ಅಬ್ಬಬ್ಬಾ…ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ

Updated By: ರಮೇಶ್ ಬಿ. ಜವಳಗೇರಾ

Updated on: Jun 24, 2025 | 9:23 PM

ಬೈಕ್​​ ನಲ್ಲಿ ಒಬ್ಬರು, ಇಬ್ಬರು, ಲಾಸ್ಟ್ ಅಂದ್ರೆ ಮೂವರು ಹೋಗಬಹುದು. ಅದು ತ್ರಿಬಲ್ ರೈಡಿಂಗ್ ಮಾಡುವಮತಿಲ್ಲ. ಸಂಚಾರಿ ನಿಯಮ ಉಲ್ಲಂಘನೆಯಾಗುತ್ತೆ. ಆದರೂ ಸಹ ಸಂಚಾರಿ ನಿಯಮವನ್ನು ಗಾಳಿಗೆ ತೂರಿ ಒಂದೇ ಬೈಕ್ ನಲ್ಲಿ ಐದು ಜನ ಸವಾರಿ ಮಾಡಿದ್ದಾರೆ. ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ಈ ದೃಶ್ಯ ಕಂಡುಬಂದಿದ್ದು, ವಿಡಿಯೋ ವೈರಲ್ ಆಗಿದೆ.

ದಾವಣಗೆರೆ, (ಜೂನ್ 24):ಬೈಕ್​​ ನಲ್ಲಿ ಒಬ್ಬರು, ಇಬ್ಬರು, ಲಾಸ್ಟ್ ಅಂದ್ರೆ ಮೂವರು ಹೋಗಬಹುದು. ಅದು ತ್ರಿಬಲ್ ರೈಡಿಂಗ್ ಮಾಡುವಮತಿಲ್ಲ. ಸಂಚಾರಿ ನಿಯಮ ಉಲ್ಲಂಘನೆಯಾಗುತ್ತೆ. ಆದರೂ ಸಹ ಸಂಚಾರಿ ನಿಯಮವನ್ನು ಗಾಳಿಗೆ ತೂರಿ ಒಂದೇ ಬೈಕ್ ನಲ್ಲಿ ಐದು ಜನ ಸವಾರಿ ಮಾಡಿದ್ದಾರೆ. ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ಈ ದೃಶ್ಯ ಕಂಡುಬಂದಿದ್ದು, ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಬೈಕ್ ಮಾಲೀಕ ದಾವಣಗೆರೆ ನಗರದ ರುದ್ರಚಾರಿ ಅವರಿಗೆ ಪೊಲೀಸರು ಐದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಅಲ್ಲದೇ ರುದ್ರಚಾರಿ ವಿರುದ್ಧ ದಾವಣಗೆರೆ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.