ಇಂದಿನಿಂದ ರಾತ್ರಿ ಕರ್ಫ್ಯೂ ಮತ್ತು ಲಾಕ್​​​ಡೌನ್: ಕೋವಿಡ್-19 ಪಿಡುಗನ್ನು ಶಪಿಸುತ್ತಿರುವ ಹೂವಿನ ವ್ಯಾಪಾರಿಗಳು

ಇಂದಿನಿಂದ ರಾತ್ರಿ ಕರ್ಫ್ಯೂ ಮತ್ತು ಲಾಕ್​​​ಡೌನ್: ಕೋವಿಡ್-19 ಪಿಡುಗನ್ನು ಶಪಿಸುತ್ತಿರುವ ಹೂವಿನ ವ್ಯಾಪಾರಿಗಳು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jan 07, 2022 | 4:14 PM

ಹೂವು ಆಲ್ಪಾಯುಷಿ. ಮರ ಅಥವಾ ಬಳ್ಳಿಯಿಂದ ಕಿತ್ತಿದ ಬಳಿಕ ಎರಡು ದಿನ ಮಾತ್ರ ಅದು ತಾಜಾತನವನ್ನು ಕಾಯ್ದುಕೊಂಡು ಆಮೇಲೆ ಬಾಡಲಾರಂಭಿಸುತ್ತದೆ, ಬಾಡಿದ ಹೂಗಳನ್ನು ಯಾರು ಖರೀದಿಸುವುದಿಲ್ಲ. ಅವುಗಳನ್ನು ದೇವಸ್ಥಾನಗಳಿಗೆ ಕೊಟ್ಟುಬಿಡುತ್ತೇವೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಲಾಕ್​​​ಡೌನ್, ರಾತ್ರಿ ಕರ್ಫ್ಯೂ ಮತ್ತೇ ಇಂದಿನಿಂದ (ಶುಕ್ರವಾರ) ಶುರುವಾಗಲಿವೆ, ಅದರರ್ಥ ಸಾಮಾನ್ಯ ಜನರ ಪರದಾಟ ಮತ್ತು ವ್ಯಾಪಾರಿಗಳ ಗೋಳಾಟ ಆರು ತಿಂಗಳ ಹಿಂದೆ ಇದ್ದ ಹಾಗೆ ಪುನಃ ಆರಂಭವಾಗಲಿವೆ. ಕೋವಿಡ್-19 ಸೋಂಕಿನ ಪ್ರಕರಣಗಳಲ್ಲಿ ಹೆಚ್ಚುತ್ತಾ ಸಾಗಿರುವುದರಿಂದ ಸರ್ಕಾರಗಳಿಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದೆ ದಾರಿಯಿಲ್ಲ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಹೂವಿನ ವ್ಯಾಪಾರಿಗಳು ಕೋವಿಡ್ ಪಿಡುಗಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಹಿಂದಿನ ಎರಡು ಲಾಕ್​ಡೌನ್​ಗಳು ತಮ್ಮ ಬದುಕನ್ನು ಹಾಳು ಮಾಡಿವೆ ಇನ್ನು ಮೂರನೇ ಅಲೆ ಮತ್ತು ಲಾಕ್​ಡೌನ್ ನೊಂದಿಗೆ ಹೇಗೆ ಏಗುವುದು ಅಂತ ಅವರು ಚಿಂತಾಕ್ರಾಂತರಾಗಿದ್ದಾರೆ. ಟಿವಿ9 ಪ್ರತಿನಿಧಿ ಸುನಿಲ್ ಶುಕ್ರವಾರದಂದು ಮಲ್ಲೇಶ್ವರಂನ ಕೆಲ ಹೂವಿನ ವ್ಯಾಪಾರಿಳೊಂದಿಗೆ ಮಾತಾಡಿ ಲಾಕ್ ಡೌನ್ ನಿಂದ ಅಗುವ ಬವಣೆ ಬಗ್ಗೆ ಕೇಳಿದಾಗ ಅವರು ಅದೇ ಮಾತನ್ನು ಹೇಳಿದರು.

ಲಾಕ್​​​ಡೌನ್ ಹೇರಿದಾಗ ಹೂವುಗಳನ್ನು ಸಹ ಅಗತ್ಯ ವಸ್ತುಗಳ ಕೆಟೆಗೆರಿಯಲ್ಲಿ ಸೇರಿಸಿ ವ್ಯಾಪಾರ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದರೂ ಅದರಿಂದ ತಮಗೆ ಏನೂ ಪ್ರಯೋಜನವಾಗದು ಅಂತ ಹೂವಿನ ವ್ಯಾಪಾರಿಗಳು ಹೇಳುತ್ತಾರೆ. ಸರ್ಕಾರ ಲಾಕ್​​​ಡೌನ್ ಘೋಷಿಸಿದಾಗ ಜನ ಮನೆಗಳಿಂದ ಆಚೆ ಬರಲು ಹೆದರುತ್ತಾರೆ. ತಾವು ಅವರನ್ನೇ ನಂಬಿಕೊಂಡು ಬಂಡವಾಳ ಹೂಡಿ ವ್ಯಾಪಾರ ಮಾಡೋದು, ಅವರು ಬರದಿದ್ದರೆ ಹೂವಿನ ಜೊತೆ ತಮ್ಮ ಜೀವನವೂ ಹಾಳಾದಂತೆಯೇ ಅಂತ ಅವರು ಹೇಳುತ್ತಾರೆ.

ಹೂವು ಆಲ್ಪಾಯುಷಿ. ಮರ ಅಥವಾ ಬಳ್ಳಿಯಿಂದ ಕಿತ್ತಿದ ಬಳಿಕ ಎರಡು ದಿನ ಮಾತ್ರ ಅದು ತಾಜಾತನವನ್ನು ಕಾಯ್ದುಕೊಂಡು ಆಮೇಲೆ ಬಾಡಲಾರಂಭಿಸುತ್ತದೆ, ಬಾಡಿದ ಹೂಗಳನ್ನು ಯಾರು ಖರೀದಿಸುವುದಿಲ್ಲ. ಅವುಗಳನ್ನು ದೇವಸ್ಥಾನಗಳಿಗೆ ಕೊಟ್ಟುಬಿಡುತ್ತೇವೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ. ಬದುಕು ಅವರಿಗೆ ನಿಕೃಷ್ಟ.

ಇದನ್ನೂ ಓದಿ:   Viral Video: ಬೀದಿ ಪಾಲಾಗಿ ಫುಟ್​ಪಾತ್​ನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ತಬ್ಬಿಕೊಂಡ ನಾಯಿ; ವಿಡಿಯೋ ವೈರಲ್

Published on: Jan 07, 2022 04:13 PM