ಬಾಗಲಕೋಟೆ: ಸ್ನೇಹಿತನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಗರು

| Updated By: ಗಂಗಾಧರ​ ಬ. ಸಾಬೋಜಿ

Updated on: Nov 18, 2024 | 2:58 PM

ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ ಗ್ರಾಮದಲ್ಲಿ ನಡೆದ ವೆಂಕಟೇಶ್ ಮೇಟಿ ಮತ್ತು ಕಾವ್ಯಾ ಅವರ ಮದುವೆಯಲ್ಲಿ ಜರ್ಮನಿಯಿಂದ ಬಂದ 12 ಯುವಕ-ಯುವತಿಯರು ಭಾಗವಹಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ನೃತ್ಯ ಮಾಡಿದ್ದಾರೆ. ವೆಂಕಟೇಶ್ ಜರ್ಮನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ತನ್ನ ಹುಟ್ಟೂರಿನಲ್ಲಿಯೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಬಾಗಲಕೋಟೆ, ನವೆಂಬರ್​ 18: ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ ಗ್ರಾಮದ ವೆಂಕಟೇಶ್ ಮೇಟಿ-ಕಾವ್ಯಾ ಎಂಬುವರ ಮದುವೆ (Wedding) ಕಾರ್ಯ ಕ್ರಮದಲ್ಲಿ ವಿದೇಶಿಗರು ಕುಣಿದು ಕುಪ್ಪಳಿಸಿದ್ದಾರೆ. ಜರ್ಮನಿಯಲ್ಲಿ ಸಾಪ್ಟವೇರ್ ಇಂಜಿನಿಯರ್ ಆಗಿರುವ ವೆಂಕಟೇಶ್ ಮೇಟಿ, ತಾನು ಹುಟ್ಟಿದ ಊರಲ್ಲೇ ಮದುವೆ ಆಗಲು ನಿರ್ಧರಿಸಿದ್ದರು. ಹೀಗಾಗಿ ಮದುವೆಗೆ ನಾಲ್ಕು ದಿನ ಮುನ್ನವೇ ಯುರೋಪಿಯನ್​ 12 ಯುವಕ ಯುವತಿಯರು ಆಗಮಿಸಿದ್ದಾರೆ. ಗೆಳೆಯನ ಮದುವೆಯಲ್ಲಿ ದೇಶಿ ಸಾಂಪ್ರದಾಯಿಕ ಶೈಲಿಯಲ್ಲಿ ಉಡುಗೆ ತೊಟ್ಟು ಮದುವೆ ಮಂಟಪದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.