ವೇದಿಕೆ ಮೇಲೆಯೇ ಧನ್ವೀರ್ಗೆ ಪ್ರಪೋಸ್; ‘ಇವರೇ ನನ್ನ ಫಸ್ಟ್ ಕ್ರಶ್’ ಎಂದ ಯುವತಿ
‘ಬೈ ಟೂ ಲವ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಹೀರೋ ಧನ್ವೀರ್ ಅವರು ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ನಟ ಧನ್ವೀರ್ (Dhanveer) ಅವರು ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ಅಭಿನಯಿಸಿರುವ ‘ಬೈ ಟೂ ಲವ್’ (Bytwo Love Movie) ಸಿನಿಮಾ ಫೆ.18ರಂದು ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಶ್ರೀಲೀಲಾ ಅಭಿನಯಿಸಿದ್ದಾರೆ. ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಹಗಲಿರುಳು ಶ್ರಮಿಸುತ್ತಿದೆ. ಅಭಿಮಾನಿಗಳ ಸಮ್ಮುಖದಲ್ಲಿಯೂ ಕಾರ್ಯಕ್ರಮ ಮಾಡಲಾಗಿದೆ. ಈ ವೇಳೆ ಯುವತಿಯೊಬ್ಬರು ಧನ್ವೀರ್ಗೆ ಪ್ರಪೋಸ್ ಮಾಡಿದ್ದಾರೆ. ಸಿನಿಮಾ ಬಗ್ಗೆ ವೇದಿಕೆ ಮೇಲೆ ಮಾತನಾಡುತ್ತಿದ್ದ ಅವರು, ಧನ್ವೀರ್ ಮೇಲೆ ತಮಗಿರುವ ಭಾವನೆ ಎಂಥದ್ದು ಎಂಬುದನ್ನು ವ್ಯಕ್ತಪಡಿಸಿದರು. ಹಾಸ್ಯ ನಟರಾದ ಶಿವರಾಜ್ ಕೆ.ಆರ್. ಪೇಟೆ ಮತ್ತು ಧರ್ಮಣ್ಣ ಕೂಡ ಅದೇ ವೇದಿಕೆಯಲ್ಲಿದ್ದರು. ‘ಧನ್ವೀರ್ ರೀತಿ ಹುಡುಗ ಸಿಕ್ಕರೆ ಖಂಡಿತ ಲವ್ ಮಾಡ್ತೀನಿ’ ಎಂದು ಆ ಯುವತಿ ಹೇಳಿದರು. ‘ಇಷ್ಟೆಲ್ಲ ಹೇಳಿದ ಮೇಲೆ ಇನ್ನೇನು ಬಾಕಿ? ಧನ್ವೀರ್ ಇಲ್ಲೇ ಇದ್ದಾರೆ ಹೇಳಿಬಿಡಿ’ ಎಂದು ಆಕೆಗೆ ಧರ್ಮಣ್ಣ ಪ್ರೋತ್ಸಾಹ ನೀಡಿದರು. ಕೂಡಲೇ ಮೈಕ್ ಹಿಡಿದುಕೊಂಡ ಯುವತಿ ‘ಐ ಲವ್ ಯೂ ಧನ್ವೀರ್’ ಎಂದು ಪ್ರಪೋಸ್ (Love Propose) ಮಾಡಿದರು. ‘ನನ್ನ ಫಸ್ಟ್ ಕ್ರಶ್ ಅವರೇ’ ಎಂದು ಕೂಡ ಹೇಳಿಕೊಂಡರು. ‘ಬೈ ಟೂ ಲವ್’ ಚಿತ್ರಕ್ಕೆ ಹರಿ ಸಂತೋಷ್ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:
ಧನ್ವೀರ್-ಶ್ರೀಲೀಲಾ ಚಿತ್ರಕ್ಕೆ ‘ಬೈ ಟೂ ಲವ್’ ಅಂತ ಟೈಟಲ್ ಇಟ್ಟಿದ್ದು ಯಾಕೆ? ಡೈರೆಕ್ಟರ್ ನೀಡಿದ ಉತ್ತರ ಇಲ್ಲಿದೆ..
ಮಾನ್ವಿತಾ-ಧೀರೇನ್ ಲಿಪ್ ಲಾಕ್; ಪ್ರೇಮಿಗಳ ದಿನಕ್ಕೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡ ಜೋಡಿ