ಪ್ರಜ್ವಲ್ ರೇವಣ್ಣ ತಮ್ಮ ಚುನಾವಣಾ ಭಾಷಣಗಳಲ್ಲಿ ದೇವೇಗೌಡರನ್ನು ಕೊಂಡಾಡುವುದು ಮರೆಯಲ್ಲ!
ಪಕ್ಷದ ಹಿರಿಯರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಾಗ ತಮ್ಮ ನಿಷ್ಠಾವಂತ ಕಾರ್ಯಕರ್ತರ ವಿಶ್ವಾಸ ಕಳೆದಕೊಂಡೆವೇನೋ ಎಂಬ ಆತಂಕ ಮನೆ ಮಾಡಿತ್ತು ಅದರೆ ತಾನು ಇಂದು ಹಾಸನದಿಂದ ಮಂಚಿನಳ್ಳಿಗೆ ಬರುವಾಗ ಸಾವಿರಾರು ಕಾರ್ಯಕರ್ತರು ಸುಡು ಬಿಸಿಲಲ್ಲಿ ಬೈಕ್ ಱಲಿ ಮಾಡಿದ್ದನ್ನು ಕಂಡು ಕಣ್ಣು ತುಂಬಿಬಂದವು, ಮನದಲ್ಲಿ ಸಾರ್ಥಕತೆಯ ಭಾವ ಮೂಡಿತು ಎಂದು ಪ್ರಜ್ವಲ್ ಹೇಳಿದರು.
ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಇಂದು ಪ್ರಜ್ವಲ್ ರೇವಣ್ಣ (Prajwal Revanna) ಚುನಾವಣಾ ಪ್ರಚಾರ ಮಾಡುವಾಗ ವೇದಿಕೆಯ ಮೇಲೆ ಜೆಡಿಎಸ್ ಪಿತಾಮಹ ಹೆಚ್ ಡಿ ದೇವೇಗೌಡ (HD Devegowda) ಆಸೀನರಾಗಿದ್ದರು. ಪ್ರಜ್ವಲ್ ತಮ್ಮೆಲ್ಲ ಭಾಷಣಗಳಲ್ಲಿ ದೇವೇಗೌಡರ ಗುಣಗಾನ ಮಾಡುತ್ತಾ ಮಾತು ಆರಂಭಿಸುತ್ತಾರೆ. ಇವತ್ತು ಸಹ ಅವರು ಮಾಜಿ ಪ್ರಧಾನಿಯವರು (former Prime Minister) ದ್ವೇಷದ ವಿಷಬೀಜ ಬಿತ್ತುವುದು ಬಿಟ್ಟು, ಅಮೃತ ಹಂಚುವ ಕೆಲಸ ಮಾಡಬೇಕೆಂಬ ಹಿತನುಡಿಯನ್ನು ತಮಗೆ ನೀಡಿದ್ದಾರೆ ಎಂದು ಹೇಳಿದರು. ಪಕ್ಷದ ಹಿರಿಯರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಾಗ ತಮ್ಮ ನಿಷ್ಠಾವಂತ ಕಾರ್ಯಕರ್ತರ ವಿಶ್ವಾಸ ಕಳೆದಕೊಂಡೆವೇನೋ ಎಂಬ ಆತಂಕ ಮನೆ ಮಾಡಿತ್ತು ಅದರೆ ತಾನು ಇಂದು ಹಾಸನದಿಂದ ಮಂಚಿನಳ್ಳಿಗೆ ಬರುವಾಗ ಸಾವಿರಾರು ಕಾರ್ಯಕರ್ತರು ಸುಡು ಬಿಸಿಲಲ್ಲಿ ಬೈಕ್ ಱಲಿ ಮಾಡಿದ್ದನ್ನು ಕಂಡು ಕಣ್ಣು ತುಂಬಿಬಂದವು, ಮನದಲ್ಲಿ ಸಾರ್ಥಕತೆಯ ಭಾವ ಮೂಡಿತು ಎಂದು ಪ್ರಜ್ವಲ್ ಹೇಳಿದರು. ತಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ತಾವ್ಯಾರೂ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ, ಕಳೆದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಆಧಾರವಾಗಿಟ್ಟುಕೊಂಡು ಜನರ ಮತ ಕೇಳೋಣ ಎಂದು ಪ್ರಜ್ವಲ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅಂತ ಹೇಳಲಿಚ್ಛಿಸದ ಪ್ರೀತಂಗೌಡ, ಎನ್ ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಅನ್ನುತ್ತಾರೆ!