‘ಮೆಂತ್ಯೆ ಸೊಪ್ಪಿನ ಸ್ಪೆಷಲ್ ಬಜ್ಜಿ‘ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ರುಚಿ ಸವಿಯಿರಿ
ಇತ್ತೀಚೆಗೆ ಸ್ಪೈಸಿ ತಿಂಡಿಗಳನ್ನು ಹೆಚ್ಚಾಗಿ ಹೊರಗಡೆ ತಿನ್ನುವುದೇ ಆಗಿಬಿಟ್ಟಿದೆ. ಆಮೇಲೆ, ಅನಾರೋಗ್ಯ ಅನ್ನೋದೇ ಆಯ್ತು! ಅದರ ಬದಲು ಮನೆಯಲ್ಲಿಯೇ ತಯಾರಿಸಿದ ಬಿಸಿಬಿಸಿ ಸ್ಪೆಷಲ್ ಅಡುಗೆಯನ್ನು ಈ ಮಳೆಗಾಲದಲ್ಲಿ ತಿನ್ನುತ್ತಿದ್ದರೆ ಅದರ ಖುಷಿಯೇ ಬೇರೆ!
ಕಲ್ಯಾಣ ಕರ್ನಾಟಕದ ಜನರಿಗೆ ಈ ಸ್ಪೆಷಲ್ ಬಜ್ಜಿ ಫೇಮಸ್. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಈ ರೆಸಿಪಿ ತಯಾರಿಸಿ ಸವಿಯುತ್ತಾರೆ. ಸಾಮಾನ್ಯವಾಗಿ ಬಜ್ಜಿ ಅಂದಾಕ್ಷಣ ಮೆಣಸಿನ ಕಾಯಿ ಬಜ್ಜಿ ತಯಾರಿಸುವ ವಿಧಾನ ಗೊತ್ತಿದೆ. ಆದ್ರೆ ಈ ವಿಶೇಷ ಬಜ್ಜಿಯನ್ನು ಚಪಾತಿ, ರಾಗಿಮುದ್ದೆ, ಸಜ್ಜೆ ಕಡುಬಿನ ಜತೆ ಸವಿಯಬಹುದು. ಮಾಡುವ ವಿಧಾನ ತಿಳಿದು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ. ಹೊಸ ಹೊಸ ಖಾದ್ಯಗಳನ್ನು ತಯಾರಿಸಿ ಮನೆಯವರೊಡನೆ ಸವಿಯುವುದು ಖುಷಿ ಕೊಡುವ ವಿಚಾರ ಅಲ್ವೇ?
ಇತ್ತೀಚೆಗೆ ಸ್ಪೈಸಿ ತಿಂಡಿಗಳನ್ನು ಹೆಚ್ಚಾಗಿ ಹೊರಗಡೆ ತಿನ್ನುವುದೇ ಆಗಿಬಿಟ್ಟಿದೆ. ಆಮೇಲೆ, ಅನಾರೋಗ್ಯ ಅನ್ನೋದೇ ಆಯ್ತು! ಅದರ ಬದಲು ಮನೆಯಲ್ಲಿಯೇ ತಯಾರಿಸಿದ ಬಿಸಿ ಬಿಸಿ ಸ್ಪೆಷಲ್ ಅಡುಗೆಯನ್ನು ಈ ಮಳೆಗಾಲದಲ್ಲಿ ತಿನ್ನುತ್ತಿದ್ದರೆ ಅದರ ಖುಷಿಯೇ ಬೇರೆ! ಮನೆಯಲ್ಲಿಯೇ ಬೆಳೆದ ಸೊಪ್ಪುಗಳಿಂದ ಅದೆಷ್ಟೋ ಅಡುಗೆಗಳನ್ನು ಮಾಡಿ ಸವಿಯಬಹುದು. ಈ ಬಾರಿ ಹೇಳಿದ ಮೆಂತ್ಯೆ ಸೊಪ್ಪಿನಿಂದ ತಯಾರಿಸಿದ ವಿಶೇಷ ಬಜ್ಜಿಯನ್ನು ಒಂದು ಬಾರಿಯಾದ್ರೂ ನೀವು ಮನೆಯಲ್ಲಿ ಟ್ರೈ ಮಾಡ್ಲೇಬೇಕು.
ಸ್ಪೆಷಲ್ ಬಜ್ಜಿಗೆ ಬೇಕಾಗುವ ಸಾಮಗ್ರಿಗಳು:
ಅವರೆಕಾಳು, ಶೇಂಗಾ, ಪಾಲಾಕ್, ಮೆಂತ್ಯೆ ಸೊಪ್ಪು, ಹುಣಸೆ ಹಣ್ಣು, ಗ್ರೀನ್ ಚಿಲ್ಲಿ ಪೇಸ್ಟ್, ಕಡಲೆ ಹಿಟ್ಟು, ಕರಿಬೇವು, ಎಣ್ಣೆ, ಶುಂಠಿ ಬೆಳ್ಳುಳ್ಳಿ, ಸಾಸಿವೆ, ಜೀರಿಗೆ, ಅರಿಶಿಣ, ಕೊತ್ತಂಬರಿ, ಉಪ್ಪು. ಇಷ್ಟೇ ಸಾಮಗ್ರಿಗಳು ಸಾಕು ಬಜ್ಜಿ ತಯಾರಿಸಲು.
ಇದನ್ನೂ ಓದಿ:
ಆಷಾಢ ಹಬ್ಬದ ಮದ್ದು ನೀರಿನ ಹಲ್ವಾ; ಔಷಧೀಯ ಗುಣಗಳುಳ್ಳ ಸೊಪ್ಪಿನಿಂದ ತಯಾರಿಸಲಾಗುತ್ತದೆ
ಆಷಾಢ ಹಬ್ಬದ ಮದ್ದು ನೀರಿನ ಜೆಲ್ಲಿ; ಆಟಿ ಸೊಪ್ಪಿನಿಂದ ತಯಾರಿಸಿದ ವಿಶೇಷ ಅಡುಗೆ