ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್

Updated on: May 03, 2025 | 6:34 PM

ಗಾಯಕ‌ ಸೋನು ನಿಗಮ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಇದಕ್ಕೆ ಕಾರಣ ಆಗಿರೋದು ಅವರು ನೀಡಿದ್ದ ಹೇಳಿಕೆ. ‘ಕನ್ನಡ ಕನ್ನಡ.. ನೀವು ಹೀಗೆ ಹೇಳಿರೋದಕ್ಕೆ ಪಹಲ್ಗಾಮ್ ದಾಳಿ ಆಗಿದ್ದು ಎಂದು ಅವರು ಹೇಳಿಕೆ ನೀಡಿದ್ದಾರೆ. ಈಗ ಅವರ ವಿರುದ್ಧ ಕೇಸ್ ದಾಖಲಾಗಿದೆ.

ಗಾಯಕ‌ ಸೋನು ನಿಗಮ್ (Sonu Nigam) ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಕನ್ನಡದ ಬಗ್ಗೆ ಅವರು ನೀಡಿರೋ  ಹೇಳಿಕೆಯೇ ಇದಕ್ಕೆ ಕಾರಣ. ‘ಕನ್ನಡ ಕನ್ನಡ.. ನೀವು ಹೀಗೆ ಹೇಳಿರೋದಕ್ಕೆ ಪಹಲ್ಗಾಮ್ ದಾಳಿ ಆಗಿದ್ದು’ ಎಂದು ಸೋನು ನಿಗಮ್ ಹೇಳಿದ್ದರು. ಈಗ ಆವಲಹಳ್ಳಿ ಠಾಣೆಯಲ್ಲಿ ಸೋನು ನಿಗಮ್ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಕನ್ನಡಿಗರ ಬಾವನೆಗೆ ಘಾಸಿ ಉಂಟು ಮಾಡಿದ ಆರೋಪ ಅವರ ಮೇಲೆ ಇದೆ. ಧರ್ಮರಾಜ್ ಎಂಬುವರ ದೂರಿನ‌ ಮೆರೆಗೆ ಎಫ್​ಐಆರ್ ದಾಖಲಿಸಿಕೊಳ್ಳಲಾಗಿದೆ. ಇನ್ನು, ಸೋನು ನಿಗಮ್ ಅವರನ್ನು ಬ್ಯಾನ್ ಮಾಡಬೇಕು ಎಂದು ಫಿಲ್ಮ್ ಚೇಂಬರ್​ನಲ್ಲಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ  ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.