೀಡಬೇಕೆಂದು ಜಿಲ್ಲೆಗಳ ಬಾಳೆ ಬೆಳೆಗಾರರು ಮೈಸೂರಿನ ದೇವೀರಮ್ಮನಹಳ್ಳಿ ಗೇಟ್ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ರೈತರು ಹೇಳುವ ಪ್ರಕಾರ ಜಿಲ್ಲೆಗಳ ಸುಮಾರು 2 ಸಾವಿರ ಎಕರೆ ಜಮೀನಲ್ಲಿ ಬಾಳೆ ಬೆಳೆ ನಾಶವಾಗಿದೆ. ಧರಣಿ ನಡೆಸುತ್ತಿರುವ ರೈತರ ಮತ್ತೊಂದು ಅಸಮಾಧಾನವೆಂದರೆ, ರಾಜ್ಯ ಸರ್ಕಾರ ಇದುವರೆಗೆ ಬರ ಪರಿಹಾರ ಧನ ನೀಡಿಲ್ಲ. ಹಾಗಾಗೇ ಅವರು ಬರಪರಿಹಾರ ನೀಡದ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆಯೇ ಸಿದ್ದರಾಮಯ್ಯ ಸರ್ಕಾರ ಬರ ಪರಿಹಾರ ವಿತರಿಸಲಾಗಿದೆ ಎಂದು ಹೇಳಿತ್ತು. ರೂ. 645 ಕೋಟಿ ಹಣವನ್ನು ಎಲ್ಲ ಜಿಲ್ಲೆಗಳಿಗೆ ಹಂಚಲಾಗಿದೆ ಮತ್ತು ರೈತರಿಗೆ ತಲಾ ರೂ. 2,000ಯಂತೆ ನೀಡಲಾಗಿದೆ ಎಂದು ಸರ್ಕಾರ ಹೇಳಿತ್ತು. ರೈತರ ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಹಾ ಮಳೆಯಿಂದ ಬೆಳೆ ಹಾನಿ: ತುರ್ತಾಗಿ ವಿಶೇಷ ಪ್ಯಾಕೇಜ್ ಘೋಷಿಸಲು ಸಿದ್ದರಾಮಯ್ಯ ಆಗ್ರಹ