ಸ್ಪಂದನ ಸಾವು; ಬುಧವಾರ ಮಧ್ಯಾಹ್ನ ಬೆಂಗಳೂರಿನ ಹರಿಶ್ಚಂದ್ರಘಾಟ್​ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು: ಬಿಕೆ ಹರಿಪ್ರಸಾದ್

|

Updated on: Aug 08, 2023 | 11:44 AM

ಜನ ಅಂತಿಮ ನಮನ ಸಲ್ಲಿಸಲು ಮಧ್ಯರಾತ್ರಿಯಿಂದ ನಾಳೆ ಮಧ್ಯಾಹ್ನದವರೆಗೆ ಸ್ಪಂದನ ದೇಹವನ್ನು ಬಿಕೆ ಶಿವರಾಂ ಅವರ ಮನೆ ಮುಂಭಾಗದಲ್ಲಿ ಇಡಲಾಗುವುದು ಅಂತ ಬಿಕೆ ಹರಿಪ್ರಸಾದ್ ಹೇಳಿದರು.

ಬೆಂಗಳೂರು: ಸೋಮವಾರ ಬೆಳಗಿನ ಜಾವ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ಮರಣವನ್ನಪ್ಪಿದ ಸ್ಪಂದನ ವಿಜಯರಾಘವೇಂದ್ರ (Spandana Vijay Raghavendra) ಅವರ ಪಾರ್ಥೀವ ಶರೀರ ಥಾಯ್ ವಿಮಾನವೊಂದರ ಮೂಲಕ ಇಂದು ರಾತ್ರಿ 11 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮತ್ತು ರಾತ್ರಿ 12.30ಕ್ಕೆ ಮನೆ ತಲುಪಲಿದೆ ಎಂದು ಮೃತರ ಚಿಕ್ಕಪ್ಪ ಬಿಕೆ ಹರಿಪ್ರಸಾದ್ (BK Hari Prasad) ಹೇಳಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಜನ ಅಂತಿಮ ನಮನ ಸಲ್ಲಿಸಲು ಮಧ್ಯರಾತ್ರಿಯಿಂದ ನಾಳೆ ಮಧ್ಯಾಹ್ನದವರೆಗೆ ಸ್ಪಂದನ ದೇಹವನ್ನು ಬಿಕೆ ಶಿವರಾಂ (BK Shivaram) ಅವರ ಮನೆ ಮುಂಭಾಗದಲ್ಲಿ ಇಡಲಾಗುವುದು ಮತ್ತು ಮಧ್ಯಾಹ್ನದ ಬಳಿಕ ಶ್ರೀರಾಂಪುರದಲ್ಲಿರುವ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ