ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾರೊಂದರಿಂದ ಕೋಟ್ಯಾಂತರ ಹಣ ಜಪ್ತು, ಹಣ ಸಾಗಿಸುತ್ತಿದ್ದವರು ಪರಾರಿ
ಸ್ಪ್ಯಾನರ್ ಒಂದರಿಂದ ವಿಂಡೋ ಪೇನ್ ಒಡೆದ ಬಳಿಕ ಕಾರನೊಳಗೆ ನೋಟುಗಳಿದ್ದ ಚೀಲಗಳು ಸಿಕ್ಕಿವೆ. ಹಣ ಯಾರಿಗೆ ಸೇರಿದ್ದು, ಎಲ್ಲಿಗೆ ಒಯ್ಯಲಾಗುತಿತ್ತು ಅನ್ನೋದು ಗೊತ್ತಾಗಿಲ್ಲ. ಅದು ಗೊತ್ತಾಗೋದೂ ಇಲ್ಲ ಅನ್ನೋದು ಬೇರೆ ವಿಚಾರ! ಪ್ರತಿ ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಬರಾಮತ್ತು ಮಾಡಿಕೊಳ್ಳುತ್ತಾರೆ, ಕೆಲವು ಸಲ ಹಣ ಸಾಗಿಸುತ್ತಿದ್ದ ಜನ ಕೂಡ ಪೊಲೀಸರ ವಶಕ್ಕೆ ಸಿಗುತ್ತಾರೆ, ಅದರೆ ಹಣದ ವಾರಸುದಾರ ಯಾರು ಅನ್ನೋದು ಗೊತ್ತಾಗಲ್ಲ.
ಬೆಂಗಳೂರು: ಚುನಾವಣಾಧಿಕಾರಿಗಳು (election officials) ಮತ್ತು ನಗರದ ಪೊಲೀಸ್ ಐಷಾರಾಮಿ ಕಾರೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಾಂತರ ಹಣವನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಕಾರನ್ನು ಅಡ್ಡಗಟ್ಟಿದ ಕೂಡಲೇ ಅದರಲ್ಲಿ ಪ್ರಯಾಣಿಸುತ್ತಿದ್ದ ಐವರು ಪರಾರಿಯಾದರೆಂಬ ಮಾಹಿತಿ ಇದೆ. ಘಟನೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ (Bengaluru South LS constituency) ನಡೆದಿದ್ದು ಹಣ ಸಾಗಿಸುತ್ತಿದ್ದವರು ಪರಾರಿಯಾಗುವ (fleeing) ಮುನ್ನ ಕಾರನ್ನು ಲಾಕ್ ಮಾಡಿದ್ದರಿಂದ ಅದನ್ನು ಜಯನಗರ ಪೊಲೀಸ್ ಠಾಣೆಗೆ ಟೋ ಮಾಡಿಕೊಂಡು ಬಂದು ಸ್ಪ್ಯಾನರ್ ಒಂದರಿಂದ ವಿಂಡೋ ಪೇನ್ ಒಡೆದ ಬಳಿಕ ಕಾರನೊಳಗೆ ನೋಟುಗಳಿದ್ದ ಚೀಲಗಳು ಸಿಕ್ಕಿವೆ. ಹಣ ಯಾರಿಗೆ ಸೇರಿದ್ದು, ಎಲ್ಲಿಗೆ ಒಯ್ಯಲಾಗುತಿತ್ತು ಅನ್ನೋದು ಗೊತ್ತಾಗಿಲ್ಲ. ಅದು ಗೊತ್ತಾಗೋದೂ ಇಲ್ಲ ಅನ್ನೋದು ಬೇರೆ ವಿಚಾರ! ಪ್ರತಿ ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಬರಾಮತ್ತು ಮಾಡಿಕೊಳ್ಳುತ್ತಾರೆ, ಕೆಲವು ಸಲ ಹಣ ಸಾಗಿಸುತ್ತಿದ್ದ ಜನ ಕೂಡ ಪೊಲೀಸರ ವಶಕ್ಕೆ ಸಿಗುತ್ತಾರೆ, ಅದರೆ ಹಣದ ವಾರಸುದಾರ ಯಾರು ಅನ್ನೋದು ಗೊತ್ತಾಗಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯಿಂದ ತೇಜಸ್ವೀ ಸೂರ್ಯ ಮತ್ತು ಕಾಂಗ್ರೆಸ್ ನಿಂದ ಸೌಮ್ಯರೆಡ್ಡಿ ಸ್ಪರ್ಧಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುಮಾರಸ್ವಾಮಿಯವರಿಂದ ನೀತಿಸಂಹಿತೆ ಉಲ್ಲಂಘನೆಯಾಗಿದ್ದರೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು: ಚುನಾವಣಾಧಿಕಾರಿ