ಕೊರೊನಾ ಹಾವಳಿಯಿಂದ ಕುಂದಿದ ಹಬ್ಬದ ಖರೀದಿ: ಸುಮಾರು 400 ಕೋಟಿ ರೂ. ವಹಿವಾಟು ಖೋತಾ?

|

Updated on: Aug 22, 2020 | 6:32 PM

[lazy-load-videos-and-sticky-control id=”-TFF76-edNc”] ಬೆಂಗಳೂರು:ಕೊರೊನಾ ಮಹಾಮಾರಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಿದೆ. ಈಗ ಅದರ ಹೊಡೆತ ಗಣೇಶೋತ್ಸವಕ್ಕೂ ತಗಲಿದ್ದು, ರಾಜ್ಯಾದ್ಯಂತ ಸುಮಾರು 400 ಕೋಟಿ ರೂಪಾಯಿಯಷ್ಟು ವಹಿವಾಟು ಖೋತಾ ಹೊಡೆದಿದೆ. ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಸೇರುವ ಆಚರಣೆಗಳಿಗೆ ಬ್ರೇಕ್ ಹಾಕಲಾಗಿದೆ.ಇದರ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಬೃಹತ್ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿಲ್ಲ. ಹೀಗಾಗಿ, ಬೃಹತ್ ಗಣೇಶ ಮೂರ್ತಿಗಳು ವ್ಯಾಪಾರವಾಗದೆ, ಮೂರ್ತಿ ತಯಾರಕರಿಗೆ ಭಾರಿ ನಷ್ಟ ಉಂಟಾಗಿದೆ. ಇದರ […]

ಕೊರೊನಾ ಹಾವಳಿಯಿಂದ ಕುಂದಿದ ಹಬ್ಬದ ಖರೀದಿ: ಸುಮಾರು 400 ಕೋಟಿ ರೂ. ವಹಿವಾಟು ಖೋತಾ?
Follow us on

[lazy-load-videos-and-sticky-control id=”-TFF76-edNc”]

ಬೆಂಗಳೂರು:ಕೊರೊನಾ ಮಹಾಮಾರಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಿದೆ. ಈಗ ಅದರ ಹೊಡೆತ ಗಣೇಶೋತ್ಸವಕ್ಕೂ ತಗಲಿದ್ದು, ರಾಜ್ಯಾದ್ಯಂತ ಸುಮಾರು 400 ಕೋಟಿ ರೂಪಾಯಿಯಷ್ಟು ವಹಿವಾಟು ಖೋತಾ ಹೊಡೆದಿದೆ.

ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಸೇರುವ ಆಚರಣೆಗಳಿಗೆ ಬ್ರೇಕ್ ಹಾಕಲಾಗಿದೆ.ಇದರ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಬೃಹತ್ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿಲ್ಲ. ಹೀಗಾಗಿ, ಬೃಹತ್ ಗಣೇಶ ಮೂರ್ತಿಗಳು ವ್ಯಾಪಾರವಾಗದೆ, ಮೂರ್ತಿ ತಯಾರಕರಿಗೆ ಭಾರಿ ನಷ್ಟ ಉಂಟಾಗಿದೆ.

ಇದರ ಜೊತೆಗೆ ಹೂವು, ಹಣ್ಣು, ಬ್ಯಾಂಡ್ , ಸೌಂಡ್ ಇತ್ಯಾದಿ ವ್ಯವಹಾರಕ್ಕೆ ಕತ್ತರಿ ಬಿದ್ದಿದ್ದು, ಇದರಿಂದಾಗಿ ಸುಮಾರು 400 ಕೋಟಿಯಷ್ಟು ನಷ್ಟ ಉಂಟಾಗಿದೆ. ಗಣೇಶ ಉತ್ಸವದಂದು ಸುಮಾರು 300 ಕೋಟಿ ರೂಪಾಯಿ ಮೌಲ್ಯದ ಹೂವು, ಹಣ್ಣು ಮತ್ತು ಪೂಜಾ ಸಾಮಗ್ರಿಗಳ ವ್ಯಾಪಾರ ನಡೆಯುತ್ತಿತ್ತು. ಆದರೆ ಈ ಬಾರಿ ವ್ಯಾಪಾರ ಕಳೆಗುಂದಿದೆ.

Published On - 6:22 pm, Sat, 22 August 20