ವರ್ತೂರು ಸಂತೋಷ್ ತಾನು ಹಳ್ಳಿಕಾರ್ ಒಡೆಯ ಅಂದಿದಕ್ಕೆ ಹಳ್ಳಿಕಾರ್ ತಳಿ ಹೊಂದಿರುವ ಇತರ ರೈತರು ವ್ಯಗ್ರ, ಕಾನೂನು ಸಮರಕ್ಕೆ ಸಿದ್ಧತೆ!
ಸಂತೋಷ್ ಹೇಳಿಕೆಯಿಂದಾಗಿ ಹಳ್ಳಿಕಾರ್ ತಳಿ ಮತ್ತು ಅವುಗಳನ್ನು ಸಾಕುತ್ತಿರುವ ಅನೇಕ ರೈತರ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಮಂಡ್ಯದಲ್ಲಿ ಹಳ್ಳಿಕಾರ್ ಎತ್ತುಗಳನ್ನು ಹೊಂದಿರುವ ರೈತರೊಬ್ಬರು ಟಿವಿ9ಗೆ ತಿಳಿಸಿದ್ದಾರೆ.
ಮಂಡ್ಯ: ಪ್ರಸ್ತುತವಾಗಿ ರಾಜ್ಯದ ದೊಡ್ಡ ಸೆಲಿಬ್ರಿಟಿ ಅಂದರೆ ವರ್ತೂರು ಸಂತೋಷ್ (Varhuru Santosh) ಇರಬಹುದು ಮಾರಾಯ್ರೇ. ಯಾಕಿದನ್ನು ಹೇಳ್ತಿದ್ದೀವಿ ಅಂತ ನಿಮಗೂ ಗೊತ್ತಿದೆ. ಬಿಗ್ ಬಾಸ್ ಕನ್ನಡ (Bigg Boss Kannada) ಕಾರ್ಯಕ್ರಮದಲ್ಲಿ ಸ್ಪರ್ಧಿ, ಹುಲಿಯುಗುರು ಪೆಂಡೆಂಟ್, ಜೈಲು, ಅಲ್ಲಿಂದ ಕಾರ್ಯಕ್ರಮಕ್ಕೆ ವಾಪಸ್ಸು ಬಂದು ಮನೆಗೆ ಹೋಗ್ತೀನಿ ಅಂತ ಅತ್ತಿದ್ದು, ಅವರ ಮದುವೆ ವಿಡಿಯೋ ಬಿಡುಗಡೆಯಾಗಿದ್ದು, ಸಂತೋಷ್ ಬೀಗರು ಅಂತ ಹೇಳಿಕೊಂಡವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಗಳು ಮತ್ತು ಅವರು ಹಳ್ಳಿಕಾರ್ ಹೋರಿಗಳ (Hallikar Bulls) ಒಡೆಯ ಅಂತ ಹೇಳಿಕೊಂಡಿದ್ದು-ಹೀಗೆ ಅವರು ಕಳೆದ ನಾಲ್ಕು ತಿಂಗಳುಗಳಿಂದ ಸುದ್ದಿಯಲ್ಲಿದ್ದಾರೆ. ಸಂತೋಷ್ ಹಳ್ಳಿಕಾರ್ ಒಡೆಯ ಅಂತ ಹೇಳಿಕೊಂಡಿದ್ದು ಆ ತಳಿ ಹೋರಿಗಳನ್ನು ಹೊಂದಿರುವ ಬೇರೆ ರೈತರಿಗೆ ಕೋಪ ತರಿಸಿದೆ. ಸಂತೋಷ್ ಹೇಳಿಕೆಯಿಂದಾಗಿ ಹಳ್ಳಿಕಾರ್ ತಳಿ ಮತ್ತು ಅವುಗಳನ್ನು ಸಾಕುತ್ತಿರುವ ಅನೇಕ ರೈತರ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಮಂಡ್ಯದಲ್ಲಿ ಹಳ್ಳಿಕಾರ್ ಎತ್ತುಗಳನ್ನು ಹೊಂದಿರುವ ರೈತರೊಬ್ಬರು ಟಿವಿ9ಗೆ ತಿಳಿಸಿದ್ದಾರೆ. ಹೋರಿಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿ ನಿಲುವು ಬದಲಾಗಲಿ ಅಂತ ಕಾರ್ಯಕ್ರಮವೊಂದನ್ನು ಮಾಡಿದರೂ ಅವರಲ್ಲಿ ಬದಲಾವಣೆ ಉಂಟಾಗಿಲ್ಲ, ಹಾಗಾಗಿ ತಾವೆಲ್ಲ ಕಾನೂನು ಸಮರಕ್ಕೆ ಸಿದ್ಧರಾಗಿದ್ದೇವೆ ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ