ಹಬ್ಬದ ಸಂಭ್ರಮ, ಹೂ ಮಳೆ; ಒಂದೇ ಶಾಲೆಯಲ್ಲಿ 23 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕನಿಗೆ ವಿಶೇಷ ಬೀಳ್ಕೊಡಿಗೆ

ಹಬ್ಬದ ಸಂಭ್ರಮ, ಹೂ ಮಳೆ; ಒಂದೇ ಶಾಲೆಯಲ್ಲಿ 23 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕನಿಗೆ ವಿಶೇಷ ಬೀಳ್ಕೊಡಿಗೆ

TV9 Web
| Updated By: ಆಯೇಷಾ ಬಾನು

Updated on:Jul 04, 2023 | 1:30 PM

ತರೀಕೆರೆ ತಾಲೂಕಿನ ಹಳಿಯೂರು ಸರ್ಕಾರಿ ಶಾಲೆಯಲ್ಲಿ ಬರೋಬ್ಬರಿ 23 ವರ್ಷ ಸೇವೆ ಸಲ್ಲಿಸಿದ ಲಕ್ಷ್ಮಣ್ ಎನ್.ವಿ. ಅವರು ನಿವೃತ್ತಿ ಹೊಂದಿದ್ದಾರೆ. ಹೀಗಾಗಿ ಶಾಲೆ ಮಕ್ಕಳು ಶಿಕ್ಷಕ ನಡೆಯುವ ದಾರಿಯಲ್ಲಿ ಹೂ ಚೆಲ್ಲಿ ಸ್ವಾಗತ ಕೋರಿದ್ರೆ, ಹಳ್ಳಿಗರಿಂದ ಊರಿನ ತುಂಬಾ ಎತ್ತಿಗಾಡಿಯಲ್ಲಿ ಮೆರವಣಿಗೆ ಮಾಡಲಾಗಿದೆ.

ಚಿಕ್ಕಮಗಳೂರು: 23 ವರ್ಷ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕನನ್ನು ವಿದ್ಯಾರ್ಥಿಗಳು ಹೂಮಳೆ ಸುರಿದು ಸ್ವಾಗತ ಮಾಡಿ ಮೆರವಣಿಗೆ ಮಾಡಿ ಹಬ್ಬದ ರೀತಿ ಸಂಭ್ರಮಿಸಿ ಸಡಗರದಿಂದ ಬೀಳ್ಕೊಡುಗೆ ಕೊಟ್ಟಿದ್ದಾರೆ. ತರೀಕೆರೆ ತಾಲೂಕಿನ ಹಳಿಯೂರು ಸರ್ಕಾರಿ ಶಾಲೆಯಲ್ಲಿ ಬರೋಬ್ಬರಿ 23 ವರ್ಷ ಸೇವೆ ಸಲ್ಲಿಸಿದ ಲಕ್ಷ್ಮಣ್ ಎನ್.ವಿ. ಅವರು ನಿವೃತ್ತಿ ಹೊಂದಿದ್ದಾರೆ. ಹೀಗಾಗಿ ಶಾಲೆ ಮಕ್ಕಳು ಶಿಕ್ಷಕ ನಡೆಯುವ ದಾರಿಯಲ್ಲಿ ಹೂ ಚೆಲ್ಲಿ ಸ್ವಾಗತ ಕೋರಿದ್ರೆ, ಹಳ್ಳಿಗರಿಂದ ಊರಿನ ತುಂಬಾ ಎತ್ತಿಗಾಡಿಯಲ್ಲಿ ಮೆರವಣಿಗೆ ಮಾಡಲಾಗಿದೆ. ಪುಟ್ಟ-ಪುಟ್ಟ ಮಕ್ಕಳೇ ವಾದ್ಯಗಳನ್ನ ಬಡಿದುಕೊಂಡು ಶಿಕ್ಷಕನಿಗೆ ಬೀಳ್ಕೊಡುಗೆ ಕೊಟ್ಟಿದ್ದಾರೆ. ವೀರಗಾಸೆ ಮೂಲಕ ಶಿಕ್ಷಕನನ್ನ ಹೆಣ್ಣುಮಕ್ಕಳು ಶಾಲೆಗೆ ಕರೆತಂದ್ರು. ಇಡೀ ಊರಿನ ತುಂಬಾ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

Published on: Jul 04, 2023 01:27 PM