ರಾಹುಕಾಲದಲ್ಲಿ ಸೋಂಕಿತರ ಶವಸಂಸ್ಕಾರ ಮಾಡಬೇಡಿ -ಕುಟುಂಬಸ್ಥರ ಡಿಮ್ಯಾಂಡ್ ತಂದಿಟ್ಟ ಫಜೀತಿ
[lazy-load-videos-and-sticky-control id=”pJJwzDQ6zwo”] ಬೆಂಗಳೂರು: ಕಿಲ್ಲರ್ ಕೊರೊನಾ ಗುಪ್ತಗಾಮಿನಿಯಂತೆ ಕಣ್ಣಿಗೆ ಕಾಣದೆ ಹರಡುತ್ತಲೇ ಇದೆ. ಇನ್ನೂ ಇದರಿಂದ ಮುಕ್ತಿ ಸಿಕ್ಕಿಲ್ಲ. ಅದರಲ್ಲೂ ಕೊರೊನಾದಿಂದ ಮೃತಪಡುತ್ತಿರುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಹೀಗಾಗಿ ಮೃತರ ಅಂತ್ಯ ಸಂಸ್ಕಾರ ಮಾಡುವುದಕ್ಕೆ ಸರತಿ ಸಾಲಿನಲ್ಲಿ ಗಂಟೆ ಗಂಟೆಗಳ ಕಾಲ ಕಾಯ ಬೇಕಾಗಿದೆ. ಅದರಲ್ಲೂ ಮೃತ ಸೋಂಕಿತರ ಸಂಬಂಧಿಕರು ರಾಹುಕಾಲ ನೋಡಿ ಅಂತ್ಯಕ್ರಿಯೆ ನೆರವೇರಿಸುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣವಾಗಿದೆ. ರಾಹುಕಾಲದಲ್ಲಿ ಸೋಂಕಿತರ ಮೃತದೇಹಗಳ ಶವಸಂಸ್ಕಾರಕ್ಕೆ ಕುಟುಂಬಸ್ಥರು ಒಪ್ಪುತ್ತಿಲ್ಲ. ಜೊತೆಗೆ, ಮೃತ ಸೋಂಕಿತರ ಮುಖ ತೋರಿಸುವಂತೆ ಹಾಗೂ […]
[lazy-load-videos-and-sticky-control id=”pJJwzDQ6zwo”]
ಬೆಂಗಳೂರು: ಕಿಲ್ಲರ್ ಕೊರೊನಾ ಗುಪ್ತಗಾಮಿನಿಯಂತೆ ಕಣ್ಣಿಗೆ ಕಾಣದೆ ಹರಡುತ್ತಲೇ ಇದೆ. ಇನ್ನೂ ಇದರಿಂದ ಮುಕ್ತಿ ಸಿಕ್ಕಿಲ್ಲ. ಅದರಲ್ಲೂ ಕೊರೊನಾದಿಂದ ಮೃತಪಡುತ್ತಿರುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಹೀಗಾಗಿ ಮೃತರ ಅಂತ್ಯ ಸಂಸ್ಕಾರ ಮಾಡುವುದಕ್ಕೆ ಸರತಿ ಸಾಲಿನಲ್ಲಿ ಗಂಟೆ ಗಂಟೆಗಳ ಕಾಲ ಕಾಯ ಬೇಕಾಗಿದೆ. ಅದರಲ್ಲೂ ಮೃತ ಸೋಂಕಿತರ ಸಂಬಂಧಿಕರು ರಾಹುಕಾಲ ನೋಡಿ ಅಂತ್ಯಕ್ರಿಯೆ ನೆರವೇರಿಸುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣವಾಗಿದೆ.
ರಾಹುಕಾಲದಲ್ಲಿ ಸೋಂಕಿತರ ಮೃತದೇಹಗಳ ಶವಸಂಸ್ಕಾರಕ್ಕೆ ಕುಟುಂಬಸ್ಥರು ಒಪ್ಪುತ್ತಿಲ್ಲ. ಜೊತೆಗೆ, ಮೃತ ಸೋಂಕಿತರ ಮುಖ ತೋರಿಸುವಂತೆ ಹಾಗೂ ಪೂಜೆ ಮಾಡಲು ಅವಕಾಶ ನೀಡುವಂತೆ ಕುಟುಂಬಸ್ಥರು ಮತ್ತು ಸಂಬಂಧಿಕರು ಒತ್ತಾಯ ಮಾಡುತ್ತಿದ್ದಾರಂತೆ.
ಈ ಹಿನ್ನೆಲೆಯಲ್ಲಿ ವಿದ್ಯುತ್ ಚಿತಾಗಾರಗಳ ಬಳಿ ಉಳಿದ ಮೃತರ ಕುಟುಂಬಸ್ಥರು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಉಂಟಾಗಿದೆ. ಇಂತಹದೊಂದು ಸಮಸ್ಯೆ ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ಎದುರಾಗಿತ್ತು. ಹೀಗಾಗಿ ವಿದ್ಯುತ್ ಚಿತಾಗಾರಗಳಿಗೆ BBMP ಆಯುಕ್ತ ಮಂಜುನಾಥ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಈ ವೇಳೆ ಇಂತಹ ಸಮಸ್ಯೆಗಳ ಬಗ್ಗೆ ಚಿತಾಗಾರದ ಸಿಬ್ಬಂದಿ ಆಯುಕ್ತರ ಬಳಿ ಹಂಚಿಕೊಂಡಿದ್ದಾರೆ. ಶವಸಂಸ್ಕಾರಕ್ಕೆ ರಾಹುಕಾಲ ನೋಡುವವರನ್ನು ಪಕ್ಕದಲ್ಲಿ ನಿಲ್ಲಿಸಿ ಉಳಿದ ಮೃತದೇಹಗಳ ಅಂತ್ಯಕ್ರಿಯೆ ಮಾಡಿ. ಸರತಿ ಸಾಲಲ್ಲಿ ನಿಲ್ಲುವ ಸ್ಥಿತಿ ನಿರ್ಮಿಸಬೇಡಿ ಎಂದು ಆಯುಕ್ತರು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
Published On - 11:44 am, Sun, 23 August 20