ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ, 5-ವರ್ಷ ಕಾಲ ಮುಂದುವರಿಯುತ್ತವೆ: ಸಿದ್ದರಾಮಯ್ಯ

ಅದು ಸರಿ, ಕೋಲಾರದಲ್ಲಿ ಕಾಂಗ್ರೆಸ್ ರಾಜ್ಯ ನಾಯಕರೆಲ್ಲ ಪ್ರಚಾರ ಮಾಡುತ್ತಿದ್ದರೆ ಸ್ಥಳೀಯರೇ ಅಗಿರುವ ಕೆಹೆಚ್ ಮುನಿಯಪ್ಪ ನಾಪತ್ತೆಯಾಗಿದ್ದಾರೆ ಅಂತ ಕೇಳಿದಾಗ ಉತ್ತರಿಸಲು ತಡವರಿಸಿದ ಸಿದ್ದರಾಮಯ್ಯ, ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇರಬಹುದು ಎಂದು ಹಾರಿಕೆ ಉತ್ತರ ನೀಡಿದರು.

ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ, 5-ವರ್ಷ ಕಾಲ ಮುಂದುವರಿಯುತ್ತವೆ: ಸಿದ್ದರಾಮಯ್ಯ
|

Updated on: Apr 06, 2024 | 6:03 PM

ಕೋಲಾರ: ಲೋಕಸಭಾ ಚುನಾವಣೆಯ ನಂತರ ಸಿದ್ದರಾಮಯ್ಯ ಸರ್ಕಾರದ (Siddaramaiah government) ಗ್ಯಾರಂಟಿ ಯೋಜನೆಗಳು (Guarantee schemes) ನಿಂತು ಹೋಗುತ್ತವೆ ಅಂತ ಬಿಜೆಪಿ ನಾಯಕರು ಹೇಳುತ್ತಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಗಮನಕ್ಕೆ ಇಂದು ಕೋಲಾರದಲ್ಲಿ ತಂದಾಗ ಅವರು ಸಿಡುಕಿದರು. ಐದು ವರ್ಷಗಳ ಸರಕಾರ ನಡೆಸಿ ಅಂತ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ, ಕಾಂಗ್ರೆಸ್ 136 ಸೀಟು ಸಿಕ್ಕರೆ ಬಿಜೆಪಿಗೆ 66 ಮತ್ತ್ತು ಜೆಡಿಎಸ್ ಗೆ 19 ಸಿಕ್ಕಿವೆ, ಕಾಂಗ್ರೆಸ್ ಪಕ್ಷದ ವೋಟ್ ಶೇರ್ ಶೇಕಡ 43 ಇದ್ದರೆ ಬಿಜೆಪಿಯದು ಶೇಕಡಾ 36 ಮಾತ್ರ, ಅವರಿಗಿಂತ 7 ಪರ್ಸೆಂಟ್ ಹೆಚ್ಚು ಮತ ನಾವು ಗಳಿಸಿದ್ದೇವೆ, ಮುಂದೆ ನೋಡ್ತಾ ಇರಿ ಇನ್ನೂ ಬಹಳಷ್ಟು ಜನ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದ ಸಿದ್ದರಾಮಯ್ಯ ನಮ್ಮ ಸರ್ಕಾರದ ಯೋಜನೆ 5 ವರ್ಷಗಳ ಕಾಲ ಮುಂದುವರಿಯುತ್ತವೆ ಅಂತ ಹೇಳಿದರು. ಅದು ಸರಿ, ಕೋಲಾರದಲ್ಲಿ ಕಾಂಗ್ರೆಸ್ ರಾಜ್ಯ ನಾಯಕರೆಲ್ಲ ಪ್ರಚಾರ ಮಾಡುತ್ತಿದ್ದರೆ ಸ್ಥಳೀಯರೇ ಅಗಿರುವ ಕೆಹೆಚ್ ಮುನಿಯಪ್ಪ ನಾಪತ್ತೆಯಾಗಿದ್ದಾರೆ ಅಂತ ಕೇಳಿದಾಗ ಉತ್ತರಿಸಲು ತಡವರಿಸಿದ ಸಿದ್ದರಾಮಯ್ಯ, ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇರಬಹುದು ಎಂದು ಹಾರಿಕೆ ಉತ್ತರ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಬಿಜೆಪಿ ಸುಳ್ಳುಗಳ ಮೇಲೆ ಪ್ರಚಾರ ಮಾಡಿದರೆ ನಾವು ಸತ್ಯವನ್ನು ಆಧಾರವಾಗಿಸಿಕೊಂಡು ಪ್ರಚಾರ ಮಾಡುತ್ತೇವೆ: ಸಿದ್ದರಾಮಯ್ಯ

Follow us