ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಬಗ್ಗೆ ಕೇಳಿದಾಗ ರಾಜಣ್ಣ, ವರಿಷ್ಠರು ತೆಪ್ಪಗಿರುವಂತೆ ಹೇಳಿದ್ದಾರೆ ಎಂದರು!

ಅರುಣ್​ ಕುಮಾರ್​ ಬೆಳ್ಳಿ

Updated on: Jul 08, 2024 | 5:06 PM

ಎಲ್ಲರಿಗೂ ಗೊತ್ತಿರುವ ಹಾಗೆ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಚರ್ಚೆ ರಾಜಣ್ಣ ಅವರಿಂದಲೇ ಶುರುವಾಗುತಿತ್ತು. ಶಿವಕುಮಾರ್ ಹೇಳಿಕೆ ನೀಡಕೂಡದೆಂದು ಎಚ್ಚರಿಸಿದ್ದರೂ ರಾಜಣ್ಣ ಅದನ್ನು ನಿಲ್ಲಿಸಿರಲಿಲ್ಲ. ಪ್ರಾಯಶಃ ಮೊನ್ನೆ ದೆಹಲಿಗೆ ಹೋದಾಗ ಶಿವಕುಮಾರ್ ವಿಷಯವನ್ನು ಹೈಕಮಾಂಡ್ ಗಮನಕ್ಕೆ ತಂದಿರಬಹುದು. ಆವಾಗಲೇ ರಾಜಣ್ಣಗೆ ಸಂದೇಶ ರವಾನೆಯಾಗಿರುತ್ತದೆ.

ಬೆಂಗಳೂರು: ಮಾಧ್ಯಮಗಳ ಮುಂದೆ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡಬಾರದು ಅಂತ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚಾಟಿ ಬೀಸಿದ್ದು ಸಹಕಾರ ಸಚಿವ ಕೆ ಎನ್ ರಾಜಣ್ಣ ಮೇಲೆ ಪರಿಣಾಮ ಬೀರಿದಂತಿದೆ. ಇವತ್ತು ನಗರದಲ್ಲಿ ಮಾಧ್ಯಮಗಳ ಜೊತೆ ಮಾತಾಡುವಾಗ ಖುದ್ದು ಅವರೇ ವಿಷಯವನ್ನು ಬಹಿರಂಗ ಪಡಿಸಿದರು. ಕಳೆದ ಸಲ ಸಿದ್ದರಾಮಯ್ಯ ಜನ್ಮದಿನಾಚರಣೆ ಅಂಗವಾಗಿ ಕಾಂಗ್ರೆಸ್ ಪಕ್ಷ ಸಿದ್ದರಾಮೋತ್ಸವ ಅಂತ ಅಹಿಂದ ಸಮಾವೇಶ ನಡೆಸಲಾಗಿತ್ತು. ಈ ಬಾರಿಯೂ ನಡೆಯುತ್ತಾ ಸರ್ ಅಂತ ಕೇಳಿದಾಗ ರಾಜಣ್ಣ, ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಅದನ್ನು ನಡೆಸುವ ಬಗ್ಗೆ ಚಿಂತನೆ ನಡೆದಿದೆಯಾ ಇಲ್ಲವಾ ಅಂತಲೂ ಗೊತ್ತಿಲ್ಲ, ಮಾಹಿತಿ ಸಿಕ್ಕಾಗ ತಿಳಿಸುತ್ತೇನೆ ಅಂತ ಹೇಳಿದರು. ನಂತರ ಮಾಧ್ಯಮ ಪ್ರತಿನಿಧಿಗಳು ನಾಯಕತ್ವ ಬದಲಾವಣೆ ಮತ್ತು ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಬಗ್ಗೆ ಮಾತುಕತೆ ನಡೆದಿದೆಯಾ ಅಂತ ಕೇಳಿದಾಗ ಆ ವಿಷಯದ ಬಗ್ಗೆ ಬಹಿರಂಗವಾಗಿ ಮತಾಡಿ ಗೊಂದಲ ಸೃಷ್ಟಿಸಬಾರದು ಅಂತ ಹೈಕಮಾಂಡ್ ಹೇಳಿದೆ, ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ತಾವೆಲ್ಲ ಅದಕ್ಕೆ ಬದ್ಧರಾಗಿರುವುದಾಗಿ ರಾಜಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ಸಹಕಾರ ಸಚಿವ ಕೆಎನ್ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರಂತೆ!

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.