ಬೆಂಗಳೂರು: ಬೈಕ್​ಗೆ ಗುದ್ದಿ ಫ್ಲೈಓವರ್​ನಿಂದ ಕೆಳಗೆ ಬಿದ್ದ ಕಾರು, ಐವರಿಗೆ ಗಂಭೀರ ಗಾಯ

| Updated By: ಆಯೇಷಾ ಬಾನು

Updated on: Sep 03, 2024 | 6:49 AM

ಯಶವಂತಪುರ ಸರ್ಕಲ್​ ಬಳಿ ಮುಂಜಾನೆ 3.45ರಲ್ಲಿ ಬೈಕ್​ಗೆ ಗುದ್ದಿದ ಕಾರು ಫ್ಲೈಓವರ್​ನಿಂದ ಕೆಳಗೆ ಬಿದ್ದು ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಇಬ್ಬರು ಯುವಕರು ಮತ್ತು ಓರ್ವ ಯುವತಿ ಸೇರಿ ಮೂವರು, ಬೈಕ್​ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೆಂಗಳೂರು, ಸೆಪ್ಟೆಂಬರ್.03: ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದುರಂತದಲ್ಲಿ ಐವರಿಗೆ ಗಂಭೀರ ಗಾಯಗಳಾಗಿವೆ. ಯಶವಂತಪುರ ಸರ್ಕಲ್​ ಬಳಿ ಮುಂಜಾನೆ 3.45ರಲ್ಲಿ ಬೈಕ್​ಗೆ ಗುದ್ದಿದ ಕಾರು ಫ್ಲೈಓವರ್​ನಿಂದ ಕೆಳಗೆ ಬಿದ್ದು ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು, ಬೈಕ್​ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಐವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಪೊಲೀಸರು, ಸ್ಥಳೀಯರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆಗೆ ತೆರಳುತ್ತಿದ್ದ ಕಾರು ಬೈಕ್​​ಗೆ ಡಿಕ್ಕಿ ಹೊಡೆದು ಫ್ಲೈಓವರ್​​​​​ ಮೇಲೆ ಡಿವೈಡರ್​​​ನಿಂದ ಹಾರಿ ಬಿದ್ದಿದೆ. ತಮಿಳುನಾಡು ನೋಂದಣಿ TN37 DH9484 ಸಂಖ್ಯೆಯ ಕಾರು ಇದಾಗಿದ್ದು ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ