Anna Bhagya Scheme; ಒಂದು ಕುಟುಂಬದಲ್ಲಿ 5 ಸದಸ್ಯರಿದ್ದರೆ ಸಿದ್ದರಾಮಯ್ಯ ಸರ್ಕಾರ 75 ಕೆಜಿ ಅಕ್ಕಿ ನೀಡಬೇಕು: ಬಸವರಾಜ ಬೊಮ್ಮಾಯಿ, ಶಾಸಕ

|

Updated on: Jun 20, 2023 | 3:55 PM

ಕಾಂಗ್ರೆಸ್ ಪಕ್ಷಕ್ಕೆ ಪ್ರತಿಭಟನೆ ನಡೆಸಲು ಜನ ಅಧಿಕಾರ ನೀಡಿದೆಯಾ ಎಂದು ಬೊಮ್ಮಾಯಿ ಪ್ರಶ್ನಿಸಿದರು.

ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರೆ ನಗರದ ಮತ್ತೊಂದು ಭಾಗದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಸಿದ್ದರಾಮಯ್ಯ ಸರ್ಕಾರದ (Siddaramaiah government) ವಿರುದ್ಧ ಕಿಡಿಕಾರಿದರು. ಜನ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಭಟನೆ ನಡೆಸಲು ಅಧಿಕಾರ ನೀಡಿದೆಯಾ ಎಂದು ಪ್ರಶ್ನಿಸಿದ ಬೊಮ್ಮಾಯಿ, ಕಾಂಗ್ರೆಸ್ ನಾಯಕರು ಅನ್ನಭಾಗ್ಯ ಸ್ಕೀಮ್ (Anna Bhagya scheme) ಜಾರಿಮಾಡಲು ಕುಂಟು ನೆಪಗಳನ್ನು ಹೇಳದೆ ಅದನ್ನು ಅಕ್ಷರಶಃ ಜಾರಿಗೊಳಿಸಬೇಕು ಎಂದರು. ಕಾಂಗ್ರೆಸ್ ನಾಯಕರು ಕುಟುಂಬದ ಪ್ರತಿ ವ್ಯಕ್ತಿಗೆ 10 ಕೇಜಿ ಅಕ್ಕಿ ವಿತರಿಸುವ ಭರವಸೆ ನೀಡಿದೆ, ಹಾಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಜೊತೆ ಕಾಂಗ್ರೆಸ್ ಭರವಸೆಯ 10 ಕೆಜಿ ನೀಡಬೇಕು ಮತ್ತು ಕುಟುಂಬದಲ್ಲಿ 5 ಸದಸ್ಯರಿದ್ದರೆ ಅ ಕುಟುಂಬಕ್ಕೆ 75 ಕೆಜಿ ಅಕ್ಕಿ ನೀಡಬೇಕು, ಸಿದ್ದರಾಮಯ ಅವರಲ್ಲಿ ದಮ್ಮಿದ್ದರೆ, ತಾಕತ್ತಿದ್ದರೆ ನೀಡಲಿ ಎಂದು ಬೊಮ್ಮಾಯಿ ಸವಾಲೆಸೆದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on