ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪಿ ನಿಖಿಲ್ ಕುಮಾರಸ್ವಾಮಿ ಮನೆಯಲ್ಲೂ ಸರ್ಚ್ ಆಪರೇಶನ್!

| Updated By: Digi Tech Desk

Updated on: Oct 26, 2023 | 12:39 PM

ಈ ಸರ್ಚ್ ಆಪರೇಶನ್ ನಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗದ ವಿಷಯವೇನು ಗೊತ್ತಾ? ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಪ್ರಕರಣ ಇಷ್ಟೆಲ್ಲ ಸೀರಿಯಸ್ಸಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಆರೋಪಿಗಳು ಇನ್ನೂ ಅದನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆಯೇ? ಕಳ್ಳನ ಕೈಗೆ ಹಗ್ಗ ಕೊಟ್ಟಂತಲ್ಲವೇ ಇದು?

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪುತ್ರ ನಿಖಿಲ್ ಕುಮಾರಸ್ವಾಮಿಗೂ (Nikhil Kumaraswamy) ಹುಲಿ ಉಗುರಿನ ಕಂಟಕ (tiger claw pendant) ಎದುರಾಗಿದೆ. ನಿಖಿಲ್ ಮೇಲೂ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪವಿದೆ. ಹಾಗಾಗೇ, ಅರಣ್ಯಾಧಿಕಾರಿಗಳು ನಗರದ ಜೆಪಿ ನಗರದಲ್ಲಿರುವ ನಿಖಿಲ್ ಮನೆಯಲ್ಲಿ ಸರ್ಚ್ ಆಪರೇಶನ್ ನಡೆಸಲು ಅಗಮಿಸಿದ್ದಾರೆ. ಇಲಾಖೆಗೆ ಸೇರಿದ ವಾಹನವೊಂದರಲ್ಲಿ ಮೂವರು ಪುರುಷ ಮತ್ತು ಒಬ್ಬ ಮಹಿಳಾ ಅಧಿಕಾರಿ ಆಗಮಿಸುವುದನ್ನು ಇಲ್ಲಿ ನೋಡಬಹುದು. ನಿಖಿಲ್ ಮನೆ ಅರಮನೆಯಂತಿದೆ ಮಾರಾಯ್ರೇ! ಮನೆಯಲ್ಲಿ ಸಾಕಷ್ಟು ಜನ ಕೂಡ ಇದ್ದಾರೆ, ಹೆಚ್ಚಿನವರು ಪಕ್ಷದ ಕಾರ್ಯಕರ್ತರಾಗಿರುತ್ತಾರೆ. ಮನೆ ಹೊರಗಡೆ ಕಟ್ಟೆಯ ಮೇಲೆ ಬಂದೂಕೊಂದು ಕಾಣುತ್ತದೆ. ಪ್ರಾಯಶಃ ನಿಖಿಲ್ ಗನ್ಮ್ಯಾನ್ ಅದನ್ನು ಅಲ್ಲೇ ಬಿಟ್ಟು ಅರಣ್ಯಾಧಿಕಾರಿಗಳು ಬಂದಿರುವುದನ್ನು ತಿಳಿಸಲು ಒಳಗೆ ಹೋಗಿರಬಹುದು. ಈ ಸರ್ಚ್ ಆಪರೇಶನ್ ನಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗದ ವಿಷಯವೇನು ಗೊತ್ತಾ? ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಪ್ರಕರಣ ಇಷ್ಟೆಲ್ಲ ಸೀರಿಯಸ್ಸಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಆರೋಪಿಗಳು ಇನ್ನೂ ಅದನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆಯೇ? ಕಳ್ಳನ ಕೈಗೆ ಹಗ್ಗ ಕೊಟ್ಟಂತಲ್ಲವೇ ಇದು?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 25, 2023 07:29 PM