ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ಅಪಘಾತ ತಡವಾಗಿ ವರದಿಯಾಗಿದೆ
ಎ ಎನ್ ಐ ಸುದ್ದಿ ಸಂಸ್ಥೆಯ ವಶದಲ್ಲಿರುವ ವಿಡಿಯೋನಲ್ಲಿ ಗೋಚರವಾಗಿರುವ ಹಾಗೆ ಹಲವಾರು ಪ್ರಯಾಣಿಕ ವಿಮಾನಗಳು ಬೆಂಕಿ ಅಪಘಾತ ನಡೆದ ಸ್ಥಳಕ್ಕೆ ಹತ್ತಿರದಲ್ಲಿದ್ದವಾದರೂ ಯಾವುದೇ ಹಾನಿ ಸಂಭವಿಸಿಲ್ಲ.
Delhi: ವಿಮಾನ ನಿಲ್ದಾಣದಲ್ಲಿ (airport) ಅಗ್ನಿ ಅವಗಢಗಳು (fire mishap) ನಡೆಯುವುದು ಬಹಳ ಅಪರೂಪ ಮತ್ತು ಹಾಗೇನಾದರೂ ಸಂಭವಿಸಿದರೆ ಅದನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಶುಕ್ರವಾರ ಸಾಯಂಕಾಲ ಸುಮಾರು 5.30 ರ ಹೊತ್ತಿಗೆ ದೆಹಲಿಯ ಪಾಲಂ (Palam) ವಿಮಾನ ನಿಲ್ದಾಣದಲ್ಲಿ ಅಂಥದೊಂದು ದುರ್ಘಟನೆ ನಡೆದಿದ್ದು ಅದು ತಡವಾಗಿ ವರದಿಯಾಗಿದೆ. ಏರ್ ಪೋರ್ಟ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ ಶುಕ್ರವಾರ ಸಾಯಂಕಾಲ 5.25ಕ್ಕೆ ವಿಮಾನ ನಿಲ್ದಾಣದ ಸೆಲೆಬಿ ಎಕ್ಸ್ಪೋರ್ಟ್ ಬ್ಯಾರಿಯರ್ ನ ಕಾರ್ಗೋ ಮಾರ್ಗ 262 ಬಳಿ ಒಂದು ಪುಷ್ ಬ್ಯಾಕ್ ಟೋಯಿಂಗ್ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿ ಶಾಮಕ ದಳದವರನ್ನು ಅಲ್ಲಿಗೆ ಕರೆಸಲಾಯಿತು ಮತ್ತು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು.
‘ಫೈರ್ ಎಂಜಿನ್ ಕೂಡಲೇ ಸ್ಥಳಕ್ಕೆ ಧಾವಿಸಿತು ಮತ್ತು ಬೆಂಕಿ ಹಬ್ಬದಂತೆ ನಿಯಂತ್ರಿಸಿ 5.48ರ ಹೊತ್ತಿಗೆ ಬೆಂಕಿಯನ್ನು ಇಡಿಯಾಗಿ ಅರಿಸಿತು,’ ಎಂದು ಸ್ಥಳದಲ್ಲಿ ಹಾಜರಿದ್ದ ವಿಮಾನ ನಿಲ್ದಾಣ ಆಧಿಕಾರಿಗಳು ತಿಳಿಸಿದ್ದಾರೆ.
ಗಮನಿಸಬೇಕಾದ ಸಂಗತಿ ಏನೆಂದರೆ, ಟೋಯಿಂಗ್ ವ್ಯಾನ್ ಗೆ ಬೆಂಕಿ ಹೊತ್ತಿಕೊಂಡಾಗ ಲಗ್ಗೇಜ್ ಅಗುತ್ತಿದ್ದ ಹಲವಾರು ಪ್ರಯಾಣಿಕ ವಿಮಾನಗಳು ಅಲ್ಲಿದ್ದವು.
ಎ ಎನ್ ಐ ಸುದ್ದಿ ಸಂಸ್ಥೆಯ ವಶದಲ್ಲಿರುವ ವಿಡಿಯೋನಲ್ಲಿ ಗೋಚರವಾಗಿರುವ ಹಾಗೆ ಹಲವಾರು ಪ್ರಯಾಣಿಕ ವಿಮಾನಗಳು ಬೆಂಕಿ ಅಪಘಾತ ನಡೆದ ಸ್ಥಳಕ್ಕೆ ಹತ್ತಿರದಲ್ಲಿದ್ದವಾದರೂ ಯಾವುದೇ ಹಾನಿ ಸಂಭವಿಸಿಲ್ಲ.
ಕಾರ್ಗೋ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಮೂಲಕ ಅಗ್ನಿ ಅಪಘಾತ ಸಂಭವಿಸಿದ್ದಕ್ಕೆ ಕಾರಣವೇನೆಂದು ಪತ್ತೆ ಹಚ್ಚಲು ಆಂತರಿಕ ತನಿಖೆಯನ್ನು ಆದೇಶಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.