ರಾಕ್​ಲೈನ್ ವೆಂಕಟೇಶ್ ಮನೆ ಪರಿಶೋಧಿಸಿದ ಅಧಿಕಾರಿಗಳು ಹೇಳಿದ್ದು ಹೀಗೆ

ರಾಕ್​ಲೈನ್ ವೆಂಕಟೇಶ್ ಮನೆ ಪರಿಶೋಧಿಸಿದ ಅಧಿಕಾರಿಗಳು ಹೇಳಿದ್ದು ಹೀಗೆ

ಮಂಜುನಾಥ ಸಿ.
|

Updated on: Oct 25, 2023 | 9:11 PM

Tiger Claw: ಹುಲಿ ಉಗುರು ದೊಡ್ಡ ಸಂಚಲನವನ್ನೇ ಎಬ್ಬಿಸಿದೆ. ನಟರಾದ ದರ್ಶನ್, ಜಗ್ಗೇಶ್, ರಾಕ್​ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ ಅವರುಗಳ ಮನೆಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ರಾಕ್​ಲೈನ್ ವೆಂಕಟೇಶ್ ಮನೆಯಲ್ಲಿ ಶೋಧ ನಡೆಸಿದ ಬಳಿಕ ಅಧಿಕಾರಿಗಳು ಹೀಗೆ ಹೇಳಿದರು.

ಬಿಗ್​ಬಾಸ್ (Bigg Boss) ಸ್ಪರ್ಧಿ ವರ್ತೂರು ಸಂತೋಶ್ ಹುಲಿ ಉಗುರು ಧರಿಸಿದ್ದ ಕಾರಣ ಅವರನ್ನು ಬಂಧಿಸಿದ ಬಳಿಕ ಆ ವಿವಾದ ದೊಡ್ಡ ಸಂಚಲನ ಎಬ್ಬಿಸಿದೆ. ನಟ ಜಗ್ಗೇಶ್, ದರ್ಶನ್, ರಾಕ್​ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ, ಕೆಲವು ಸ್ವಾಮೀಜಿಗಳು ಸಹ ಹುಲಿ ಉಗುರು ಧರಿಸಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆ ಬಗ್ಗೆಯೂ ತನಿಖೆಗೆ ಒತ್ತಾಯಿಸಲಾಗಿತ್ತು. ಇಂದು ಅರಣ್ಯ ಇಲಾಖೆ ಅಧಿಕಾರಿಗಳು ಹಲವು ಸೆಲೆಬ್ರಿಟಿಗಳಿಗೆ ನೊಟೀಸ್ ನೀಡಿ ಶೋಧ ಕಾರ್ಯ ನಡೆಸಿದ್ದಾರೆ. ರಾಕ್​ಲೈನ್ ವೆಂಕಟೇಶ್ ಮನೆಯ ಮೇಲೆಯೂ ದಾಳಿ ನಡೆಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಮನೆಯಲ್ಲಿ ಯಾವುದೇ ಹುಲಿ ಉಗುರು ಪತ್ತೆಯಾಗಿಲ್ಲ, ರಾಕ್​ಲೈನ್ ಅವರು ವಿದೇಶ ಪ್ರವಾಸದಲ್ಲಿದ್ದು ಅವರು ಬಂದ ಬಳಿಕ ವಿಚಾರಣೆ ಮುಂದುವರೆಸುತ್ತೇವೆ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ