ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸಚಿವ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ

ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸಚಿವ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
|

Updated on: Oct 10, 2024 | 2:05 PM

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ತುಮಕೂರಿಗೆ ಬಂದಿರುವ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿ ಜತೆ ಏನೇನು ಚರ್ಚೆ ನಡೆಯಿತು? ಮೋದಿ ಏನು ಸಲಹೆ ಸೂಚನೆ ನೀಡಿದರು ಎಂಬ ಮಾಹಿತಿಯನ್ನು ಸೋಮಣ್ಣ ನೀಡಿದ್ದಾರೆ. ವಿಡಿಯೋ ಇಲ್ಲಿದೆ.

ತುಮಕೂರು, ಅಕ್ಟೋಬರ್ 10: ರಾಜ್ಯದ ರೈಲ್ವೆ ಯೋಜನೆಗಳಿಗೆ ಕೇಂದ್ರದಿಂದ 43 ಸಾವಿರ ಕೋಟಿ ರೂಪಾಯಿ ಹಣ ನೀಡಿದ್ದಾರೆ ಎಂದು ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಮಾಹಿತಿ ನೀಡಿದರು. ಪ್ರಧಾನಿ ಭೇಟಿ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಧಾನಿ ಮೋದಿ ಯಾರನ್ನೂ ದ್ವೇಷ ಮಾಡಿದವರಲ್ಲ, ಗದ್ದಲ ಮಾಡಿದವರಲ್ಲ. ನಮಗೆ ಒಂದಷ್ಟು ಸಲಹೆ ಸೂಚನೆ ನೀಡಿದ್ದಾರೆ ಎಂದರು.

1996ರಿಂದಲೂ ರೈಲ್ವೆ ಇಲಾಖೆಯ ಕೆಲ ಯೋಜನೆಗಳು ಹಾಗೇ ಇದ್ದವು. ಆ ಯೋಜನೆಗಳು ನಮ್ಮ ಅವಧಿಯದ್ದು ಅಲ್ಲ ಎಂದು ಮೋದಿ ಹೇಳಿಲ್ಲ. ಹಾಗೆ ಹೇಳದೆ 43 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ಸೋಮಣ್ಣ ಹೇಳಿದರು.

ಒಂದು ದೇಶ ಒಂದು ಚುನಾವಣೆ ವರದಿ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದಿನ ಸಂಸತ್ ಅಧಿವೇಶನದಲ್ಲಿ ವರದಿ ಮಂಡನೆಯಾಗಲಿದೆ. ಒಂದು ದೇಶ ಒಂದು ಚುನಾವಣೆ ವರದಿಯಿಂದ ಅನುಕೂಲ ಜಾಸ್ತಿ ಇದೆ. ಒಂದೇ ಬಾರಿ ಲೋಕಸಭೆ, ವಿಧಾನಸಭೆ ಚುನಾವಣೆ ನಡೆದರೆ ಅನುಕೂಲವಾಗಲಿದೆ. ಸಮಯ, ಖರ್ಚು ಎಲ್ಲವೂ ಉಳಿಯತಾಯವಾಗಲಿದೆ. ಮೂರು ತಿಂಗಳು, ಆರು ತಿಂಗಳು, 2 ವರ್ಷಕ್ಕೊಮ್ಮೆ ಚುನಾವಣೆಯಾದರೆ ದೇಶದ ಸಂಪತ್ತು ಅನಗತ್ಯವಾಗಿ ಪೋಲು ಎಂದು ಸೋಮಣ್ಣ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us