Beeper Joy: ಚಂಡಮಾರುತ ಅಪ್ಪಳಿಸುವ ಮೊದಲೇ ಸಮುದ್ರದಲ್ಲಿ ಬುಡಮೇಲಾಯ್ತು ಮೀನುಗಾರರ ದೋಣಿ!
ಕರಾವಳಿ ಅಂಚಿಗಿದ್ದ ಹಲವಾರು ಮನೆಗಳು ಭಾರೀ ಪ್ರಮಾಣದಲ್ಲಿ ಹಾನಿ ಅನುಭವಿಸಿವೆ ಎಂದು ಮೂಲಗಳಿಂದ ಗೊತ್ತಾಗಿದೆ.
ಗುಜರಾತ್: ಇದಿನ್ನೂ ಬೀಪರ್ ಜಾಯ್ ಚಂಡಮಾರುತ ಮಾಂಡವೀ ಸಮುದ್ರ ತೀರಕ್ಕೆ ಅಪ್ಪಳಿಸಲಿದೆ ಅಂತ ಸೂಚನೆ ನೀಡುವ ಜೋರು ಗಾಳಿ, ಅಷ್ಟೇ. ಈ ಬಿರುಗಾಳಿಗೆ, ಸೋಮನಾಥ್ ಜಿಲ್ಲೆಯ ಸಮುದ್ರ ತೀರದಲ್ಲಿ ತಲ್ಲಣ ಶುರುವಾಗಿದೆ. ಅರಬ್ಬೀ ಸಮುದ್ರ ತೀರದಲ್ಲಿದ್ದ ಮೀನುಗಾರ ದೋಣಿಯೊಂದು ನೀರಲ್ಲಿ ಬುಡಮೇಲಾಗುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಕರಾವಳಿ ಅಂಚಿಗಿದ್ದ ಹಲವಾರು ಮನೆಗಳು ಭಾರೀ ಪ್ರಮಾಣದಲ್ಲಿ ಹಾನಿ ಅನುಭವಿಸಲಿವೆ ಎಂದು ಮೂಲಗಳಿಂದ ಗೊತ್ತಾಗಿದೆ. ಕೇವಲ ಸೋಮನಾಥ್ ಜಿಲ್ಲೆ ಮಾತ್ರವಲ್ಲ, ರಾಜ್ಯದ ಸಮುದ್ರ ತೀರಕ್ಕಿರುವ ಕಛ್, ಜುನಾಗಢ್, ದ್ವಾರಕಾ, ಪೋರ್ ಬಂದರ್, ಮಾಂಡವಿ, ಗಾಂಧಿನಗರ, ಮೊರ್ಬಿ, ಸೌರಾಷ್ಟ್ರಗಳಲ್ಲೂ ಬೀಪರ್ ಜಾಯ್ ಚಂಡಮಾರುತ ಭಾರೀ ಪ್ರಮಾಣದಲ್ಲಿ ಹಾನಿಯುಂಟು ಮಾಡಬಹುದುದೆಂದು ಹೇಳಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ