ಕೆರೆ ತುಂಬಿಸುವ ಯೋಜನೆಗೆ ಚಾಲನೆ, ನೀರು ಕಂಡು ಕುಣಿದು ಸಂಭ್ರಮಿಸಿದ ಗ್ರಾಮಸ್ಥರು!
ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಗೊಲ್ಲರಹಟ್ಟಿ ಕೆರೆ, ಭರಮಸಮುದ್ರ ಕೆರೆ, ಸಿದ್ದಮ್ಮನಹಳ್ಳಿ ಕೆರೆ ಹಾಗೂ ಕಸುವಿನಹಳ್ಳಿ ಕೆರೆಗಳಿಗೆ ತುಂಗಭದ್ರ ನದಿನೀರು ಹರಿದುಬಂದಿದೆ. ಕೊರತೆ ಮಳೆ ಮತ್ತು ಬೇಸಾಯಕ್ಕೆ ನೀರಿಲ್ಲದೆ ಸಂಕಟ ಅನುಭವಿಸುತ್ತಿದ್ದ ರೈತಾಪಿ ಸಮುದಾಯ ಇನ್ನು ಮುಂದೆ ನಿರಾಳವಾಗಿ ಕೃಷಿ ಚಟುವಟಿಕೆ ನಡೆಸಲಿದ್ದಾರೆ.
ದಾವಣಗೆರೆ: ತುಂಗಭದ್ರ ನದಿಯಿಂದ ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದ 57 ಕೆರೆಗಳಿಗೆ ನೀರು ತುಂಬಿಸೋದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು. ಈ ಯೋಜನೆಗೆ ಚಾಲನೆ ದೊರೆತಿದ್ದು ಗ್ರಾಮವೊಂದಕ್ಕೆ ನೀರು ಹರಿದು ಬಂದಿರುವುದನ್ನು ಅಲ್ಲಿನ ನಿವಾಸಿಗಳು ಸ್ವಾಗತಿದ್ದು ಹೀಗೆ. ಗ್ರಾಮದ ಒಬ್ಬ ಹಿರಿಯ ನಾಗರಿಕ ತುಂಗಭದ್ರ ನದಿ ನೀರನ್ನು ಕಂಡು ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಐದು ದಶಕಗಳ ಹೋರಾಟದ ಫಲವಾಗಿ ಕೆರೆಗೆ ಬಂತು ತುಂಗಭದ್ರಾ ನದಿ ನೀರು