Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿಯ ಮಲ್ಪೆ ಬಳಿ ಅರಬ್ಬೀ ಸಮುದ್ರದಲ್ಲಿ ಮಗುಚಿದ ಮೀನುಗಾರಿಕಾ ಬೋಟ್, 8 ಮೀನುಗಾರರ ರಕ್ಷಣೆ!

ಉಡುಪಿಯ ಮಲ್ಪೆ ಬಳಿ ಅರಬ್ಬೀ ಸಮುದ್ರದಲ್ಲಿ ಮಗುಚಿದ ಮೀನುಗಾರಿಕಾ ಬೋಟ್, 8 ಮೀನುಗಾರರ ರಕ್ಷಣೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 22, 2023 | 12:58 PM

ಬೋಟ್ ಸಮುದ್ರದ ಆಳಕ್ಕೆ ತೆರಳಿದ್ದಾಗ ಅದರ ತಳಭಾಗಕ್ಕೆ ಯಾವುದೋ ವಸ್ತು ತಗುಲಿದ ಕಾರಣ ಆ ಭಾಗದಲ್ಲಿ ಛೇದವುಂಟಾಗಿ ನಾವೆಯಲ್ಲಿ ನೀರು ತುಂಬಿಕೊಂಡಿದೆ. ಈ ಬೋಟ್ ಗೆ ಹತ್ತಿರದಲ್ಲೇ ಇದ್ದ ಮೂಕಾಂಬಿಕಾ ಅನುಗ್ರಹ ಹೆಸರಿನ ಮೀನುಗಾರಿಕಾ ಬೋಟ್ ನಲ್ಲಿದ್ದವರು ಮುಳುಗಿದ ಬೋಟ್ ನಲ್ಲಿದ್ದವರ ರಕ್ಷಣೆ ಧಾವಿಸಿ ಅವರನ್ನು ಕಾಪಾಡಿದ್ದಾರೆ.

ಉಡುಪಿ: ಮೀನುಗಾರಿಕೆಗೆ ಬಳಸುವ ನಾವೆಯೊಂದು ಅರಬ್ಬೀ ಸಮುದ್ರದಲ್ಲಿ (The Arabian Sea) ಹಂತಹಂತವಾಗಿ ಮುಳುಗುತ್ತಿರುವ ಭಯಾನಕ ದೃಶ್ಯ ಕೆಮೆರಾದಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಈ ಬೋಟ್ ನಲ್ಲಿ ಮೀನು ಹಿಡಿಯಲೆಂದು ಅರಬ್ಬೀ ಸಮುದ್ರದ ಆಳಕ್ಕೆ (deep waters) ತೆರಳಿದ್ದ ಎಲ್ಲ 8 ಮೀನುಗಾರರನ್ನು (fishermen) ರಕ್ಷಿಸಲಾಗಿದೆ. ಟಿವಿ9 ಕನ್ನಡ ವಾಹಿನಿಯ ಉಡುಪಿ ವರದಿಗಾರ ನೀಡಿರುವ ಮಾಹಿತಿಯ ಪ್ರಕಾರ ಉಡುಪಿಯ ಮಲ್ಪೆ (Malpe) ಬಳಿ ಅವಗಢ ಸಂಭವಿಸಿದ್ದು ಮುಳುಗಿದ ಬೋಟ್ ಉಡುಪಿ ತಾಲ್ಲೂಕಿನಲ್ಲಿರುವ ಕಡೆಕಾರಿನ ರಕ್ಷಾ ಅವರಿಗೆ ಸೇರಿದ್ದಂತೆ. ಬೋಟ್ ಸಮುದ್ರದ ಆಳಕ್ಕೆ ತೆರಳಿದ್ದಾಗ ಅದರ ತಳಭಾಗಕ್ಕೆ ಯಾವುದೋ ವಸ್ತು ತಗುಲಿದ ಕಾರಣ ಆ ಭಾಗದಲ್ಲಿ ಛೇದವುಂಟಾಗಿ ನಾವೆಯಲ್ಲಿ ನೀರು ತುಂಬಿಕೊಂಡಿದೆ. ಈ ಬೋಟ್ ಗೆ ಹತ್ತಿರದಲ್ಲೇ ಇದ್ದ ಮೂಕಾಂಬಿಕಾ ಅನುಗ್ರಹ ಹೆಸರಿನ ಮೀನುಗಾರಿಕಾ ಬೋಟ್ ನಲ್ಲಿದ್ದವರು ಮುಳುಗಿದ ಬೋಟ್ ನಲ್ಲಿದ್ದವರ ರಕ್ಷಣೆ ಧಾವಿಸಿ ಅವರನ್ನು ಕಾಪಾಡಿದ್ದಾರೆ. ಬೋಟ್ ಒಡತಿ ರಕ್ಷಾಗೆ ಸುಮಾರು ರೂ. 18 ಲಕ್ಷಗಳಷ್ಟು ನಷ್ಟವುಂಟಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ