Women utilise provision: ಶಕ್ತಿ ಯೋಜನೆ ಜಾರಿ ಬಳಿಕ ಮೊದಲ ವೀಕೆಂಡ್, ಧರ್ಮಸ್ಥಳಕ್ಕೆ ಹೊರಟ ಮಹಿಳೆಯರ ಮೊಗದಲ್ಲಿ ಸಂತಸ!

Updated on: Jun 17, 2023 | 2:04 PM

ಒಬ್ಬ ಮಹಿಳೆ ಉಚಿತವಾಗಿ ಧರ್ಮಸ್ಥಳಕ್ಕೆ ಹೋಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿರುವರಾದರೂ ಸರ್ಕಾರಕ್ಕೆ ಹೊರೆ ಆಗಬಾರದು ಎನ್ನುವ ಕಾಳಜಿಯನ್ನೂ ತೋರುತ್ತಾರೆ!

ಬೆಂಗಳೂರು: ಶಕ್ತಿ ಯೋಜನೆ (Shakti scheme) ಜಾರಿಯಾದ ಬಳಿಕ ಬಂದಿರುವ ಮೊದಲ ವೀಕೆಂಡ್ ಇದಾಗಿದೆ ಮತ್ತು ನಗರದ ಅನೇಕ ಮಹಿಳೆಯರು ಶ್ರೀಕ್ಷೇತ್ರಗಳಾಗಿರುವ ಧರ್ಮಸ್ಥಳ (Dharmasthala), ಕುಕ್ಕೆ ಸುಬ್ರಮಣ್ಯ ಗಳಿಗೆ ಭೇಟಿ ನೀಡಿ ಸರ್ಕಾರ ನೀಡಿರುವ ಸೌಲಭ್ಯವನ್ನು ಸದುಪಯೋಪಡಿಸಿಕೊಳ್ಳುತ್ತಿದ್ದಾರೆ. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಕೆಂಪೇಗೌಡ ಬಸ್ ಟರ್ಮಿನಲ್ ನಿಂದ (Kempegowda bus terminal) ಧರ್ಮಸ್ಥಳಕ್ಕೆ ಹೊರಟು ನಿಂತ ಬಸ್ಸಲ್ಲಿರುವ ಪ್ರಯಾಣಿಕರು ಮತ್ತು ನಿರ್ವಾಹಕರ ಜೊತೆ ಮಾತಾಡಿದ್ದಾರೆ. ಬಸ್ ಭರ್ತಿಯಾಗಿರೋ ಕಾರಣಕ್ಕೆ ನಿರ್ವಾಹಕ ಬಹಳ ಸಂತೋಷದಲ್ಲಿದ್ದಾರೆ. ಅವರು ಹೇಳುವ ಪ್ರಕಾರ 50 ಸೀಟುಗಳ ಪೈಕಿ 35 ರಲ್ಲಿ ಮಹಿಳೆಯರು ಆಸೀನರಾಗಿದ್ದಾರೆ. ಒಬ್ಬ ಮಹಿಳೆ ಉಚಿತವಾಗಿ ಧರ್ಮಸ್ಥಳಕ್ಕೆ ಹೋಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿರುವರಾದರೂ ಸರ್ಕಾರಕ್ಕೆ ಹೊರೆ ಆಗಬಾರದು ಎನ್ನುವ ಕಾಳಜಿಯನ್ನೂ ತೋರುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More